ETV Bharat / international

ಗಾಜಾದಲ್ಲಿನ ನರಮೇಧ ಬೆಂಬಲಿಸುತ್ತಿದೆ ಎಂಬ ಆರೋಪ ತಳ್ಳಿ ಹಾಕಿದ ಜರ್ಮನಿ ​ - Germany Denies Allegations

author img

By ETV Bharat Karnataka Team

Published : Apr 10, 2024, 10:03 AM IST

ಗಾಜಾದಲ್ಲಿನ ನರಮೇಧವನ್ನು ಬೆಂಬಲಿಸುತ್ತಿದೆ ಎಂಬ ಆರೋಪವನ್ನು ಜರ್ಮನಿ ತಳ್ಳಿಹಾಕಿದೆ. ​

ಗಾಜಾದಲ್ಲಿನ ನರಮೇಧ ಬೆಂಬಲಿಸುತ್ತಿದೆ ಎಂಬ ಆರೋಪ ತಳ್ಳಿ ಹಾಕಿದ ಜರ್ಮನಿ ​
ಗಾಜಾದಲ್ಲಿನ ನರಮೇಧ ಬೆಂಬಲಿಸುತ್ತಿದೆ ಎಂಬ ಆರೋಪ ತಳ್ಳಿ ಹಾಕಿದ ಜರ್ಮನಿ ​

ಬೆರ್ಲಿನ್​ (ಜರ್ಮನಿ): ಜರ್ಮನಿ ದೇಶವು ಇಸ್ರೇಲ್​ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಗಾಜಾದಲ್ಲಿ ನರಮೇಧವನ್ನು ಬೆಂಬಲಿಸುತ್ತಿದೆ ಎಂಬ ಆರೋಪವನ್ನು ಜರ್ಮನಿ​ ತಳ್ಳಿ ಹಾಕಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಈ ಸಂಬಂಧ ಮಧ್ಯ ಅಮೆರಿಕದ ನಿಕರಾಗುವಾ ರಾಷ್ಟ್ರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿತ್ತು. ಇದನ್ನು ನಿರಾಕರಿಸಿರುವ ಜರ್ಮನಿ, ಸರಿಯಾದ ಆಧಾರಗಳಿಲ್ಲದೇ ಮಾಡಿರುವ ಆರೋಪ ಇದಾಗಿದ್ದು, ಕೂಡಲೇ ಈ ಮೊಕದ್ದಮ್ಮೆ ಅರ್ಜಿಯನ್ನು ವಜಾಗೊಳಿಸಿಬೇಕೆಂದು ಜರ್ಮನಿ ವಿದೇಶಾಂಗ ಸಚಿವಾಲಯದ ಕಾನೂನು ಸಲಹೆಗಾರರಾದ ತಾನಿಯಾ ವಾನ್ ಉಸ್ಲರ್-ಗ್ಲೀಚೆನ್ ಅವರು ಮಂಗಳವಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕಾನೂನು ನೀತಿ ನಿಯಮಗಳ ಪ್ರಕಾರವೇ ಶಸ್ತಾಸ್ತ್ರ ರಫ್ತು ಮಾಡಲಾಗಿದೆ. ಅದಾಗ್ಯೂ ಯುದ್ದಕ್ಕೆ ಬೇಕಾದ ಸಾಮಾನ್ಯ ಸಾಧನಗಳಾದ ಹೆಲ್ಮೆಟ್‌, ಜಾಕೆಟ್, ಬೈನಾಕ್ಯುಲರ್​​ಗಳನ್ನು ಮಾತ್ರವೇ ರಫ್ತು ಮಾಡಲಾಗಿದೆ. ಇಸ್ರೇಲ್​ ಕೂಡ ಶಸ್ತ್ರಾಸ್ತ್ರ ಸಾಗಣೆಯಲ್ಲಿ ನಮ್ಮೊಂದಿಗೆ ಶೇಕಡಾ 98 ರಷ್ಟು ಪಾಲು ಹೊಂದಿದೆ. ಹಾಗಾಗಿ ಜರ್ಮನಿಯು ಇಸ್ರೇಲ್‌ನ ಭದ್ರತೆಗೆ ಆದ್ಯತೆ ನೀಡಿ ಸಾಮಾನ್ಯ ಪರಿಕರಗಳನ್ನು ರಫ್ತು ಮಾಡಲಾಗಿದೆ ಎಂದು ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು.

ಅದರಲ್ಲೂ ನಾವು ಕಳುಹಿಸಿರುವ ಯುದ್ದ ಪರಿಕರಗಳನ್ನು ಸೇನಾ ತರಬೇತಿಗೆ ಮಾತ್ರ ಬಳಸಲಾಗುತ್ತಿದೆ. ಹಾಗಾಗಿ ಸರಿಯಾದ ಆಧಾರಗಳಿಲ್ಲದೇ ಮಾಡಿರುವ ಆರೋಪ ಇದಾಗಿದೆ ಎಂದು ವಾನ್ ಉಸ್ಲರ್ - ಗ್ಲೀಚೆನ್ ಹೇಳಿದ್ದಾರೆ. ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ದ 6 ತಿಂಗಳುಗಳನ್ನು ಪೂರ್ಣಗೊಳಿಸಿದೆ. ಇಸ್ರೇಲ್ ತನ್ನ ಆರು ತಿಂಗಳ ದಾಳಿಯ ಸಮಯದಲ್ಲಿ ಹಲವಾರು ಪ್ಯಾಲೇಸ್ಟಿನಿಯನ್ ನಾಗರಿಕರನ್ನು ಕೊಂದಿದೆ. ಇದಕ್ಕೆ ಜರ್ಮನಿ ಸೇರಿದಂತೆ ಇತರ ಪಾಶ್ಚಿಮಾತ್ಯ ರಾಷ್ಟಗಳ ಬೆಂಲಿಸಿವೆ ಎಂದು ನಿಕರಾಗುವಾದ ಕೆಲ ಗುಂಪುಗಳು ಆರೋಪಿಸಿವೆ.

ಈ ಸಂಬಂಧ ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾ ಪಟ್ಟಿಯಲ್ಲಿ ನಡೆಸಿದ ಕಾರ್ಯಾಚರಣೆ ಕುರಿತು ಹೊಸ ಡೇಟಾ ಪ್ರಕಟಿಸಿದ್ದು, ಇದು ದಾಳಿ ವೇಳೆ ಕೊಲ್ಲಲ್ಪಟ್ಟ ಭಯೋತ್ಪಾದಕರ ಸಂಖ್ಯೆಯಿಂದ ಹಿಡಿದು ದಾಳಿ ಮಾಡಿದ ಸ್ಥಳಗಳ ಬಗ್ಗೆ ತಿಳಿಸಿದೆ ಎಂದು ಅಲ್​ ಜಜೀರಾ ವರದಿ ಮಾಡಿದೆ. IDF ಮಾಹಿತಿಯ ಪ್ರಕಾರ, ಯುದ್ಧದ ಆರಂಭದಿಂದಲೂ ಗಾಜಾ ಪಟ್ಟಿಯಲ್ಲಿ 13,000ಕ್ಕೂ ಹೆಚ್ಚು ಹಮಾಸ್​ ಭಯೋತ್ಪಾದಕರ ಗುಂಪುಗಳ ಸದಸ್ಯರನ್ನು ಇಸ್ರೇಲ್ ರಕ್ಷಣಾ ಪಡೆ ಕೊಂದಿದೆ. ಅಕ್ಟೋಬರ್ 7 ರಂದು ಹಮಾಸ್​ನ 1,000ಕ್ಕೂ ಹೆಚ್ಚು ಜನರ ಭಯೋತ್ಪಾದಕರ ಗುಂಪು ​ಇಸ್ರೇಲ್​ಗೆ ನುಗ್ಗಿ ಸುಮಾರು 1,200ಕ್ಕೂ ಹೆಚ್ಚಿನ ಇಸ್ರೇಲ್​ ನಾಗರಿಕರನ್ನು ಕಗ್ಗೊಲೆ ಮಾಡಿ 253 ಜನರನ್ನು ಅಪಹರಿಸಿ ಗಾಜಾಕ್ಕೆ ಕೊಂಡೊಯ್ದಿದ್ದವು .

ಅಕ್ಟೋಬರ್ 7 ರಿಂದ, ಹಮಾಸ್​ನ 1,600ಕ್ಕೂ ಭಯೋತ್ಪಾದಕರು ಸೇರಿದಂತೆ 3,700 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತನ್ನ ಹೊಸ ಡಾಟಾದಲ್ಲಿ ಪ್ರಕಟಿಸಿರುವುದಾಗಿ ತಿಳಿಸಿದೆ.

ಇದನ್ನೂ ಓದಿ: ಸಿರಿಯಾದಲ್ಲಿ ವೈಮಾನಿಕ ದಾಳಿ: ಇಸ್ರೇಲ್​ನಿಂದ ದೂರ ಉಳಿಯಲು ಅಮೆರಿಕಕ್ಕೆ ಇರಾನ್​ ಎಚ್ಚರ - israel attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.