ETV Bharat / international

ಇಸ್ರೇಲ್​-ಹಮಾಸ್​ ಯುದ್ಧ: ಗಾಜಾದಲ್ಲಿ ಪ್ರತೀ ನಿತ್ಯ 37 ತಾಯಂದಿರ ಸಾವು - Gaza

author img

By ETV Bharat Karnataka Team

Published : Mar 22, 2024, 11:33 AM IST

ಗಾಜಾ ಪಟ್ಟಿಯಲ್ಲಿ ಇಸ್ರೇಲ್​ ನಡೆಸುತ್ತಿರುವ ದಾಳಿಯಿಂದ ಈವರೆಗೆ 31,988 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

37 mothers are killed per day due to the ongoing Israeli attacks in the Gaza Strip
37 mothers are killed per day due to the ongoing Israeli attacks in the Gaza Strip

ಗಾಜಾ: ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಪ್ರತಿನಿತ್ಯ 37 ತಾಯಂದಿರು ಬಲಿಯಾಗುತ್ತಿದ್ದಾರೆ ಎಂದು ಪ್ಯಾಲೆಸ್ತೇನಿಯನ್​ ರೆಡ್​ ಕ್ರೆಸೆಂಟ್​ ಸೊಸೈಟಿ ತಿಳಿಸಿದೆ. ಪ್ಯಾಲೆಸ್ತೇನಿಯನ್​ ಲಿಬರೇಶನ್ ಆರ್ಗನೈಸೇಶನ್‌ನಲ್ಲಿ ಡಿಟೈನಿಸ್​​ ಮತ್ತು ಪ್ಯಾಲೆಸ್ತೇನಿಯನ್​ ಪ್ರಿಸನರ್ಸ್ ಕ್ಲಬ್ ಅಸೋಸಿಯೇಷನ್ ತಾಯಂದಿರ ದಿನದ ಹಿನ್ನೆಲೆಯಲ್ಲಿ ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಇಸ್ರೇಲ್​ ನಡೆಸುತ್ತಿರುವ ದಾಳಿ ಭಾರೀ ಪ್ರಮಾಣದಲ್ಲಿ ಪ್ಯಾಲೆಸ್ತೇನಿಯನ್​ ತಾಯಂದಿರು ಮತ್ತು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಮಾಸ್​​ ವಿರುದ್ಧ ಅಕ್ಟೋಬರ್​ನಲ್ಲಿ ಇಸ್ರೇಲ್​ ಯುದ್ಧ ಆರಂಭಿಸಿದಾಗಿನಿಂದ ಇಸ್ರೇಲ್​ ಸೇನೆ ಪ್ಯಾಲೆಸ್ತೇನಿಯನ್​ ಮಹಿಳೆಯರನ್ನು ಸಾಮೂಹಿಕ ಬಂಧಿಸುತ್ತಿದೆ ಎಂದು ಇದೇ ವೇಳೆ ತಿಳಿಸಿದೆ. 2023ರ ಅಕ್ಟೋಬರ್​ 7ರ ಬಳಿಕ ಪ್ಯಾಲೆಸ್ತೇನಿಯನ್ ಮಹಿಳೆಯರು, ಕೈದಿಗಳ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಹಮಾಸ್​ ಮತ್ತು ಪ್ಯಾಲೆಸ್ತೇನಿಯನ್ ಪುರುಷರು ಮತ್ತು ಗಂಡು ಮಕ್ಕಳನ್ನು ಬೆದರಿಸಲು ಅವರು ಮಹಿಳೆಯರನ್ನು ಒತ್ತೆಯಾಳುವಾಗಿರಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪಾರಾಧ ಮತ್ತು ಮಹಿಳೆಯರನ್ನು​ ವಶಕ್ಕೆ ಪಡೆದಿರುವ ಇಸ್ರೇಲ್​​ ಕ್ರಮಕ್ಕೆ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಗಳು ಧ್ವನಿ ಎತ್ತಿವೆ.

ಗಾಜಾದಲ್ಲಿರುವ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್​ ದಾಳಿ ಮುಂದುವರೆಸಿದ್ದು, ಇಸ್ರೇಲ್​ ಸೈನಿಕರು 140 ಜನರನ್ನು ಕೊಂದಿದ್ದು, ಹಿರಿಯ ಹಮಾಸ್​ ನಾಯಕರನ್ನು ಬಂಧಿಸಿರುವುದಾಗಿ ತಿಳಿಸಿದೆ. ಸರಿಸುಮಾರು 600 ಜನರನ್ನು ಬಂಧಿಸಲಾಗಿದ್ದು, 140 ಮಂದಿಯನ್ನು ಕೊಲ್ಲಲಾಗಿದೆ ಎಂದಿರುವ ಸೇನೆ, ಅವರೆಲ್ಲಾ ಉಗ್ರರು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸಾವಿನ ಸಂಖ್ಯೆ 31,988ಕ್ಕೇರಿಕೆ: ಗಾಜಾ ಪಟ್ಟಿಯಲ್ಲಿ ಇಸ್ರೇಲ್​ ನಡೆಸುತ್ತಿರುವ ಯುದ್ಧದಿಂದ ಒಟ್ಟು 31,988 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಜಾದಲ್ಲಿ ಹಮಾಸ್​ನ ಆರೋಗ್ಯ ಸಚಿವರು ತಿಳಿಸಿದ್ದಾರೆ. ಇಸ್ರೇಲ್​ ಸೇನೆ ಕಳೆದ 24 ಗಂಟೆಯಲ್ಲಿ 65 ಮಂದಿಯನ್ನು ಕೊಂದಿದ್ದು, 92 ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಸಾವಿನ ಪ್ರಕರಣ 31,988 ಆಗಿದ್ದು 74,188 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಐಎಎನ್​ಎಸ್​)

ಇದನ್ನೂ ಓದಿ: 31,645ಕ್ಕೇರಿದ ಪ್ಯಾಲೆಸ್ಟೈನಿಯರ ಸಾವಿನ ಸಂಖ್ಯೆ: ಕದನವಿರಾಮಕ್ಕೆ ಮೂಡದ ಒಮ್ಮತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.