ಮೈಗ್ರೇನ್, ಬೆವರುವಿಕೆ: ಯುವತಿಯರಲ್ಲಿ ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚಿಸಬಹುದು

author img

By ETV Bharat Karnataka Team

Published : Feb 15, 2024, 8:31 AM IST

Migraine & hot flashes may raise heart disease, stroke risk in young women

ಮೈಗ್ರೇನ್ ಮತ್ತು ನಿರಂತರ ವಾಸೊಮೊಟರ್ ರೋಗಲಕ್ಷಣಗಳನ್ನು ಹೊಂದಿರುವ ಮಹಿಳೆಯರು ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ 1.5 ಪಟ್ಟು ಹೆಚ್ಚು ಎಂಬ ಅಂಶ ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ.

ನ್ಯೂಯಾರ್ಕ್( ಅಮೆರಿಕ): ಮೈಗ್ರೇನ್ ಮತ್ತು ನಿರಂತರ ಬಿಸಿ ಹೊಳಪಿನ ಅಂದರೆ ಬೆವರುವಿಕೆ, ಚರ್ಮ ಕೆಂಪಾಗುವಿಕೆ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಯ ಬೇಡ. ಏಕೆಂದರೆ ತೀವ್ರ ತಲೆನೋವು, ಹಾಗೂ ಬಿಸಿ ಹೊಳಪಿನ ರೋಗದಿಂದ ಮಹಿಳೆಯರು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಎದುರಿಸಬಹುದು ಎಂದು ಅಧ್ಯಯನವೊಂದು ಹೇಳಿದೆ.

ಮೆನೋಪಾಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯಲ್ಲಿ ಸಾಂಪ್ರದಾಯಿಕ ಹೃದಯ ಕಾಯಿಲೆಯ ಅಪಾಯದ ಅಂಶಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಈಸ್ಟ್ರೊಜೆನ್ ಬಳಕೆಯಿಂದ ಮೈಗ್ರೇನ್ ಮತ್ತು ಬಿಸಿ ಹೊಳಪಿನ ಅಥವಾ ರಾತ್ರಿ ಬೆವರುವಿಕೆಗಳ ಜಂಟಿ ಪ್ರಭಾವಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ರಕ್ತನಾಳಗಳ ಚಟುವಟಿಕೆಯಲ್ಲಿನ ಬದಲಾವಣೆಗಳಿಂದ ವಾಸೊಮೊಟರ್ ರೋಗಲಕ್ಷಣಗಳು ಉಂಟಾಗುತ್ತವೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಮೈಗ್ರೇನ್ ಮತ್ತು ನಿರಂತರ ವಾಸೊಮೊಟರ್ ರೋಗಲಕ್ಷಣಗಳನ್ನು ಹೊಂದಿರುವ ಮಹಿಳೆಯರು ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ 1.5 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಎರಡೂ ರೋಗಲಕ್ಷಣಗಳಿಲ್ಲದ ಮಹಿಳೆಯರಿಗೆ ಹೋಲಿಸಿದರೆ 1.7 ಪಟ್ಟು ಹೆಚ್ಚು ಪಾರ್ಶ್ವವಾಯುವಿಗೆ ಮೈಗ್ರೇನ್​​​​​​​ ಹೊಂದಿರುವವರು ಒಳಗಾಗುತ್ತಾರೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಈ ಅಧ್ಯಯನವು ಮಹಿಳೆಯರಲ್ಲಿ ಹೃದಯರಕ್ತನಾಳದ ಅಪಾಯವನ್ನು ನಿರ್ಣಯಿಸುವಾಗ ಮೈಗ್ರೇನ್ ಇತಿಹಾಸ ಮತ್ತು ನಿರಂತರ ವಾಸೋಮೊಟರ್ ರೋಗಲಕ್ಷಣಗಳಂತಹ ಸ್ತ್ರೀ-ಪ್ರಧಾನ ಅಥವಾ ಸ್ತ್ರೀ-ನಿರ್ದಿಷ್ಟ ಅಂಶಗಳನ್ನು ಪರಿಗಣಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಮೆನೋಪಾಸ್ ಸೊಸೈಟಿಯ ವೈದ್ಯಕೀಯ ನಿರ್ದೇಶಕರಾದ ಡಾ ಸ್ಟೆಫನಿ ಫೌಬಿಯನ್ ಹೇಳಿದ್ದಾರೆ. ಭವಿಷ್ಯದಲ್ಲಿ ಅಪಾಯ ಎದುರಿಸುವ ಮಹಿಳೆಯರನ್ನು ಹೆಚ್ಚು ನಿಖರವಾಗಿ ಗುರುತಿಸಲು, ಪ್ರಸ್ತುತ ಅಸ್ತಿತ್ವದಲ್ಲಿರುವ ಹೃದಯರಕ್ತನಾಳದ ಕಾಯಿಲೆಯ ಅಪಾಯ -ಮುನ್ಸೂಚನೆ ಮಾದರಿಗಳನ್ನು ಮತ್ತಷ್ಟು ಪರಿಷ್ಕರಿಸುವ ಅವಶ್ಯಕತೆಯಿದೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.

ಸುಮಾರು 2,000 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿ ಈ ಮೇಲಿನ ಅಂಶಗಳನ್ನು ಕಂಡು ಹಿಡಿಯಲಾಗಿದೆ. ಫಲಿತಾಂಶಗಳು ಗಮನಾರ್ಹವಾಗಿವೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಮೈಗ್ರೇನ್ ಮತ್ತು ಬಿಸಿ ಹೊಳಪಿನ ಕಾಯಿಲೆಗಳು ತುಂಬಾ ಕಾಮನ್​ ಆಗಿವೆ. ಋತುಬಂಧದ ಮೂಲಕ ಪರಿವರ್ತನೆಗೊಳ್ಳುವ ಸುಮಾರು 80 ಪ್ರತಿಶತ ಮಹಿಳೆಯರ ಮೇಲೆ ರಾತ್ರಿ ಬೆವರುವಿಕೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ.

ಆದಾಗ್ಯೂ ಈ ರೋಗಲಕ್ಷಣಗಳು ಆಯಾಯ ಕಾಲ, ವ್ಯಕ್ತಿ ಹಾಗೂ ಭಿನ್ನ ಪರಿಸ್ಥಿತಿಗಳಲ್ಲಿ ಬೇರೆ ಬೇರೆಯಾಗಿರಬಹುದು. ತೀವ್ರ ತಲೆನೋವು ವಿಶೇಷವಾಗಿ ಸಂತಾನೋತ್ಪತ್ತಿ ವಯಸ್ಸು ಮೀರಿದವರಲ್ಲಿ ಸಾಮಾನ್ಯವಾಗಿದೆ. ಇದು ಸರಿಸುಮಾರು 17.5 ಪ್ರತಿಶತ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದ ವೇಳೆ ತಿಳಿದು ಬಂದಿದೆ.


ಇದನ್ನು ಓದಿ: ಭಾರತದಲ್ಲಿ ಮಧ್ಯವಯಸ್ಸಿನ 22 ಕೋಟಿ ಜನರನ್ನು ಕಾಡುತ್ತಿದೆ ದುರ್ಬಲತೆ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.