ETV Bharat / health

ಬೊಜ್ಜು ಕರಗಿಸಬೇಕಾ? ಬೆಳಗ್ಗೆ ಬದಲು ಸಂಜೆ ವ್ಯಾಯಾಮ ಮಾಡಿ ಎನ್ನುತ್ತಿದೆ ಅಧ್ಯಯನ - health benefits against obesity

author img

By IANS

Published : Apr 11, 2024, 12:15 PM IST

ಸಂಜೆಯ ದೈಹಿಕ ಚಟುವಟಿಕೆಯು ಮಧುಮೇಹ ಅಥವಾ ಸ್ಥೂಲಕಾಯತೆಗೆ ಸಂಬಂಧಿಸಿದ ಕೆಲವು ಅಸಹಿಷ್ಣುತೆ ಮತ್ತು ತೊಡಕುಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.

Studies say exercise in the evening instead of in the morning will give health benefit

ಸಿಡ್ನಿ, ಆಸ್ಟ್ರೇಲಿಯಾ: ಸಾಮಾನ್ಯವಾಗಿ ವ್ಯಾಯಾಮ ಮಾಡಲು ಬೆಳಗಿನ ಸಮಯ ಉತ್ತಮ ಎಂದು ಭಾವಿಸುತ್ತೇವೆ. ಆದರೆ, ಸಂಜೆ ಸಮಯದಲ್ಲಿ ದೈಹಿಕ ಚಟುವಟಿಕೆ ನಡೆಸುವುದರಿಂದ ಸ್ಥೂಲಕಾಯ ಹೊಂದಿರುವವರು ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ಅಧ್ಯಯನ ತಿಳಿಸಿದೆ.

ಈ ಅಧ್ಯಯನವನ್ನು ಜರ್ನಲ್​ ಡಯಾಬೀಟಿಸ್​ ಕೇರ್​ನಲ್ಲಿ ಪ್ರಕಟಿಸಲಾಗಿದೆ. 8 ವರ್ಷಗಳ ಕಾಲ 30 ಸಾವಿರ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಿ, ಈ ಬಗ್ಗೆ ಉತ್ತರ ಕಂಡುಕೊಳ್ಳಲಾಗಿದೆ. ಆಸ್ಟ್ರೇಲಿಯದ ಸಿಡ್ನಿ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಅಕಾಲಿಕ ಮರಣ ಮತ್ತು ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಏರೋಬಿಕ್ ಚಟುವಟಿಕೆಯನ್ನು ಮಧ್ಯಮದಿಂದ ತೀವ್ರವಾದ ದೈಹಿಕ ಚಟುವಟಿಕೆ ಮಾಡುವ ಜನರಲ್ಲಿ ಕಡಿಮೆಯಾಗಿದೆ ಎಂದು ಕಂಡು ಕೊಂಡಿದ್ದಾರೆ. ಸಂಜೆ 6 ರಿಂದ ಮಧ್ಯರಾತ್ರಿ ನಡುವೆ ನಮ್ಮ ಹೃದಯ ಬಡಿತವನ್ನು ಹೆಚ್ಚಿರುತ್ತದೆ. ಈ ಸಮಯದಲ್ಲಿ ನಡೆಸುವ ವ್ಯಾಯಾಮ ಚಟುವಟಿಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದಿದ್ದಾರೆ

ಆಸ್ಟ್ರೇಲಿಯಾದಲ್ಲಿ ಹಲವಾರು ಕ್ಲಿಷ್ಟ ಸಾಮಾಜಿಕ ಅಂಶಗಳ ಕಾರಣದಿಂದಾಗಿ ಮೂವರಲ್ಲಿ ಇಬ್ಬರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮತ್ತು ಅಕಾಲಿಕ ಮರಣದಂತಹ ಆಪತ್ತು ತರುವ ಹೃದಯರಕ್ತನಾಳದ ಸಮಸ್ಯೆ ಹೆಚ್ಚಿಸಿ ಅಪಾಯವನ್ನುಂಟು ಮಾಡುತ್ತದೆ ಎಂದು ಸಿಡ್ನಿ ಯೂನಿವರ್ಸಿಟಿಯ ವ್ಯಾಯಾಮ ಶರೀರಶಾಸ್ತ್ರದ ಉಪನ್ಯಾಸಕರು ಡಾ ಏಂಜೆಲೊ ಸಬಾಗ್ ತಿಳಿಸಿದ್ದಾರೆ.

ಈ ಅಧ್ಯಯನದಲ್ಲಿ ತಂಡವೂ ವ್ಯಾಯಾಮದ ಮಾದರಿಯನ್ನು ಟ್ರಾಕ್​ ಮಾಡಿಲ್ಲ. ಬದಲಾಗಿ ಅವರು 3 ಮತ್ತು ಅದಕ್ಕಿಂತ ಹೆಚ್ಚಿನ ಸಮಯದ ನಿರಂತರ ಏರೋಬಿಕ್​ ವ್ಯಾಯಾಮವನ್ನು ಟ್ರಾಕ್​ ಮಾಡಿದ್ದಾರೆ. ದಿನ ನಿತ್ಯದ ದೈಹಿಕ ಚಟುವಟಿಕೆಗಿಂತ ಅವರು ಆವರ್ತನವು ಹೆಚ್ಚು ಪ್ರಾಮುಖ್ಯತೆ ಹೊಂದಿದೆ ಎಂದು ಪತ್ತೆ ಮಾಡಿದ್ದಾರೆ.

ಸಂಜೆಯ ದೈಹಿಕ ಚಟುವಟಿಕೆಯು ಮಧುಮೇಹ ಅಥವಾ ಸ್ಥೂಲಕಾಯತೆಗೆ ಸಂಬಂಧಿಸಿದ ಕೆಲವು ಅಸಹಿಷ್ಣುತೆ ಮತ್ತು ತೊಡಕುಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಸಂಜೆ ಸಮಯದಲ್ಲಿ ಗ್ಲೂಕೋಸ್ ಅಸಹಿಷ್ಣುತೆ ಹೆಚ್ಚುತ್ತದೆ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ. ಆದಾಗ್ಯೂ, ಸ್ಥೂಲಕಾಯತೆಯ ಸಮಸ್ಯೆಗೆ ವ್ಯಾಯಾಮವು ಒಂದೇ ಪರಿಹಾರವಲ್ಲ ಎಂದಿದ್ದಾರೆ.

ದೈಹಿಕ ಚಟುವಟಿಕೆಗೆ ಯೋಚಿಸುತ್ತಿರುವ ಜನರು ಆರೋಗ್ಯ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಸಮಯದಲ್ಲಿ ದೈಹಿಕ ಚಟುವಟಿಕೆ ನಡೆಸಲು ಯೋಜಿಸಬಹುದು ಎಂದು ಅಧ್ಯಯನ ಸಲಹೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಒದಿ: ಸೈಕ್ಲಿಂಗ್ Vs ರನ್ನಿಂಗ್: ಫಿಟ್‌ನೆಸ್‌ಗೆ ಯಾವುದು ಉತ್ತಮ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.