ಅಮೆರಿಕ ಮೇಲೆ ಚೀನಾ ಸೈಬರ್​ ದಾಳಿ, AT&T ಸ್ಥಗಿತದ ಪರಿಣಾಮಕ್ಕಿಂತ 100 ಪಟ್ಟು ಕೆಟ್ಟದಾಗಿರುತ್ತೆ: ಮಾರ್ಕೊ ರೂಬಿಯೊ

author img

By ANI

Published : Feb 23, 2024, 9:02 AM IST

Updated : Feb 23, 2024, 9:58 AM IST

Florida Sentar

ಗುರುವಾರದ AT&T ಸ್ಥಗಿತದ ಪರಿಣಾಮದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಒಂದು ವೇಳೆ ಚೀನಾ ತೈವಾನ್​ ಆಕ್ರಮಣಕ್ಕೆ ಅಮೆರಿಕದ ಮೇಲೆ ಸೈಬರ್​ ದಾಳಿ ಮಾಡಿದಲ್ಲಿ, ಪರಿಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ ಎಂದು ಫ್ಲೋರಿಡಾ ಸೆನೆಟರ್​ ಎಚ್ಚರಿಸಿದ್ದಾರೆ.

ಫ್ಲೋರಿಡಾ( ಅಮೆರಿಕ): ಚೀನಾ ತೈವಾನ್​ ಮೇಲೆ ಆಕ್ರಮಣ ಮಾಡಿದಂತಹ ಸಂದರ್ಭ ಸೈಬರ್​ ದಾಳಿ ಪ್ರಾರಂಭಿಸಿದರೆ ಪರಿಸ್ಥಿತಿ ಇನ್ನಷ್ಟು ಅನಿಶ್ಚಿತವಾಗಬಹುದು ಎಂದು ಫ್ಲೋರಿಡಾ ಸೆನೆಟರ್​ ಮಾರ್ಕೊ ರೂಬಿಯೊ ಎಚ್ಚರಿಸಿದ್ದಾರೆ. ಗುರುವಾರ ಯುನೈಟೆಡ್​ ಸ್ಟೇಟ್ಸ್​ನಾದ್ಯಂತ AT&T ಸಂಸ್ಥೆಯ ಬಳಕೆದಾರರಿಗೆ ವೈರ್​ಲೆಸ್​ ಸೇವೆ ಸ್ಥಗಿತಗೊಂಡ ಬಗ್ಗೆ ಫ್ಲೋರಿಡಾ ಸೆನೆಟರ್​ ಮಾರ್ಕೊ ರೂಬಿಯೊ, ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ.

"AT&T ಸ್ಥಗಿತದ ಪರಿಣಾಮದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ತೈವಾನ್​ ಆಕ್ರಮಣದ ಭಾಗವಾಗಿ ಯಾವಾಗ ಚೀನಾ ಅಮೆರಿಕದ ಮೇಲೆ ಸೈಬರ್​ ದಾಳಿಯನ್ನು ಪ್ರಾರಂಭಿಸಿದರೆ, ಅದು 100 ಪಟ್ಟು ಕೆಟ್ಟದಾಗಿರುತ್ತದೆ ಎಂಬುದು ನನಗೆ ತಿಳಿದಿದೆ. ಅದು ಕೇವಲ ಸೆಲ್​ಫೋನ್​ ಸೇವೆಗಳ ಮೇಲೆ ಅವರ ಹೊಡೆತವಾಗಿರುವುದಿಲ್ಲ. ನಿಮ್ಮ ಶಕ್ತಿ, ನೀರು, ನಿಮ್ಮ ಬ್ಯಾಂಕ್​ಗಳ ಮೇಲಿನ ಭಾರಿ ಹೊಡೆತವಾಗಿರುತ್ತದೆ." ಎಂದು ಪೋಸ್ಟ್​ ಹಾಕಿದ್ದಾರೆ.

ಗುರುವಾರ ಬೆಳಗ್ಗೆ ಅಮೆರಿಕದ ಸ್ಥಳೀಯ ಸಮಯ 4 ರಿಂದ ಸುದೀರ್ಘ ಸಮಯದವರೆಗೆ 74,000ಕ್ಕೂ ಹೆಚ್ಚು AT&T ಗ್ರಾಹಕರು ಡಿಜಿಟಲ್​ ಸೇವೆ ಸ್ಥಗಿತಗೊಂಡು, ಸಮಸ್ಯೆ ಎದುರಿಸುವಂತಾಗಿತ್ತು. ವೈರ್​ಲೆಸ್​ ಸೇವೆ ಸ್ಥಗಿತಗೊಂಡ ಕಾರಣ ಗ್ರಾಹಕರು ಕರೆ, ಮೆಸೇಜ್​, ಇಂಟರ್ನೆಟ್​ ಬಳಕೆ ಸಮಸ್ಯೆಯನ್ನು ಎದುರಿಸಿದ್ದರು. AT&T ವ್ಯಾಪಕವಾಗಿ ಸ್ಥಗಿತವಾಗಿರುವ ಬಗ್ಗೆ ಒಪ್ಪಿಕೊಂಡಿತ್ತು. ಆದರೆ, ಸಿಸ್ಟಮ್ ವೈಫಲ್ಯಕ್ಕೆ ಕಾರಣವನ್ನು ಮಾತ್ರ ನೀಡಿಲ್ಲ. ಸೇವೆಯನ್ನು ಮರುಸ್ಥಾಪಿಸುವವರೆಗೆ ವೈ- ಫೈ ಕರೆಗಳನ್ನು ಬಳಸುವಂತೆ ತನ್ನ ಗ್ರಾಹಕರಿಗೆ AT-T ಮನವಿ ಮಾಡಿಕೊಂಡಿತ್ತು. ಗುರುವಾರದ ಸ್ಥಗಿತ ಸೈಬರ್​ ದಾಳಿ ಅಥವಾ ಇತರ ಯಾವುದೇ ದುರುದ್ದೇಶಪೂರಿತ ಚಟುವಟಿಕೆ ಎಂಬ ಬಗ್ಗೆ ಯಾವುದೇ ಸೂಚನೆ ಇಲ್ಲ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

ತೈವಾನ್​ನನ ಸ್ವ- ಆಡಳಿತ ಪ್ರದೇಶವನ್ನು ಚೀನಾ (ಪೀಪಲ್ಸ್​ ರಿಪಬ್ಲಿಕ್​ ಆಫ್​ ಚೀನಾ) ತನ್ನ ಭೂಪ್ರದೇಶದ ಭಾಗವೆಂದು ಪರಿಗಣಿಸಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾವು, ದೇಶದ ವಾಯು ರಕ್ಷಣಾ ಗುರುತಿನ ವಲಯಕ್ಕೆ ದೈನಂದಿನ ಆಕ್ರಮಣಗಳು ಮತ್ತು ಅದರ ಕಡಲ ಗಡಿಗಳ ಬಳಿ ಮಿಲಿಟರಿ ಹಡಗುಗಳ್ನು ಕಳುಹಿಸುವುದು ಸೇರಿದಂತೆ ತೈವಾನ್​ನ ಸುತ್ತ ಮಿಲಿಟರಿ ಚಟುವಟಿಕೆಗಳನ್ನು ಕೂಡ ಹೆಚ್ಚಿಸಿದೆ.

ವಿಶೇಷವಾಗಿ 2022 ಯುಎಸ್ ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈಪೆಗೆ ಭೇಟಿ ನೀಡಿದ ನಂತರ, ಚೀನಾ ತೈವಾನ್​ನ ಸ್ವಯಂ ಆಡಳಿತದ ಪ್ರದೇಶದ ಮೇಲೆ ತನ್ನ ಮಿಲಿಟರಿ ಜೆಟ್‌ಗಳ ಹರಿವನ್ನು ಹೆಚ್ಚಿಸಿದೆ. ಅದಲ್ಲದೆ, ಚೀನಾ ಮತ್ತೆ ಏಕೀಕರಣಗೊಳ್ಳುತ್ತದೆ ಎನ್ನುವುದನ್ನು ಚೀನಾ ಪದೇ ಪದೇ ಹೇಳಿಕೊಂಡು ಬರುತ್ತಿದೆ.

ಇದನ್ನೂ ಓದಿ: ಒತ್ತೆಯಾಳು ವಿನಿಮಯ ಒಪ್ಪಂದವಾಗದಿದ್ದರೆ ರಂಜಾನ್ ತಿಂಗಳಲ್ಲೂ ಯುದ್ಧ ಮುಂದುವರಿಕೆ: ಇಸ್ರೇಲ್

Last Updated :Feb 23, 2024, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.