ETV Bharat / health

ವಿಪರೀತ ಸಂಸ್ಕರಿಸಿದ ಆಹಾರ ಸೇವನೆಯಿಂದ 32 ರೀತಿಯ ಆರೋಗ್ಯ ಸಮಸ್ಯೆಗಳು

author img

By ETV Bharat Karnataka Team

Published : Feb 29, 2024, 3:28 PM IST

Updated : Feb 29, 2024, 5:22 PM IST

ಹೆಚ್ಚು ಸಂಸ್ಕರಿಸಿದ ಆಹಾರಗಳು 32 ರೀತಿಯ ಆರೋಗ್ಯ ಸಮಸ್ಯೆಗಳಿಗೆ ಗುರಿ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಇವುಗಳ ಸೇವನೆಯ ಬಗ್ಗೆ ಜಾಗ್ರತೆ ವಹಿಸುವಂತೆ ಅಧ್ಯಯನ ವರದಿ ಸಲಹೆ ನೀಡಿದೆ.

ultra processed foods may increase health risk
ultra processed foods may increase health risk

ಸಿಡ್ನಿ: ನಿಯಮಿತವಾಗಿ ಹೆಚ್ಚು ಸಂಸ್ಕರಿಸಿದ ಅಥವಾ ಅಲ್ಟ್ರಾ ಪ್ರೊಸೆಸ್ಡ್​​ ಆಹಾರಗಳ ಸೇವನೆ ಮಾಡುವುದರಿಂದ ಕ್ಯಾನ್ಸರ್​​, ಹೃದಯ ಮತ್ತು ಶ್ವಾಸಕೋಶ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಅಕಾಲಿಕ ಸಾವು ಸೇರಿದಂತೆ 32 ರೋಗಗಳ ಅಪಾಯಗಳು ಹೆಚ್ಚುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.

ಏನಿದು ಅಲ್ಟ್ರಾ ಪ್ರೊಸೆಸ್ಡ್​​ ಆಹಾರ?: ಬೇಯಿಸಿದ ಪ್ಯಾಕೇಜ್ ಆಹಾರ ಮತ್ತು ಸ್ನಾಕ್​ಗಳು, ಪಾನೀಯಗಳು, ಸಕ್ಕರೆ ಸೆರೆಲ್ಸ್​​, ರೆಡಿ ಟೂ ಈಟ್​​ ಅಥವಾ ಶಾಖ ಉತ್ಪನ್ನಗಳು ಅನೇಕ ಬಾರಿ ಭಾರಿ ಪ್ರಮಾಣದಲ್ಲಿ ಕೈಗಾರಿಕಾ ಪ್ರಕ್ರಿಯೆಗೆ ಒಳಗಾಗುತ್ತವೆ. ಈ ಸಂದರ್ಭದಲ್ಲಿ ಇವುಗಳಿಗೆ ಬಣ್ಣ, ಎಮಲ್ಸಿಫೈಯರ್​​ಗಳು, ಸುವಾಸನೆಗಳು ಮತ್ತಿತರ ಅಂಶಗಳನ್ನು ಸೇರಿಸಲಾಗುತ್ತದೆ. ಈ ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ, ಕೊಬ್ಬು ಅಥವಾ ಉಪ್ಪು ಇರುತ್ತದೆ. ಇವು ಕಡಿಮೆ ಪ್ರಮಾಣದಲ್ಲಿ ವಿಟಮಿನ್​ ಮತ್ತು ಫೈಬರ್​ ಒಳಗೊಂಡಿರುತ್ತವೆ.

ಆಸ್ಟ್ರೇಲಿಯಾ, ಅಮೆರಿಕ, ಫ್ರಾನ್ಸ್​​ ಮತ್ತು ಐರ್ಲೆಂಡ್​​ನ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಈ ರೀತಿ ಹೆಚ್ಚು ಸಂಸ್ಕರಿತ ಆಹಾರ ಸೇವನೆಯಿಂದ ಹೃದಯ ರಕ್ತನಾಳದ ಸಮಸ್ಯೆ ಉದ್ಭವಿಸಿ ಸಾವಿನ ಅಪಾಯ ಹೆಚ್ಚಾಗುವ ಸಾಧ್ಯತೆ ಶೇ.50ರಷ್ಟಿದೆ ಎಂಬುದನ್ನು ಸಾಕ್ಷ್ಯಸಮೇತ ಮನವರಿಕೆ ಮಾಡಿದೆ. ಅಷ್ಟೇ ಅಲ್ಲ, ಈ ರೀತಿಯ ಆಹಾರಗಳು ಶೇ.48-53ರಷ್ಟು ಆತಂಕ ಮತ್ತು ಮಾನಸಿಕ ಅಸ್ವಸ್ಥತೆ ಅಪಾಯ ಹಾಗು ಶೇ.12ರಷ್ಟು ಟೈಪ್​ 2 ಮಧುಮೇಹದ ಅಪಾಯವನ್ನೂ ಹೊಂದಿವೆ.

ಬಿಎಂಜೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಇದರ ಫಲಿತಾಂಶವನ್ನು ಉನ್ನತ ಮಟ್ಟದ ಸಾಕ್ಷ್ಯ ಸಾರಾಂಶದ ಆಧಾರಿತವಾಗಿ ತಯಾರಿಸಲಾಗಿದೆ. ಅಲ್ಲದೇ 10 ಮಿಲಿಯನ್​ ಭಾಗಿದಾರರನ್ನೊಳಗೊಂಡ 14 ರಿವ್ಯೂ ಲೇಖನಗಳನ್ನು ಪಡೆದು 45 ವಿಧದ ಮೆಟಾ ವಿಶ್ಲೇಷಣೆಯನ್ನೂ ನಡೆಸಲಾಗಿದೆ.

ಅಧ್ಯಯನದ ವೇಳೆ ಹೆಚ್ಚು ಸಂಸ್ಕರಿಸಿದ​​ ಆಹಾರಗಳ ಸೇವನೆಯು ಶೇ.21ರಷ್ಟು ಯಾವುದೇ ರೀತಿಯ ಸಾವಿನ ಅಪಾಯದೊಂದಿಗೆ ಸಂಬಂಧ ಹೊಂದಿದೆ. ಶೇ.40-66ರಷ್ಟು ಹೃದಯ ಸಂಬಂಧಿ ಸಾವಿನ, ಸ್ಥೂಲಕಾಯ, ಟೈಪ್​ 2 ಮಧುಮೇಹ ಮತ್ತು ನಿದ್ರಾ ಸಮಸ್ಯೆ ಮತ್ತು ಶೇ.22ರಷ್ಟು ಖಿನ್ನತೆ ಅಪಾಯ ಹೊಂದಿದೆ ಎಂದು ಅಧ್ಯಯನ ತೋರಿಸಿದೆ.

ಈ ಅಧ್ಯಯನವು ಹೆಚ್ಚು ಸಂಸ್ಕರಿತ ಆಹಾರ ಸೇವನೆಯನ್ನು ಕಡಿಮೆಗೊಳಿಸುವ ಗುರಿ ಹೊಂದಿದ್ದು, ಸಾರ್ವಜನಿಕ ಆರೋಗ್ಯ ಕುರಿತ ಕ್ರಮಗಳು ಮತ್ತು ಸುಧಾರಣೆಗೆ ಆಗ್ರಹಿಸಿದೆ ಎಂದು ಆಸ್ಟ್ರೇಲಿಯಾದ ಡಿಕಿನ್​ ಯುನಿವರ್ಸಿಟಿಯ ಸಹಾಯಕ ಸಂಶೋಧಕ ಮೆಲಿಸ್ಸಾ ಎಂ.ಲೇನ್​ ತಿಳಿಸಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ಹೆಚ್ಚು ಸಂಸ್ಕರಿತ ಆಹಾರಗಳು ಆರೋಗ್ಯ ಮತ್ತು ಮನುಷ್ಯನ ಜೀವಿತಾವಧಿಗೆ ಹಾನಿ ಮಾಡುತ್ತದೆ. ಹೀಗಾಗಿ ಸಾರ್ವಜನಿಕ ನೀತಿ ಮತ್ತು ಹೆಚ್ಚು ಸಂಸ್ಕರಿತ ಆಹಾರದ ಕುರಿತು ಕ್ರಮಕ್ಕೆ ಕರೆ ನೀಡಲಾಗಿದೆ.

ಇಂತಹ ಆಹಾರಗಳ ಮೇಲೆ ಲೇಬಲ್​ ಹಾಕುವುದು, ಶಾಲೆ ಮತ್ತು ಆಸ್ಪತ್ರೆಯ ಬಳಿ ಇದರ ಮಾರಾಟ ಮತ್ತು ಜಾಹೀರಾತಿಗೆ ನಿಯಂತ್ರಣವನ್ನು ವರದಿ ಒತ್ತಾಯಿಸಿದೆ. ಕಡಿಮೆ ಬೆಲೆಯಲ್ಲಿ ಮತ್ತು ಸುಲಭವಾಗಿ ಹೆಚ್ಚು ಸಂಸ್ಕರಿತ ಆಹಾರಗಳಿಗೆ ಬದಲಾಗಿ, ಕಡಿಮೆ ಸಂಸ್ಕರಿತ ಅಥವಾ ಪ್ರೊಸೆಸ್​ ಮಾಡಿಲ್ಲದ ಆಹಾರಕ್ಕೆ ಕ್ರಮಕ್ಕೆ ಒತ್ತಾಯಿಸಲಾಗಿದೆ.(ಐಎಎನ್​ಎಸ್​​)

ಇದನ್ನೂ ಓದಿ: ನಿದ್ರಾಹೀನತೆಗೆ ಕಾರಣವಾಗಲಿದೆ ಎನರ್ಜಿ ಡ್ರಿಂಕ್​; ಸಂಶೋಧನೆ

Last Updated : Feb 29, 2024, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.