ETV Bharat / international

ರಷ್ಯಾ ಪ್ರತಿಪಕ್ಷದ ನಾಯಕ ನವಲ್ನಿ ಸಾವು: ಈ ಸಾವಿಗೆ ಪುಟಿನ್ ಕಾರಣ ಎಂದ ಜೋ ಬೈಡನ್​

author img

By ANI

Published : Feb 17, 2024, 6:48 AM IST

Updated : Feb 17, 2024, 7:25 AM IST

Putin responsible for Navalny's death: US President Joe Biden
ರಷ್ಯಾ ಪ್ರತಿಪಕ್ಷದ ನಾಯಕ ನವಲ್ನಿ ಸಾವು: ಈ ಸಾವಿಗೆ ಪುಟಿನ್ ಕಾರಣ ಎಂದ ಜೋ ಬೈಡನ್​

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಅವರ ಬಹುದೊಡ್ಡ ಟೀಕಾಕಾರ, ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರು ನಿನ್ನೆ ಜೈಲಿನಲ್ಲೇ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ವಿಶ್ವನಾಯಕರು ಸಂತಾಪ ಸೂಚಿಸುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಷಿಂಗ್ಟನ್( ಅಮೆರಿಕ): ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಜೈಲಿನಲ್ಲೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ಅವರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಆರೋಪಿಸಿದ್ದಾರೆ. ಅವರ ಸಾವಿನಿಂದ ನಾನು ತೀವ್ರವಾಗಿ ಕ್ರೋಧಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ನವಲ್ನಿಯ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷರು, "ಅವರ ಸಾವಿನ ವರದಿಗಳು ನಿಜವಾಗಿದ್ದರೆ ಅದಕ್ಕೆ ಪುಟಿನ್​ ಅವರೇ ಕಾರಣ, ಅಷ್ಟಕ್ಕೂ ಸಾವಿನ ವರದಿಯನ್ನು ಅಲ್ಲ ಎಂದು ನಂಬಲು ತಮಗೆ ಬೇರೆ ಯಾವುದೇ ಕಾರಣಗಳಿಲ್ಲ ಎಂದೂ ಅವರು ಹೇಳಿದ್ದಾರೆ. ಆದರೆ ನವಲ್ನಿ ಅವರ ಸಾವಿನ ಬಗ್ಗೆ ಬೇರೆಯದೇ ಆದ ಕಾರಣ ಹೇಳಲು ರಷ್ಯಾದ ಅಧಿಕಾರಿಗಳು ಹೊರಟಿದ್ದಾರೆ. ಈ ಬಗ್ಗೆ ನಾನು ಹೇಳುವುದಿಷ್ಟೇ ಇದಕ್ಕೆ ಪುಟಿನ್​ ಅವರೇ ಜವಾಬ್ದಾರರು ಎಂದು ಬೈಡನ್​ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಪಕ್ಷ ನಾಯಕ ನವಲ್ನಿ ಸಾವು ಪುಟಿನ್ ಕ್ರೌರ್ಯಕ್ಕೆ ಅತಿದೊಡ್ಡ ಪುರಾವೆಯಾಗಿದೆ ಎಂದು ಹೇಳಿದ್ದಾರೆ.

ರಷ್ಯಾದ ಕ್ರಮ್ಲಿನ್​​​​ ಬಗ್ಗೆ ಬಹಿರಂಗವಾಗಿ ಮಾತನಾಡುವ ಏಕೈಕ ನಾಯಕ ಎಂದರೆ ಅದು ಅಲೆಕ್ಸಿ ನವಲ್ನಿ ಮಾತ್ರವೇ ಆಗಿದ್ದರು. ಪುಟಿನ್​ ಅವರ ಸಮರ್ಥ ಎದುರಾಳಿ ಆಗಿದ್ದ ಅಲೆಕ್ಸಿ ನವಲ್ನಿ ಅಸಾಧಾರಣ ಹೋರಾಟಗಾರರಾಗಿದ್ರು. ಜೈಲಿನಲ್ಲಿ ಬಂಧಿಯಾಗಿದ್ದ ಅವರು ಶುಕ್ರವಾರ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಈ ಸಾವು ವಿಶ್ವಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಈ ಬಗ್ಗೆ ವಿಶ್ವದ ಇತರ ನಾಯಕರು ಖಂಡಿಸುತ್ತಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಇತರ ದೇಶಗಳ ನಾಗರಿಕರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ, ತಮ್ಮದೇ ದೇಶದ ನಾಯಕರು ಹಾಗೂ ಅವರ ವಿರೋಧಿಗಳನ್ನು ಅವರು ಮುಗಿಸುತ್ತಿದ್ದಾರೆ. ಇನ್ನು ಉಕ್ರೇನ್​ನಲ್ಲಿ ಅವರು ನರಮೇಧವನ್ನೇ ಮಾಡುತ್ತಿದ್ದಾರೆ. ಈಗ ಅವರ ಬಹುದೊಡ್ಡ ಟೀಕಾಕಾರ ನವಲ್ನಿ ಮೃತಪಟ್ಟಿದ್ದಾರೆ. ಅಲೆಕ್ಸಿ ನವಲ್ನಿ ಅವರ ಸಾವಿಗೆ ಇಡೀ ರಷ್ಯಾ ಶೋಕಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷರು ಪುಟಿನ್​ ವಿರುದ್ಧ ಹರಿಹಾಯ್ದಿದ್ದಾರೆ.

ಪುಟಿನ್​ ಅವರ ಬಹುದೊಡ್ಡ ಟೀಕಾಕಾರರಾಗಿದ್ದ ನವಲ್ನಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಜೈಲಿಗೆ ಅಟ್ಟಲಾಗಿತ್ತು. ಇಷ್ಟಾದರೂ ಪುಟಿನ್​ ಸರ್ಕಾರದ ಎಲ್ಲ ಕೆಟ್ಟ ಕೆಲಸಗಳನ್ನು ಯಾವುದೇ ಅಂಜಿಕೆ ಇಲ್ಲದೇ ನವಲ್ನಿ ಟೀಕಿಸುತ್ತಿದ್ದರು. ಧೈರ್ಯದಿಂದಲೇ ಪುಟಿನ್​ ಅವರನ್ನು ಅವರು ಎದುರಿಸಿದ್ದರು. ನವಲ್ನಿ ದೇಶಭ್ರಷ್ಟರಾಗಿ ಸುರಕ್ಷಿತವಾಗಿ ಬದುಕಬಹುದಿತ್ತು ಎಂದಿರುವ ಅಮೆರಿಕ ಅಧ್ಯಕ್ಷರು, ಆದರೆ ರಷ್ಯಾಗೆ ಮರಳಿ ಜೈಲಿನಲ್ಲಿದ್ದುಕೊಂಡೇ ಪುಟಿನ್ ಅವರ ವಿರುದ್ಧ ಹೋರಾಟ ಆರಂಭಿಸಿದ್ದರು. ಇಂತಹ ಹೋರಾಟಗಾರನನ್ನು ಇದೀಗ ಜೈಲಿನಲ್ಲೇ ಕೊಲ್ಲಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ

ಪ್ರಪಂಚದಾದ್ಯಂತ ಲಕ್ಷಾಂತರ ಜನರಂತೆ, ಅಲೆಕ್ಸಿ ನವಲ್ನಿಯವರ ಸಾವಿನಿಂದ ನಾನು ಅಕ್ಷರಶಃ ಆಶ್ಚರ್ಯ ಮತ್ತು ಆಕ್ರೋಶಗೊಂಡಿಲ್ಲ. ಅವರು ಭ್ರಷ್ಟಾಚಾರ ಮತ್ತು ಪುಟಿನ್ ಸರ್ಕಾರ ಮಾಡುತ್ತಿರುವ ಎಲ್ಲಾ ಕೆಟ್ಟ ಕೆಲಸಗಳನ್ನು ಧೈರ್ಯದಿಂದ ಎದುರಿಸಿದರು. ಇದಕ್ಕೆ ಪ್ರತಿಯಾಗಿ, ಪುಟಿನ್ ಅವರಿಗೆ ವಿಷ ಹಾಕಿದರು, ಅವರನ್ನು ಬಂಧಿಸಿದರು. ಸುಳ್ಳು ಆರೋಪ ಹೊರೆಸಿ ವಿಚಾರಣೆಗೆ ಒಳಪಡಿಸಿದರು. ಅವರನ್ನ ವಿನಾಕಾರಣ ಜೈಲಿಗೆ ಹಾಕಿ ಶಿಕ್ಷೆ ವಿಧಿಸಿದರು. ಇಷ್ಟಾದರೂ ಜೈಲಿನಲ್ಲಿಯೂ ಸತ್ಯಕ್ಕಾಗಿ ನವಲ್ನಿ ಪ್ರಬಲ ಧ್ವನಿ ಎತ್ತಿದರು ಎಂದು ರಷ್ಯಾ ಪ್ರತಿಪಕ್ಷ ನಾಯಕನ ಹೋರಾಟವನ್ನು ಬೈಡನ್​ ಬಣ್ಣಿಸಿದ್ದಾರೆ.

ಇದನ್ನು ಓದಿ: ಪೋರ್ನ್​​ಸ್ಟಾರ್​ಗೆ ಹಣ ನೀಡಿದ ಆರೋಪ: ಟ್ರಂಪ್​​​ ಮನವಿ ತಿರಸ್ಕರಿಸಿ, ವಿಚಾರಣೆಗೆ ದಿನಾಂಕ ನಿಗದಿ ಮಾಡಿದ ಕೋರ್ಟ್

Last Updated :Feb 17, 2024, 7:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.