ಹೃದಯಕ್ಕೆ ಮಾರಣಾಂತಿಕವಾಗಬಹುದೇ ಮೇದೋಜ್ಜೀರಕ ಗ್ರಂಥಿ ಕಾಯಿಲೆ; ವೈದ್ಯರು ಹೇಳುವುದೇನು?

author img

By IANS

Published : Feb 21, 2024, 10:48 AM IST

pancreatic problems  can lead to mortality

ಮೇದೋಜ್ಜೀರಕ ಗ್ರಂಥಿಯ ಸಮಸ್ಯೆ ಹೃದಯಕ್ಕೆ ಹಾನಿ ತರಬಹುದೇ ಎಂಬ ಕುರಿತು ಅನೇಕ ತಜ್ಞರು ತಿಳಿಸಿದ್ದಾರೆ.

ನವದೆಹಲಿ: ಹಿಂದಿ ಚಿತ್ರ ನಟ ರಿತುರಾಜ್​ ಸಿಂಗ್​ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದು, ಅವರು ಮೇದೋಜ್ಜೀರಕ ಗ್ರಂಥಿಯ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಕೆಲವೇ ದಿನದಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ

ಈ ಮೇದೋಜ್ಜೀರಕ ಗ್ರಂಥಿಯ ಸಮಸ್ಯೆ ಹೃದಯಕ್ಕೆ ಹಾನಿ ತರಬಹುದೇ ಎಂಬ ಕುರಿತು ಅನೇಕ ತಜ್ಞರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಾಲಿಮಾರ್​ ಬಾಗ್​​ನ ಮ್ಯಾಕ್ಸ್​​ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ ಪಿಯುಷ್​ ಗುಪ್ತಾ, ಮೇದೋಜ್ಜೀರಕ ಗ್ರಂಥಿಯ ಕಾಯಿಲೆ ಮೇದೋಜ್ಜೀರಕದ ಉರಿಯೂತ ಹೊಂದಿರಬಹುದು. ಇದನ್ನು ಕ್ಯಾನ್ಸರ್​ ಎಂದು ಉಲ್ಲೇಖಿಸಲಾಗುತ್ತದೆ. ಸದ್ಯ ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ ಹೈ ಪ್ರೊಫೈಲ್ ಪ್ರಕರಣಗಳನ್ನು ನಾವು ನೋಡುತ್ತಿದ್ದು, ಇದು ಅನೇಕ ಬಾರಿ ಸಾವಿಗೆ ಕಾರಣವಾಗುತ್ತಿದೆ ಎಂದಿದ್ದಾರೆ.

ಮೇದೋಜ್ಜೀರಕ ಗ್ರಂಥಿಯ ಮೇಲೆ ಉರಿಯೂತವು ಊತ ಮತ್ತು ರೆಡ್​ನೆಸ್​ ಅನ್ನು ಇದು ಹೊಂದಿದೆ. ಜೀರ್ಣಕಾರಿ ರಸಗಳು ಅಥವಾ ಕಿಣ್ವಗಳು ಮೇದೋಜ್ಜೀರಕ ಗ್ರಂಥಿಯ ಮೇಲೆ ದಾಳಿ ಮಾಡಿದಾಗ ಈ ರೀತಿ ಉಂಟಾಗುತ್ತದೆ. ಈ ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಎಡಭಾಗದಲ್ಲಿ, ಸಣ್ಣ ಕರುಳಿನ ಹತ್ತಿರದಲ್ಲಿರುತ್ತದೆ. ಮೇದೋಜ್ಜೀರಕ ಗ್ರಂಥಿಯ ಕಾಯಿಲೆಯ ತೀವ್ರತೆ ಹೃದಯದ ಸ್ನಾಯುವಿನೊಂದಿಗೆ ಸಂಬಂಧ ಹೊಂದಿರಬಹುದು.

ಈ ಕಾಯಿಲೆಯು ಎಲೆಕ್ಟ್ರೋಲೈಟ್ಸ್​​ಗಳ ಬದಲಾವಣೆಗೂ ಕಾರಣವಾಗಬಹುದು. ಕಾರಣ ಇದು ಭಾರಿ ಒತ್ತಡವನ್ನು ಉಂಟು ಮಾಡುತ್ತದೆ. ಈ ಸಮಸ್ಯೆ ಹೊಂದಿರುವ ವ್ಯಕ್ತಿ ಹೃದಯದ ಸಮಸ್ಯೆ ಹೊಂದಿದ್ದರೆ, ಅವರಿಗೆ ಹೆಚ್ಚು ತೊಂದರೆ ಆಗಬಹುದು. ತೀವ್ರತರಹದ ಮೇದೋಜ್ಜೀರಕ ಕಾಯಿಲೆ ಹೊಂದಿರುವ ವ್ಯಕ್ತಿಯಲ್ಲಿ ಹೃದಯ ವೈಫಲ್ಯ ಮತ್ತು ಕಿಡ್ನಿ ವೈಫಲ್ಯ ಉಂಟಾಗಬಹುದು ಎಂದು ಶ್ರೀ ಗಂಗಾರಾಮ್​ ಆಸ್ಪತ್ರೆಯ ಹಿರಿಯ ಹೃದಯ ತಜ್ಞ ಡಾ ಆಶ್ವಿನಿ ಮೆಹ್ತಾ ತಿಳಿಸಿದ್ದಾರೆ.

ಆಲ್ಕೋಹಾಲ್, ಧೂಮಪಾನ, ಸ್ಥೂಲಕಾಯತೆ, ಪಿತ್ತಗಲ್ಲು, ಸಿದ್ಧ ಔಷಧಗಳು ಮೇದೋಜ್ಜೀರಕ ಗ್ರಂಥಿಯ ಕಾಯಿಲೆಗೆ ಕಾರಣವಾಗಬಹುದು . ಈ ರೀತಿಯ ಅಪಾಯದ ಅಂಶಗಳು ಸಮಾಜದಲ್ಲಿ ಹೆಚ್ಚುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಸ್ಥೂಲಕಾಯತೆ, ಧೂಮಪಾನ ಮತ್ತು ಆಲ್ಕೋಹಾಲ್​ಗಳು ಹೃದಯದೊಂದಿಗೆ ಸಂಬಂಧ ಹೊಂದಿವೆ. ಈ ಹಿನ್ನೆಲೆಯಲ್ಲಿ ಇದು ಮೇದೋಜ್ಜೀರಕ ಗ್ರಂಥಿ ಮತ್ತು ಹೃದಯ ಕಾಯಿಲೆಗಳ ನಡುವೆ ಪರೋಕ್ಷ ಸಂಬಂಧ ಹೊಂದಿದೆ.

ಪಿತ್ತಕೋಶದ ಕಲ್ಲುಗಳನ್ನು ಆರಂಭದ ಹಂತದಲ್ಲೇ ಪತ್ತೆ ಮಾಡುವುದು. ಆಲ್ಕೋಹಾಲ್​ ತ್ಯಜಿಸುವುದು ಈ ಪರಿಸ್ಥಿತಿ ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಡಾ ಅಶ್ವಿನಿ ತಿಳಿಸಿದ್ದಾರೆ.

ರೋಗದ ತಡೆ ಸೇರಿದಂತೆ ಆರೋಗ್ಯಯುತ ಜೀವನಶೈಲಿ ದೇಹದ ತೂಕದ ದರ ನಿರ್ವಹಣೆ, ಆಲ್ಕೋಹಾಲ್​ ಮತ್ತು ಧೂಮಪಾನದಿಂದ ದೂರವಿರುವುದು. ಅನಗತ್ಯ ಔಷಧ ಮತ್ತು ವಿಷಕಾರಿ ಚುಚ್ಚುಮದ್ದುಗಳಿಂದ ದೂರು ಇರುವುದು ಅಗತ್ಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಹೃದಯ ಸ್ತಂಭನದಿಂದ 'ಅನುಪಮಾ' ಖ್ಯಾತಿಯ ರಿತುರಾಜ್​ ಸಿಂಗ್​ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.