ETV Bharat / international

ನೀಲಿಚಿತ್ರ ನಟಿಗೆ ಹಣ ನೀಡಿದ ಪ್ರಕರಣ: ಏಪ್ರಿಲ್​ 15ಕ್ಕೆ ಅಮೆರಿಕದ​ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿಚಾರಣೆ - Donald Trump interrogation

author img

By PTI

Published : Apr 13, 2024, 7:11 AM IST

ಏಪ್ರಿಲ್​ 15 ರಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ನೀಲಿಚಿತ್ರ ನಟಿಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲಿದ್ದಾರೆ.

ಡೊನಾಲ್ಡ್​ ಟ್ರಂಪ್
ಡೊನಾಲ್ಡ್​ ಟ್ರಂಪ್

ನ್ಯೂಯಾರ್ಕ್ (ಅಮೆರಿಕ): ನೀಲಿಚಿತ್ರ ನಟಿಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣದ ಆರೋಪ ಹೊತ್ತಿರುವ ಯುನೈಟೆಡ್ ಸ್ಟೇಟ್ಸ್​ನ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಏಪ್ರಿಲ್​ 15 ರಂದು ವಿಚಾರಣೆಗೆ ಒಳಗಾಗುವಂತೆ ನ್ಯೂಯಾರ್ಕ್ ನ್ಯಾಯಾಲಯ ಆದೇಶ ಹೊರಡಿಸಿದೆ. ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಟ್ರಂಪ್​ಗೆ ಈ ವಿಚಾರಣೆಯಿಂದ ಹಿನ್ನೆಡೆಯಾಗುವ ಸಾಧ್ಯತೆ ಇದೆ.

ಪ್ರಕರಣದ ಹಿನ್ನೆಲೆ ಏನು? : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2016 ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಪೋರ್ನ್ ಸ್ಟಾರ್‌ಗಳಿಗೆ ಹಣ ಪಾವತಿಸಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಟ್ರಂಪ್ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಹೊರಬರದಂತೆ ತಡೆಯಲು ಅವರಿಗೆ ಹಣ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಮೊದಲ ಬಾರಿಗೆ ಅಮೆರಿಕದ ಮಾಜಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.

ನೀಲಿಚಿತ್ರ ನಟಿಗೆ ಡೊನಾಲ್ಡ್ ಟ್ರಂಪ್ 130,000 ಡಾಲರ್ ಪಾವತಿಸಿದ್ದಾರೆ ಎಂದು ಗ್ರ್ಯಾಂಡ್ ಜ್ಯೂರಿ ಒಪ್ಪಿಕೊಂಡಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಆ ಸಮಯದಲ್ಲಿ ಡೇನಿಯಲ್ಸ್ 27 ವರ್ಷ ವಯಸ್ಸು ಮತ್ತು ಟ್ರಂಪ್ 60 ವರ್ಷ ವಯಸ್ಸಿನವರಾಗಿದ್ದರು. ಆಗಷ್ಟೇ ಅವರ ಮೂರನೇ ಪತ್ನಿ ಮೆಲಾನಿಯಾ ತಮ್ಮ ಮಗುವಿಗೆ ಜನ್ಮ ನೀಡಿದ್ದರು. ಈ ಎಲ್ಲ ವಿಚಾರಗಳನ್ನು ಬಹಿರಂಗಪಡಿಸದಿರಲು ಹಣ ನೀಡಿರುವ ಬಗ್ಗೆ ನಟಿ ಹೇಳಿದ್ದಾರೆ.

ಡೊನಾಲ್ಡ್​ ಟ್ರಂಪ್ ಅವರ ವಕೀಲರು ಹೇಳಿದಂತೆ ಒಂದೊಮ್ಮೆ ತನಿಖೆಯಲ್ಲಿ ಆರೋಪ ಸಾಬೀತಾದರೆ ಕಾನೂನು ಬದ್ಧವಾಗಿ ನಡೆದುಕೊಳ್ಳಲಾಗುವುದು. ಹೀಗಾಗಿ ಟ್ರಂಪ್ ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಕ್ರಿಮಿನಲ್ ಆರೋಪದ ಮೇಲೆ ವಿಚಾರಣೆಗೆ ನಿಂತಿರುವ ಡೊನಾಲ್ಡ್​ ಟ್ರಂಪ್​ ಅಮೆರಿಕದ ಮೊದಲ ಮಾಜಿ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ : ಅಮೆರಿಕ ಅಧ್ಯಕ್ಷೀಯ ಚುನಾವಣೆ; ಪ್ರಾಥಮಿಕ ಚುನಾವಣೆಗಳಲ್ಲಿ ಜೋ ಬೈಡನ್, ಟ್ರಂಪ್​​ಗೆ ಗೆಲುವು - United States elections

ETV Bharat Logo

Copyright © 2024 Ushodaya Enterprises Pvt. Ltd., All Rights Reserved.