ETV Bharat / health

ಕೊಳಕಾದ ಸ್ಟೀಲ್​​ ಟ್ಯಾಪ್​ ಪಳಪಳ ಹೊಳೆಯಬೇಕೇ? ಅಡುಗೆ ಮನೆಯಲ್ಲೇ ಇದೆ ಪರಿಹಾರ - Tap Cleaning Tips

ಅಡುಗೆ ಮನೆ ಅಥವಾ ಸ್ನಾನದ ಮನೆಯ ಸ್ಟೀಲ್​ ಟ್ಯಾಪ್​ ಅಥವಾ ಸಿಂಕ್​ಗಳು ಜಿಡ್ಡು ಹಿಡಿದಿದ್ದರೆ ಅವುಗಳನ್ನು ಮೊದಲಿನಂತೆ ಹೊಳಪಿಸಲು ಇಲ್ಲಿದೆ ಕೆಲವು ಉಪಯುಕ್ತ ಸಲಹೆಗಳು.

ಸ್ಟೀಲ್​​ ಟ್ಯಾಪ್​ ಬೆಳ್ಳಗಾಗಿಸಲು ಟಿಪ್ಸ್​
ಸ್ಟೀಲ್​​ ಟ್ಯಾಪ್​ ಬೆಳ್ಳಗಾಗಿಸಲು ಟಿಪ್ಸ್​ (ETV Bharat)
author img

By ETV Bharat Karnataka Team

Published : Jun 21, 2024, 10:17 PM IST

ಮನೆಯ ನೀರಿನ ಸ್ಟೀಲ್​ ಟ್ಯಾಪ್​ಗಳು ದಿನ ಕಳೆದಂತೆ ಸಾಬೂನು, ಇನ್ನಿತರ ವಸ್ತುಗಳಿಂದ ಜಿಡ್ಡು, ತುಕ್ಕು ಹಿಡಿಯುತ್ತವೆ. ನೋಡಲು ಅಸಹ್ಯವೆನಿಸುವ ಈ ಟ್ಯಾಪ್​ಗಳನ್ನು ಮತ್ತೆ ಹೊಸದರಂತೆ ಮಾಡಬಹುದು. ಇದಕ್ಕೆ ಖರ್ಚಿಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದಲೇ ಇದು ಸಾಧ್ಯವಿದೆ.

1. ನಿಂಬೆ ರಸ: ಒಂದು ಬೌಲ್​ನಲ್ಲಿ ಸ್ವಲ್ಪ ಸರ್ಫ್ ಪೌಡರ್ ತೆಗೆದುಕೊಂಡು ಅದಕ್ಕೆ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ಟೀಲ್​ ಟ್ಯಾಪ್ ಮೇಲೆ ಈ ಮಿಶ್ರಣವನ್ನು ಸಿಂಪಡಿಸಿ. ಸ್ಕ್ರಬ್‌ನಿಂದ ಚೆನ್ನಾಗಿ ಕಲೆ ಇರುವಲ್ಲೆಲ್ಲ ಉಜ್ಜಿ, ಹಾಗೇ ಬಿಡಿ. 5 ನಿಮಿಷಗಳ ಬಳಿಕ ತೊಳೆಯಿರಿ. ಈಗ ನೀವು ಬದಲಾವಣೆ ನೋಡುವಿರಿ.

2. ಟೂತ್‌ಪೇಸ್ಟ್: ಹಲ್ಲುಜ್ಜಲು ಬಳಸುವ ಟೂತ್‌ಪೇಸ್ಟ್‌ನಿಂದ ಟ್ಯಾಪ್‌ಗಳನ್ನು ಸ್ವಚ್ಛಗೊಳಿಸಬಹುದು. ಮೊದಲು ಹಳೆಯ ಬ್ರಷ್‌ನಲ್ಲಿ ಸ್ವಲ್ಪ ಪೇಸ್ಟ್​ ತೆಗೆದುಕೊಂಡು ಟ್ಯಾಪ್‌ಗಳನ್ನು ಚೆನ್ನಾಗಿ ಸ್ಕ್ರಬ್​ ಮಾಡಿ, ಬಿಡಿ. 5 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಈಗ ಟ್ಯಾಪ್‌ಗಳ ಮೇಲಿನ ಎಲ್ಲಾ ಕೊಳಕು ಮಾಯ.!

3. ವಿನೆಗರ್: ಸ್ವಲ್ಪ ಬಿಳಿ ವಿನೆಗರ್ ತೆಗೆದುಕೊಂಡು, ಸ್ವಲ್ಪ ನೀರು ಸೇರಿಸಿ. ಅದರೊಳಗೆ ಸ್ಪಾಂಜ್ ಅಥವಾ ಸ್ಕ್ರಬ್ಬರ್ ಹಾಕಿ, ಐದು ನಿಮಿಷ ಇಡಿ. ಈಗ ಅದೇ ಸ್ಕ್ರಬ್ಬರ್‌ನಿಂದ ಚೆನ್ನಾಗಿ ಸ್ಕ್ರಬ್​ ಮಾಡಿ. 1-2 ನಿಮಿಷಗಳ ನಂತರ ತೊಳೆಯಿರಿ.

ನಾವು ಪ್ರತಿದಿನ ಪಾತ್ರೆಗಳನ್ನು, ತರಕಾರಿಗಳನ್ನು ಸಿಂಕ್​ನಲ್ಲಿ ತೊಳೆದಾಗ ಬಹಳಷ್ಟು ಕಸ ಸಿಂಕ್‌ನಲ್ಲಿ ಸೇರುವ ಸಾಧ್ಯತೆಯಿದೆ. ಆದ್ದರಿಂದ, ಸಿಂಕ್ ಅ​ನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಆದರೆ ಗಮನಿಸಿ. ರಾಸಾಯನಿಕಗಳನ್ನು ಹೊಂದಿರುವ ದ್ರವಗಳು ಮತ್ತು ಮಾರ್ಜಕಗಳನ್ನು ಬಳಸಿ ಸಿಂಕ್ ಸ್ವಚ್ಛಗೊಳಿಸುವುದರಿಂದ ಅದರ ಗುಣಮಟ್ಟಕ್ಕೆ ಹಾನಿಯಾಗುತ್ತದೆ. ಹಾಗಾಗಿ ನೈಸರ್ಗಿಕ ಪದಾರ್ಥಗಳಿಂದ ಶುಚಿಗೊಳಿಸುವುದು ಉತ್ತಮ. ಮನೆಯ ವಿನೆಗರ್, ಅಡುಗೆ ಸೋಡಾ, ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳು, ಆಲಿವ್ ಎಣ್ಣೆ ಇತ್ಯಾದಿಗಳನ್ನು ಬಳಸಿ ಸುಲಭವಾಗಿ ಸಿಂಕ್ ಸ್ವಚ್ಛಗೊಳಿಸಬಹುದು.

ಮೊದಲು ಸಿಂಕ್‌ನಲ್ಲಿರುವ ಕಸ ತೆಗೆಯಿರಿ. ಸ್ವಲ್ಪ ಅಡುಗೆ ಸೋಡಾ ಸೇರಿಸಿ. ಮೃದುವಾದ ಸ್ಪಾಂಜ್ ಸಹಾಯದಿಂದ ಉಜ್ಜಿ. ನಂತರ ವಿನೆಗರ್‌ನಿಂದ ಸ್ವಚ್ಛವಾಗಿ ತೊಳೆಯಿರಿ. ನೀರಿನಿಂದ ಸ್ವಚ್ಛಗೊಳಿಸಿ ಮತ್ತು ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳೊಂದಿಗೆ ಸಂಪೂರ್ಣ ಸಿಂಕ್ ಅನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ಈ ರೀತಿ ಮಾಡುವುದರಿಂದ ಸಿಂಕ್​ ವಾಸನೆ ಮುಕ್ತವಾಗಿ, ತಾಜಾತನದಿಂದ ಮತ್ತು ಸದಾ ಹೊಳೆಯುತ್ತಿರುತ್ತದೆ.

ಕೊನೆಯದಾಗಿ, ನೀರಿನಿಂದ ಸ್ವಚ್ಛಗೊಳಿಸಿ ಒಣಗಿದ ನಂತರ ಮೃದುವಾದ ಬಟ್ಟೆಯಿಂದ ಸಂಪೂರ್ಣ ಸಿಂಕ್​ ಅನ್ನು ಆಲಿವ್ ಎಣ್ಣೆಯಿಂದ ಸ್ವಚ್ಛಗೊಳಿಸಿದರೆ ಸಿಂಕ್​ ಹೊಸದರಂತೆ ಕಾಣಬಲ್ಲದು.

ಇದನ್ನೂ ಓದಿ: ಸುಂದರವಾಗಿ ಕಾಣಬೇಕಾ?, ಹಾಗಾದರೆ ರಾಗಿ ಸಂಗಟಿ ಕುಡಿಯಿರಿ, ನಿರೋಗಿಯಾಗಿ; ರಾಗಿಯಲ್ಲಿ ಏನೆಲ್ಲಾ ಔಷಧ ಗುಣಗಳಿವೆ ಗೊತ್ತಾ? - HEALTH BENEFITS OF EAT RAGI FOODS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.