ETV Bharat / international

ಮಿಲಿಟರಿ ಸಹಕಾರ ಇನ್ನಷ್ಟು ಹೆಚ್ಚಳ ಮಾಡುವ ಕುರಿತು ಭಾರತ- ಅಮೆರಿಕ ಚರ್ಚೆ

author img

By ETV Bharat Karnataka Team

Published : Feb 22, 2024, 7:35 AM IST

ಪರಸ್ಪರ ರಕ್ಷಣಾ ಸಹಕಾರ ಮತ್ತು ಅದರ ಹೆಚ್ಚಳ ಕುರಿತಂತೆ ಭಾರತ ಹಾಗೂ ಅಮೆರಿಕ ಮಹತ್ವದ ಚರ್ಚೆ ನಡೆಸಿವೆ.

India, US discuss enhancing defence co-production
ಮಿಲಿಟರಿ ಸಂಬಂಧ ಚರ್ಚೆ ನಡೆಸಿದ ಭಾರತ-ಯುಎಸ್

ನವದೆಹಲಿ: ಭಾರತೀಯ ರಕ್ಷಣಾ ಸಚಿವಾಲಯ ಹಾಗೂ ಅಮೆರಿಕದ ಸೇನಾ ಇಲಾಖೆ ಬುಧವಾರದಂದು ನವದೆಹಲಿಯಲ್ಲಿ ನಡೆದ ಎರಡನೇ ಭಾರತ-ಯುಎಸ್ ಡಿಫೆನ್ಸ್ ಆಕ್ಸಲರೇಶನ್ ಎಕೋಸಿಸ್ಟಮ್ (INDUS-X) ಶೃಂಗಸಭೆಯಲ್ಲಿ ಭಾಗವಹಿಸಿತು. ಮಿಲಿಟರಿ ಸಂಬಂಧ ಚರ್ಚೆ ನಡೆಸಿತು. ಉಭಯ ರಾಷ್ಟ್ರಗಳ ಸಹಭಾಗಿತ್ವದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು, ಮಿಲಿಟರಿ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ವಿಸ್ತರಣೆ ಮಾಡುವ ಕುರಿತಂತೆ ಮಹತ್ವದ ಮಾತುಕತೆ ನಡೆಯಿತು.

ಬುಧವಾರ ನಡೆದ ಈ ಭಾರತ ಮತ್ತು ಅಮೆರಿಕ​ ನಡುವಿನ ಶೃಂಗಸಭೆಯಲ್ಲಿ, ಸುಧಾರಿತ ಮಿಲಿಟರಿ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳುವುದು ಹಾಗೂ ಸ್ಥಿತಿಸ್ಥಾಪಕತ್ವವುಳ್ಳ ರಕ್ಷಣಾ ಪೂರೈಕೆ ಸರಪಳಿಗಳನ್ನು ರಚಿಸುವ ಸಂಬಂಧ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮೂಲ INDUS-X ಸಹಯೋಗದ ಕಾರ್ಯಸೂಚಿಯಿಂದ ಪ್ರೇರಿತವಾದ ಹಲವಾರು ವಿಷಯಗಳ ಮೇಲೆ ಸಮಾಲೋಚನೆಗಳನ್ನು ನಡೆಸಲಾಯಿತು. ರಕ್ಷಣಾ ಕೈಗಾರಿಕಾ ಪಾಲುದಾರಿಕೆಗಳನ್ನು ಅಭಿವೃದ್ಧಿ ಪಡಿಸುವುದು, ಕೊಲಾಬರೇಟಿವ್​ ಸಂಶೋಧನೆ ಮತ್ತು ಪರೀಕ್ಷಾ ಸೌಲಭ್ಯವನ್ನು ಹೆಚ್ಚಿಸುವುದು, ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳನ್ನು ಬೆಂಬಲಿಸಲು ಖಾಸಗಿ ಬಂಡವಾಳವನ್ನು ಸೃಷ್ಟಿಸುವುದು ಮತ್ತು ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸುವುದು ಸೇರಿದಂತೆ ಹಲವು ವಿಚಾರಗಳ ಮೇಲೆ ಫಲಪ್ರದವಾದ ಮಾತುಕತೆ ನಡೆದವು ಎಂದು ಅಮೆರಿಕದ ರಕ್ಷಣಾ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶೃಂಗಸಭೆಯು, ಜಂಟಿ ಸವಾಲುಗಳನ್ನು ಒಳಗೊಂಡಂತೆ INDUS-X ಅಡಿಯಲ್ಲಿ ಆದ್ಯತೆಯ ಪ್ರಯತ್ನಗಳ ಕುರಿತು ಕೆಲ ಘೋಷಣೆಗಳನ್ನು ಸಹ ಒಳಗೊಂಡಿತ್ತು. ಡಿಫೆನ್ಸ್ ಇನ್ನೋವೇಶನ್ ಯುನಿಟ್ (DIU) ಮತ್ತು ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (iDEX) ಮೊದಲ ಎರಡು INDUS-X ಜಂಟಿ ಸವಾಲುಗಳ ಬಗ್ಗೆಯೂ ಚರ್ಚೆಯಲ್ಲಿ ಪ್ರಸ್ತಾಪ ಮಾಡಲಾಯಿತು.

ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ 'ಇಂಡಿಯಾ' ಮೈತ್ರಿ ಪಕ್ಕಾ: ಕಾಂಗ್ರೆಸ್​ಗೆ 17 ಕ್ಷೇತ್ರ, 63 ಕ್ಷೇತ್ರಗಳಲ್ಲಿ ಎಸ್‌ಪಿ, ಮಿತ್ರಪಕ್ಷಗಳ ಸ್ಪರ್ಧೆ

ಮಿಲಿಟರಿ ಸೇವಾ ಪಾಲುದಾರರು ಮತ್ತು ಎರಡೂ ಸರ್ಕಾರಗಳಿಂದ ಬೆಂಬಲಿತವಾದ ಸ್ಪರ್ಧಾತ್ಮಕ ಪ್ರಕ್ರಿಯೆಯಲ್ಲಿ, 10 ಅಮೆರಿಕ​ ಮತ್ತು ಭಾರತೀಯ ಕಂಪನಿಗಳು, ಸಮುದ್ರದೊಳಗಿನ ಸಂವಹನ ಮತ್ತು ಕಡಲ ಗುಪ್ತಚರ, ಕಣ್ಗಾವಲುಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು USD 1 ಮಿಲಿಯನ್ ಆರ್ಡರ್​ ಪಡೆದುಕೊಂಡಿವೆ.

ಇದನ್ನೂ ಓದಿ : ಕಾಂಗ್ರೆಸ್​ ಬ್ಯಾಂಕ್​ ಖಾತೆಗಳಿಂದ ₹ 65 ಕೋಟಿ ವಿತ್​ಡ್ರಾಗೆ ಸೂಚನೆ: ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದ ಮಾಕೇನ್

ರಕ್ಷಣಾ ಸಚಿವಾಲಯ ಮತ್ತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ , ಹೂಡಿಕೆದಾರರು ಮತ್ತು ವಿಶ್ವವಿದ್ಯಾನಿಲಯಗಳ ನಡುವಿನ ಪಾಲುದಾರಿಕೆಯನ್ನು ಹೆಚ್ಚಿಸಲು 2023ರ ಜೂನ್ ನಲ್ಲಿ ದ್ವಿಪಕ್ಷೀಯ ಉಪಕ್ರಮವಾದ 'INDUS-X' ಅನ್ನು ಪ್ರಾರಂಭ ಮಾಡಲಾಗಿತ್ತು. ಇದರಡಿ ಹಲವು ಸಭೆಗಳು ನಡೆಯುತ್ತಿದ್ದು, ರಕ್ಷಣಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ಪಾಲುದಾರಿಕೆ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.