ETV Bharat / health

ಎಚ್ಚರ! ಬೇಸಿಗೆ ಎಂದು ಅತಿ ಹೆಚ್ಚು ನೀರು ಕುಡಿಯುವುದರಿಂದಲೂ ಇದೆ ಆಪತ್ತು - Drinking excessive water problem

author img

By ETV Bharat Karnataka Team

Published : Apr 4, 2024, 12:59 PM IST

ನಿರ್ಜಲೀಕರಣಕ್ಕೆ ಒಳಗಾಗಬಾರದು ಎಂದು ಯಥೇಚ್ಛ ನೀರು ಕುಡಿಯುವುದರಿಂದ ಮತ್ತೊಂದು ಸಮಸ್ಯೆ ಎದುರಾಗುತ್ತದೆ.

health-new-drinking-excessive-water-can-cause-bp-problems
health-new-drinking-excessive-water-can-cause-bp-problems

ಹೈದರಾಬಾದ್​: ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ನಿರ್ಜಲೀಕರಣಕ್ಕೆ ಒಳಗಾಗಬಾರದು ಎಂದು ಯಥೇಚ್ಛವಾಗಿ ನೀರು ಸೇವನೆಗೆ ಮುಂದಾಗುತ್ತೇವೆ. ಅಥವಾ ಬಾಯಾರಿದಾಕ್ಷಣ ಅದನ್ನು ನೀಗಿಸಲು ಹೆಚ್ಚು ನೀರು ಸೇವಿಸುತ್ತೇವೆ. ಆದರೆ, ಈ ಎರಡು ಸ್ಥಿತಿಗಳು ಕೂಡ ಅಪಾಯಕಾರಿ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಲಕ್ನೋನ ಸಿಎಂಎಸ್​ ಆಫ್​​ ಸಿವಿಲ್​ ಆಸ್ಪತ್ರೆಯ ಡಾ ರಾಜೇಶ್​ ಕುಮಾರ್​ ಶ್ರೀವಾತ್ಸವ್ ತಿಳಿಸಿದ್ದಾರೆ.

ಡಾ ರಾಜೇಶ್​ ಕುಮಾರ್​ ಶ್ರೀವಾತ್ಸವ
ಡಾ ರಾಜೇಶ್​ ಕುಮಾರ್​ ಶ್ರೀವಾತ್ಸವ

ಬೇಸಿಗೆಯಲ್ಲಿ ದೇಹದ ಗ್ಲುಕೋಸ್​ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸಾಮಾನ್ಯವಾಗಿ ಆರೋಗ್ಯಯುತ ವಯಸ್ಕ ವ್ಯಕ್ತಿ ದಿನಕ್ಕೆ 3 ರಿಂದ 4 ಲೀ. ನೀರನ್ನು ಸೇವಿಸಬೇಕು.

ನೀರು ಸೇವಿಸುವಾಗ ಈ ಬಗ್ಗೆ ಗಮನವಹಿಸಿ

  • ದಿನದಲ್ಲಿ ಅಂದರೆ 24 ಗಂಟೆ ಅವಧಿಯಲ್ಲಿ ಆರೋಗ್ಯಯುತ ವ್ಯಕ್ತಿ 3 ರಿಂದ 4 ಲೀಟರ್​ ನೀರು ಸೇವನೆ ಮಾಡಿದರೆ ಸಾಕು. ಇದಕ್ಕಿಂತ ಹೆಚ್ಚಿನ ನೀರಿನ ಸೇವೆ ಆರೋಗ್ಯಕ್ಕೆ ಒಳಿತಲ್ಲ.
  • ದೇಹದಲ್ಲಿ ಗ್ಲುಕೋಸ್​ ನಷ್ಟ ಉಂಟಾಗುವುದು ಕಡಿಮೆ ನೀರು ಸೇವನೆಯಿಂದಲೂ ಆಗಿರುತ್ತದೆ.
  • ನೀರನ್ನು ಒಂದೇ ಸಾರಿ ಕುಡಿಯದೇ ಗುಟುಕು ಗುಟುಕಾಗಿ ಕುಡಿಯಬೇಕು. ಇದರಿಂದ ದೇಹದ ತಾಪಮಾನದ ಸಮತೋಲನ ಕಾಪಾಡಬಹುದು.
  • ಊಟವಾದ ತಕ್ಷಣಕ್ಕೆ ಅರ್ಧ ಲೀಟರ್​ ನೀರು ಕುಡಿಯುವುದರಿಂದ ಕೂಡ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ.
  • ಒಂದೇ ಬಾರಿಗೆ ಒಂದು ಲೀಟರ್​ ಮತ್ತು ಅದಕ್ಕಿಂತ ಹೆಚ್ಚಿನ ನೀರು ಕುಡಿಯುವುದರಿಂದಲೂ ಆತಂಕ, ಗೊಂದಲ ಮತ್ತು ಬಿಪಿ ಸಮಸ್ಯೆ ಕಾಡುತ್ತದೆ.
    ನೀರು ಕುಡಿಯುವ ಸರಿಯಾದ ವಿಧಾನ
    ನೀರು ಕುಡಿಯುವ ಸರಿಯಾದ ವಿಧಾನ

ನೀರು ಕುಡಿಯುವ ಸರಿಯಾದ ವಿಧಾನ:

  • ಮಧ್ಯಂತರ ಅವಧಿಯಲ್ಲಿ ನೀರನ್ನು ಕುಡಿಯಬೇಕು. ಅಂದರೆ, ಒಂದೇ ಬಾರಿಯಲ್ಲದೇ, ಕೆಲವು ಸಮಯದ ಬಳಿಕ ಸೇವನೆ ಮಾಡಬೇಕು.
  • ಏಕ ಕಾಲದಲ್ಲಿ ಒಂದು ಲೀಟರ್​ ನೀರು ಸೇವಿಸಿದರೆ ಅದು ಶ್ವಾಸಕೋಶ ನಾಳದಲ್ಲಿ ಸೇರುವ ಸಂಭವ ಇರುತ್ತದೆ ಎಂಬುದನ್ನು ಮರೆಯಬಾರದು.
  • ಊಟಕ್ಕೆ ಮುನ್ನ ಮತ್ತು ಊಟವಾದ ಬಳಿಕ ಒಂದು ಗ್ಲಾಸ್​ ನೀರು ಸೇವಿಸಬೇಕು.
  • ಊಟ ಸೇವನೆ ಮಧ್ಯದಲ್ಲಿ ನಿರಂತರವಾಗಿ ನೀರು ಕುಡಿಯಬಾರದು. ಊಟವಾದ ಕೆಲ ಸಮಯದ ಬಳಿಕ ನೀರು ಕುಡಿಯುವುದು ಉತ್ತ,
  • ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಹೊಟ್ಟೆ ಸಂಬಂಧಿತ ಸಮಸ್ಯೆಗಳು ದೂರ ಮಾಡಬಹುದು.
  • ಯೋಗ, ವ್ಯಾಯಾಮವಾದ ಅರ್ಧ ಗಂಟೆ ಬಳಿಕ ನೀರು ಕುಡಿಯುವುದು ಉತ್ತಮ.
  • ಮಲಗುವ ಮುನ್ನ ಮತ್ತು ಸ್ನಾನಕ್ಕೆ ಮುನ್ನ ಕೂಡ ನೀರು ಸೇವನೆ ಮಾಡುವುದು ಅವಶ್ಯ.
  • ಬೇಸಿಗೆಯಲ್ಲಿ ಹೊರಗಿನಿಂದ ಮನೆಗೆ ಬಂದಾಕ್ಷಣ ತಣ್ಣಗಿನ (ಕೋಲ್ಡ್​​) ನೀರು ಸೇವನೆಯನ್ನು ತಕ್ಷಣವೇ ಮಾಡಬಾರದು. ಇದು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

(ಸೂಚನೆ: ಇಲ್ಲಿ ನೀಡಿರುವ ಮಾಹಿತಿ ವೈದ್ಯಕೀಯ ಸಲಹೆಯಾಗಿದೆ. ಈಟಿವಿ ಭಾರತ್​​ ಇವುಗಳ ಹಕ್ಕನ್ನು ಪ್ರಮಾಣೀಕರಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.)

ಇದನ್ನೂ ಓದಿ: ದೇಶದಲ್ಲಿ ಬಿರು ಬೇಸಿಗೆ; ಶಾಖದ ಅಲೆಯಿಂದ ಸುರಕ್ಷಿತವಾಗಿರಲು ಈ ಸಲಹೆಗಳನ್ನು ಪಾಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.