ETV Bharat / health

ಸರಿಯಾದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು, ಇಲ್ಲದಿದ್ದರೇ ಕಣ್ಣಿನ ಸಮಸ್ಯೆ ಕಟ್ಟಿಟ್ಟ ಬುತ್ತಿ - Impact Of Sleep On Eye Health

author img

By ETV Bharat Karnataka Team

Published : May 6, 2024, 5:04 PM IST

Impact Of Sleep On Eye Health: ನಿಮ್ಮ ಕಣ್ಣುಗಳು ಆಗಾಗ್ಗೆ ಒಣಗುತ್ತವೆಯೇ? ಕಣ್ಣಿನ ದೋಷವೂ ಇದೆಯೇ? ಆದರೆ ಮೊದಲು ನೀವು ಸರಿಯಾಗಿ ನಿದ್ದೆ ಮಾಡುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ನಿದ್ರೆಗೂ ಕಣ್ಣಿನ ಆರೋಗ್ಯಕ್ಕೂ ಬಹಳ ಸಂಬಂಧವಿದೆ.

DRY EYE SYNDROME  FLOPPY EYELID SYNDROME  TRANSIENT MYOPIA  EYE CARE
ಸರಿಯಾದ ನಿದ್ರೆ ಆರೋಗ್ಯ ಒಳ್ಳೆಯದು, ಇಲ್ಲದಿದ್ದರೇ ಕಣ್ಣಿನ ಸಮಸ್ಯೆ ಕಟ್ಟಿಟ್ಟ ಬುತ್ತಿ (Etv Bharat)

ಹೈದರಾಬಾದ್​: ಪದೇ ಪದೆ ಕಣ್ಣುಗಳು ಒಣಗುವುದು ಮತ್ತು ದೃಷ್ಟಿ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂದು ಅರ್ಥ, ಮೊದಲು ಈ ಬಗ್ಗೆ ಪರೀಕ್ಷಿಸಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕಣ್ಣಿನ ಆರೋಗ್ಯಕ್ಕೆ ಸರಿಯಾದ ನಿದ್ದೆ ಅತ್ಯಗತ್ಯ. ನಾವು ದಿನವಿಡೀ ಎಷ್ಟೇ ಕೆಲಸಗಳನ್ನು ಮಾಡಿದರೂ, ಎಷ್ಟೇ ಬ್ಯುಸಿ ಇದ್ದರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು. ಸಾಕಷ್ಟು ನಿದ್ದೆ ಮಾಡದೇ ಇದ್ದಾಗ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ನಿದ್ದೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ದೆ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಕಣ್ಣಿನ ಆರೋಗ್ಯಕ್ಕೂ ನಿದ್ರೆಗೂ ಸಂಬಂಧವೇನು?: ದೇಹದ ಇತರ ಭಾಗಗಳಂತೆ ಕಣ್ಣುಗಳಿಗೆ ವಿಶ್ರಾಂತಿ ಮತ್ತು ಪುನಶ್ಚೇತನಕ್ಕೆ ಸಮಯಬೇಕು. ನಿದ್ದೆ ಮಾಡುವಾಗ ಕಣ್ಣುಗಳು ರಿಫ್ರೇಶ್​​ ಆಗುತ್ತವೆ. ಇದು ಉತ್ತಮ ದೃಷ್ಟಿ ಮತ್ತು ಕಣ್ಣಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಈ ರಾತ್ರಿಯ ಪ್ರಕ್ರಿಯೆ ದಿನವಿಡೀ ಧೂಳು, ಅಲರ್ಜಿನ್ ಮತ್ತು ಇತರ ಕಸ ಕಣ್ಣಿನಲ್ಲಿ ಸೇರಿಕೊಂಡಿರುವುದನ್ನು ಹೊರಹಾಕುತ್ತದೆ ಎನ್ನುತ್ತಾರೆ ತಜ್ಞರು.

Dry Eye Syndrome: ಸರಿಯಾದ ನಿದ್ದೆ ಇಲ್ಲದಿರುವುದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಒಂದು ಡ್ರೈ ಐ ಸಿಂಡ್ರೋಮ್ ಎಂಬ ಸಮಸ್ಯೆ ಉಂಟಾಗುತ್ತದೆ. ಇದು ಕಣ್ಣುಗಳನ್ನು ಹೈಡ್ರೀಕರಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇವು ಕಿರಿಕಿರಿ, ಕಣ್ಣು ಕೆಂಪಾಗುವುದು ಸೇರಿದಂತೆ ಇತರ ಕಿರಿಕಿರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇವುಗಳ ಜೊತೆಗೆ ದೃಷ್ಟಿದೋಷವೂ ಉಂಟಾಗಬಹುದು ಎನ್ನುತ್ತಾರೆ ತಜ್ಞರು.

Floppy Eyelid Syndrome: ನಿದ್ದೆಯ ಕೊರತೆಯಿಂದ ಉಂಟಾಗಬಹುದಾದ ಮತ್ತೊಂದು ಸಮಸ್ಯೆ ಫ್ಲಾಪಿ ಐಲಿಡ್ ಸಿಂಡ್ರೋಮ್. ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ಸಿಗದಿದ್ದಾಗ ಉಂಟಾಗುವ ಸಮಸ್ಯೆ ಫ್ಲಫಿ ಐಲಿಡ್ ಸಿಂಡ್ರೋಮ್. ಈ ರೋಗದ ಲಕ್ಷಣಗಳು ನಿದ್ದೆ ಮಾಡುವಾಗ ಕಣ್ಣುರೆಪ್ಪೆಗಳಲ್ಲಿ ಅಸ್ವಸ್ಥತೆ ಉಂಟುಮಾಡುತ್ತದೆ. ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳನ್ನು ಅಡ್ಡಿಪಡಿಸುವುದು, ಕಿರಿಕಿರಿ ಮತ್ತು ಕಾರ್ನಿಯಲ್ ಸವೆತಕ್ಕೆ ಕಾರಣವಾಗುತ್ತದೆ.(short term near sightedness)

Transient Myopia: ನಿದ್ದೆಯ ಗುಣಮಟ್ಟ ಮತ್ತು ದೃಷ್ಟಿಯ ನಡುವಿನ ಮತ್ತೊಂದು ನೇರ ಸಂಪರ್ಕ ಎಂದರೆ ನಿದ್ದೆ ಕೊರತೆಯು ಕಣ್ಣಿನ ಮಸೂರವನ್ನು ಕೇಂದ್ರೀಕರಿಸುವ ಜವಾಬ್ದಾರಿಯುತ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಇದು ಅಸ್ಥಿರ ಸಮೀಪದೃಷ್ಟಿ, ಅಲ್ಪಾವಧಿಯ ಸಮೀಪ ದೃಷ್ಟಿಯಂತಹ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಕಣ್ಣು ವಿಶ್ರಾಂತಿ ಪಡೆದಾಗ ಈ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ನಿದ್ದೆಯ ಅಸ್ವಸ್ಥತೆಗಳು ಕಣ್ಣಿನ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಕೆಲವು ಸಂಶೋಧನೆಗಳು ಬಲವಾಗಿ ಸೂಚಿಸುತ್ತವೆ. ಗ್ಲುಕೋಮಾವು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ (OSA) ಜೊತೆಗೆ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಇದು ಸರಿಯಾದ ನಿದ್ದೆ ಕೊರತೆಯಿಂದ ಉಂಟಾಗುವ ಸಮಸ್ಯೆ ಮತ್ತು ಕಣ್ಣುಗಳಿಗೆ ಸರಿಯಾಗಿ ಆಮ್ಲಜನಕ ಸಿಗದೇ ಹೋದಾಗ ನರಗಳಿಗೆ ಹಾನಿಯಾಗುವ ಸಂಭವ ಇದೆ ಎನ್ನುತ್ತಾರೆ ತಜ್ಞರು.

ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡುವುದು? : ಕಣ್ಣಿನ ಆರೋಗ್ಯಕ್ಕೆ ನಿದ್ದೆಯನ್ನು ಸಕರಾತ್ಮಕವಾಗಿಸಲು ಕೆಲವು ನಿದ್ರೆಯ ಅಭ್ಯಾಸಗಳು ಅತ್ಯಗತ್ಯ.

  • ಟೈಂ ಟೆಬಲ್​ ಸೆಟ್​ ಮಾಡಿ ಮಲಗಲು ಸಮಯವನ್ನು ನಿಗದಿಪಡಿಸಿ..
  • ನಿದ್ದೆಯ ವಾತಾವರಣ ಸೃಷ್ಟಿಸುವುದಕ್ಕೆ ನಿಮ್ಮ ಮಲಗುವ ಕೋಣೆ ಕತ್ತಲು ಮತ್ತು ಶಾಂತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು..
  • ಮಲಗುವ ಮುನ್ನ ಕೆಫೀನ್‌ನಂತಹ ವಸ್ತುಗಳನ್ನು ತಪ್ಪಿಸಿ..
  • ಕೋಣೆಯ ಉಷ್ಣಾಂಶ ತಂಪಾಗಿರಿಸಲು ಮತ್ತು ಚೆನ್ನಾಗಿ ನಿದ್ದೆ ಮಾಡಲು ಸಾಕಷ್ಟು ಆರ್ದ್ರತೆಯ ಮಟ್ಟ ಕಾಪಾಡಿಕೊಳ್ಳಿ ಎಂದು ತಜ್ಞರ ಸಲಹೆಯಾಗಿದೆ.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಓದಿ: ಕಣ್ಣುಕೆಂಪಾಗುವುದೇಕೆ? ಏನಿದು ಸಮಸ್ಯೆ: ಈ ಸಲಹೆ ಪಾಲಿಸಿದರೆ ಇದಕ್ಕಿದೆ ಸುಲಭ ಪರಿಹಾರ - Conjuctivities Causes And Symptoms

ETV Bharat Logo

Copyright © 2024 Ushodaya Enterprises Pvt. Ltd., All Rights Reserved.