ETV Bharat / health

ಆ್ಯಂಟಿಬಯೋಟಿಕ್​ಗಳ ದುರ್ಬಳಕೆಯಿಂದ ಕಿಡ್ನಿಗೆ ಹಾನಿ; ಸಾರ್ವಜನಿಕರಲ್ಲಿ ಮೂಡಿಸಬೇಕಿದೆ ಅರಿವು

author img

By IANS

Published : Feb 17, 2024, 10:39 AM IST

ಯಾವುದೇ ವೈದ್ಯಕೀಯ ಶಿಫಾರಸು ಇಲ್ಲದೇ, ಸಾರ್ವಜನಿಕರು ಅಜಾಗರೂಕತೆಯಿಂದ ಆ್ಯಂಟಿಬಯೋಟಿಕ್​ ಬಳಕೆ ಮಾಡುತ್ತಿರುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

overuse of antibiotics leads to kidney problem

ಹೈದರಾಬಾದ್​: ಆ್ಯಂಟಿ ಬಯೋಟಿಕ್​ಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಆಂಟಿಮೈಕ್ರೊಬಿಯಲ್ ಪ್ರತಿರೋಧ, ಆರೋಗ್ಯ ವೆಚ್ಚದಲ್ಲಿ ಹೆಚ್ಚಳ, ಆ್ಯಂಟಿಬಯೋಟಿಕ್​ ಪರಿಣಾಮವನ್ನು ಕುಗ್ಗಿಸುವಿಕೆ ನಿರೋಧಕ ರೋಗಕಾರಕಗಳ ಹರಡುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು, ಮಿತಿ ಮೀರಿದ ಬಳಕೆ ಹೊರತಾಗಿ ವಿವೇಚನಾಯುಕ್ತ ಬಳಕೆ ಅಗತ್ಯವನ್ನು ತೋರಿಸುತ್ತದೆ.

ಆ್ಯಂಟಿ ಬಯೋಟಿಕ್​ಗಳ ಮಿತಿ ಮೀರಿದ ಶಿಫಾರಸು, ಅಪೂರ್ಣ ಚಿಕಿತ್ಸೆಗಳು, ನಿಯಂತ್ರಣದ ಕೊರತೆ, ಸಾರ್ವಜನಿಕ ನಿರ್ಲಕ್ಷ್ಯ ಮತ್ತು ಅಸಮರ್ಪಕ ಔಷಧಗಳ ಅಭಿವೃದ್ಧಿಯು ಆ್ಯಂಟಿ ಬಯೋಟಿಕ್​ಗಳ ತಪ್ಪು ಬಳಕೆ ಮತ್ತು ಅಧಿಕ ಬಳಕೆಗೆ ಕಾರಣವಾಗುತ್ತದೆ. ಈ ಆ್ಯಂಟಿ ಬಯೋಟಿಕ್​ ಕುರಿತ ಅಜ್ಞಾನವೂ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಇದು ಸಾರ್ವಜನಿಕ ಆರೋಗ್ಯದ ಮೇಲೆ ಬೆದರಿಕೆ ಒಡ್ಡುತ್ತವೆ.

ಆ್ಯಂಟಿಬಯೋಟಿಕ್​ಗಳ ಯಥೇಚ್ಛ ಬಳಕೆಯಿಂದ ಕಿಡ್ನಿ , ಲಿವರ್​ ಮತ್ತು ನರ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಮೂತ್ರಪಿಂಡಶಾಸ್ತ್ರಜ್ಞರು (ನೆಫ್ರಾಲಜಿಸ್ಟ್​​) ತಿಳಿಸಿದ್ದಾರೆ. ಇದರ ಹೊರತಾಗಿ ಆ್ಯಂಟಿಬಯೋಟಿಕ್​ಗಳ ಅಸಮಪರ್ಕ ಬಳಕೆಯು ಕಿಡ್ನಿ ಮೇಲೆ ಹೆಚ್ಚಿನ ಹಾನಿ ಮಾಡುವುದು ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್​ನ ಏಷ್ಯನ್​ ​ ಇನ್ಸಿಟಿಟ್ಯೂಟ್​ ಆಫ್​ ನೆಫ್ರಾಲಜಿ ಮತ್ತು ಯುರಾಲಾಜಿಯ ಮೂತ್ರಪಿಂಡಶಾಸ್ತ್ರಜ್ಞ ಡಾ ಎಂವಿ ರಾವ್​​​ ಹೇಳುವಂತೆ, ವೈದ್ಯಕೀಯ ಶಿಫಾರಸ್ಸಿಲ್ಲದೇ ಆ್ಯಂಟಿ ಬಯೋಟಿಕ್​ಗಳ ಮಾರಾಟದಿಂದ ಅತಿಯಾದ ಬಳಕೆ ಮತ್ತು ದುರ್ಬಳಕೆ ನಡೆಯುತ್ತಿದೆ. ಭಾರತದಲ್ಲಿ ಶಿಫಾರಸ್ಸಿನಲ್ಲದೇ ಔಷಧಗಳ ಮಾರಾಟವನ್ನು ತಡೆಯಬೇಕಿದೆ ಎಂದ ಅವರು ಸಲಹೆ ನೀಡಿದ್ದಾರೆ.

ಆ್ಯಂಟಿಬಯೋಟಿಕ್​ಗಳ ಮಿತಿಮೀರಿದ ಶಿಫಾರಸು ಮತ್ತು ಆ್ಯಂಟಿಬಯೋಟಿಕ್​ ಕೋರ್ಸ್ ಅನ್ನು ಸಂಪೂರ್ಣ ಮಾಡದೇ ಇರುವುದು ಮೂತ್ರಪಿಂಡದ ಹಾನಿ ಮತ್ತು ಆ್ಯಂಟಿಬಯೋಟಿಕ್​​ ನಿರೋದಕ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ ಶ್ರೀಕಾಂತ್​. ವಿಶೇಷ ಜಿನೆಟಿಕ್​ಗಳಿಂದ ಅವುಗಳನ್ನು ತಯಾರಿಸಲಾಗುತ್ತದೆ. ಅಮೋಕ್ಸಿಸಿಲಿನ್‌ನಂತಹ ಪೆನ್ಸಿಲಿನ್ ಗುಂಪುಗಳು ಈ ಆ್ಯಂಟಿಬಯೋಟಿಕ್​ ಬಳಕೆಯಿಂದಾಗಿ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ ಇದರಿಂದ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಮಾರಣಾಂತಿಕ ಮೂತ್ರದ ಸೋಂಕು ಬೆಳೆಯಬಹುದು. ಇದು ಮೂತ್ರದಿಂದ ರಕ್ತದಲ್ಲಿ ಯಾವುದೇ ಸಮಯದಲ್ಲಿ ಬೆರೆತು ರಕ್ತದ ಸೆಪ್ಸಿಸ್​ಗೆ ಕಾರಣವಾಗಬಹುದು.

ಇಂತಹ ಸೋಂಕು ಮುಂದೆ ಕಿಡ್ನಿ ಹಾನಿಗೆ ಕಾರಣವಾಗುತ್ತದೆ. ಸೆಪ್ಟಿಕ್​ ರಕ್ತವೂ ಕಿಡ್ನಿಯ ಕಾರ್ಯವನ್ನು ನಿಲ್ಲಿಸಬಹುದು. ಇದು ಕಿಡ್ನಿಯ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಆ್ಯಂಟಿಬಯೋಟಿಕ್​ಗಳ ಅಜಾಗರೂಕ ಬಳಕೆಯ ದುಷ್ಪರಿಣಾಮಗಳಿಂದ ಸಮುದಾಯವನ್ನು ರಕ್ಷಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೆಫ್ರಾಲಜಿಸ್ಟ್​​ಗಳು ಒತ್ತಿ ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಜನರಲ್ಲಿ ತಿಳಿವಳಿಕೆ ಹೆಚ್ಚಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಆಂಟಿಮೈಕ್ರೊಬಿಯಲ್​ಗಳ ಪರಿಣಾಮಕಾರಿ ಬಳಕೆಯನ್ನು ಹೆಚ್ಚಿಸಲು ಆಂಟಿಮೈಕ್ರೊಬಿಯಲ್ ಉಸ್ತುವಾರಿ ಕಾರ್ಯಕ್ರಮಗಳು ಅಗತ್ಯವಿದೆ. ಈ ಗುರಿಯು ರೋಗಿಗಳ ಆರೋಗ್ಯವನ್ನು ಸುಧಾರಿಸುವುದು, ಸುಧಾರಿಸುವುದು, ಸೂಕ್ಷ್ಮಜೀವಿಯ ಪ್ರತಿರೋಧವನ್ನು ಕಡಿಮೆ ಮಾಡುವುದು ಮತ್ತು ಔಷಧ-ನಿರೋಧಕ ಜೀವಿಗಳಿಂದ ಸೋಂಕನ್ನು ತಡೆಗಟ್ಟುವ ಗುರಿ ಹೊಂದಿದೆ

ಆ್ಯಂಟಿಬಯೋಟಿಕ್​ಗಳ ಡೋಸೆಜ್​, ಅವಧಿ ಮತ್ತು ನಿರ್ವಹಣೆ ವಿಧಾನ ಕುರಿತು ವೃತ್ತಿಪರರಿಗೆ ಮಾರ್ಗದರ್ಶನ​​ ನೀಡುತ್ತದೆ. ಪ್ರಿಸ್ಕ್ರಿಪ್ಷನ್ ರಹಿತ ಆಂಟಿಬಯೋಟಿಕ್‌ಗಳನ್ನು ಮಾರಾಟದ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ತಜ್ಞರು ಇದೇ ವೇಳೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತದ ಕೋಟ್ಯಂತರ ಮಹಿಳೆಯರನ್ನು ಕಾಡುತ್ತಿದೆ ಎಂಡೊಮೆಟ್ರಿಯೊಸಿಸ್: ಏನಿದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.