ETV Bharat / international

ಹವಾಮಾನ ಪ್ರಕ್ಷುಬ್ದತೆಗೆ ಸಿಲುಕಿದ ಸಿಂಗಾಪುರ್​ ಏರ್​ಲೈನ್ಸ್: 22 ಪ್ರಯಾಣಿಕರಿಗೆ ಬೆನ್ನುಹುರಿ, 6 ಮಂದಿಗೆ ತಲೆಗೆ ಗಾಯ - Singapore Airlines

author img

By ETV Bharat Karnataka Team

Published : May 24, 2024, 11:38 AM IST

ಇತ್ತೀಚಿಗೆ ಸಿಂಗಾಪುರ್ ಏರ್‌ಲೈನ್ಸ್‌ದ ವಿಮಾನ ಹವಾಮಾನ ಪ್ರಕ್ಷುಬ್ದತೆಗೆ (Turbulence) ಸಿಲುಕಿ, ಹಲವು ಪ್ರಯಾಣಿಕರು ಗಾಯಗೊಂಡಿದ್ದರು.

http://10.10.50.85:6060/reg-lowres/24-May-2024/pilot_2405newsroom_1716523441_891.jpg
ಸಾಂದರ್ಭಿಕ ಚಿತ್ರ (ETV Bharat)

ಸಿಂಗಾಪುರ್​: ಮೇ 21ರಂದು ಪ್ರತಿಕೂಲ ಹವಾಮಾನದಿಂದ ತುರ್ತು ಭೂ ಸ್ಪರ್ಶಿಸಿದ ಸಿಂಗಾಪುರ್​ ಏರ್​​ಲೈನ್​​ನಲ್ಲಿದ್ದ ಪ್ರಯಾಣಿಕರ ಪೈಕಿ ಓರ್ವ ಮೃತಪಟ್ಟು, ಹಲವರು ಗಾಯಗೊಂಡಿದ್ದರು. 22 ಮಂದಿ ಬೆನ್ನುಹುರಿ ಗಾಯಕ್ಕೊಳಗಾದರೆ, 6 ಮಂದಿಯ ತಲೆಬುರುಡೆಗಳಿಗೆ ಗಾಯವಾಗಿತ್ತು. 22 ಪ್ರಯಾಣಿಕರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ವರದಿಯಾಗಿದೆ.

ಲಂಡನ್​-ಸಿಂಗಾಪುರ್​ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಬ್ಯಾಂಕಾಕ್​ನಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಸುಮಾರು 37 ಸಾವಿರ ಅಡಿ ಎತ್ತರದಿಂದ ಕೇವಲ ಮೂರೇ ನಿಮಿಷದಲ್ಲಿ ಕೆಳಗಿಳಿದ ಪರಿಣಾಮ ಅನೇಕ ಪ್ರಯಾಣಿಕರು ಗಾಯಗೊಂಡಿದ್ದರು.

ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ 46 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆಗಾಗಿ ಥಾಯ್ಲೆಂಡ್‌​ನಲ್ಲಿದ್ದರೆ, 65 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಬ್ಯಾಂಕಾಕ್​ನಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಿಂಗಾಪೂರ್​ ಏರ್​ಲೈನ್ಸ್​ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಗಾಯಾಳುಗಳ ಕುಟುಂಬ ಸದಸ್ಯರು ಭೇಟಿಯಾಗಲು ಪ್ರಯಾಣ ವ್ಯವಸ್ಥೆಯನ್ನು ಸಿಂಗಾಪೂರ್​ ಏರ್​ಲೈನ್ಸ್​ ಮಾಡಿದೆ. ಇದೇ ವೇಳೆ ಪ್ರಯಾಣಿಕರ ಆರೈಕೆಗೆ ಮುಂದಾದ ಸಮಿತಿವೇಜ್ ಶ್ರೀನಾಕಾರಿನ್ ಆಸ್ಪತ್ರೆ ಮತ್ತು ಸಮಿತಿವೇಜ್ ಸುಖುಮ್ವಿಟ್ ಆಸ್ಪತ್ರೆಯ ಸಿಬ್ಬಂದಿಗೆ ಸಿಂಗಾಪೂರ್​ ಏರ್​ಲೈನ್ಸ್​ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋ ಚೂನ್ ಫೋಂಗ್ ಧನ್ಯವಾದ ತಿಳಿಸಿದ್ದಾರೆ.

ಬ್ಯಾಂಕಾಕ್‌ನಲ್ಲಿರುವ ಎಲ್ಲಾ ಪ್ರಯಾಣಿಕರ ಸಂಪರ್ಕದಲ್ಲಿದ್ದೇವೆ. ಪ್ರಯಾಣಿಕರಿಗೆ ಕಷ್ಟದ ಸಮಯದಲ್ಲಿ ಅಗತ್ಯ ಬೆಂಬಲ ಮತ್ತು ಸಹಾಯ ನೀಡಲು ನಮ್ಮ ತರಬೇತಿ ಪಡೆದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಥಾಯ್ಲೆಂಡ್​ನ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅಗತ್ಯವಿರುವ ಹೆಚ್ಚುವರಿ ಸಹಾಯವನ್ನೂ ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಆಗಸದಲ್ಲಿ "ಭೂಕಂಪ": ಸಿಂಗಾಪುರ ವಿಮಾನ ಅಲುಗಾಡಿ ಒಬ್ಬ ಸಾವು, 30 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.