ETV Bharat / health

ಡಯಟ್​ನಲ್ಲಿ ಅತಿ ಹೆಚ್ಚು ಪ್ರೋಟೀನ್​ ಸೇವಿಸುವುದು ಕೂಡ ಅಪಾಯ: ಅಧ್ಯಯನದಲ್ಲಿ ಬಹಿರಂಗ

author img

By ANI

Published : Feb 20, 2024, 12:58 PM IST

ಆಹಾರದಲ್ಲಿ ಹೆಚ್ಚಿನ ಪ್ರೋಟೀನ್​ ಸೇವನೆ ಮಾಡುವುದು ಕಳೆದೊಂದು ದಶಕದಿಂದ ಟ್ರೆಂಡ್​ ಆಗಿದೆ. ಆದರೆ, ಇದು ಅಪಧಮನಿಕಾಠಿಣ್ಯ ರೋಗಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

Consuming too much protein leads to health risk

ವಾಷಿಂಗ್ಟನ್​ ಡಿಸಿ( ಅಮೆರಿಕ): ಅತಿ ಹೆಚ್ಚಿನ ಪ್ರೋಟೀನ್​ ಡಯಟ್​ ಸೇವನೆ ಅಪಧಮನಿ ಕಾಯಿಲೆ ಅಪಾಯವನ್ನು ಹೆಚ್ಚಿಸಬಹುದು ಎಂದು ಯುನಿವರ್ಸಿಟಿ ಆಫ್​ ಪಿಟ್ಸ್​ಬರ್ಗ್​​ ಸ್ಕೂಲ್​ ಆಫ್​ ಮೆಡಿಸಿನ್​ ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನವನ್ನು ನೇಚರ್​ ಮೆಟಬೊಲಿಸಮ್​ನಲ್ಲಿ ಪ್ರಕಟಿಸಲಾಗಿದೆ.

ಪೆಟ್ರಿ ಎಂಬ ಆಹಾರದಲ್ಲಿ ಇಲಿ ಮತ್ತು ಕೋಶಗಳ ಪ್ರಯೋಗದ ಜೊತೆಗೆ ಸಣ್ಣ ಪ್ರಮಾಣದಲ್ಲಿ ಮಾನವ ಪ್ರಯೋಗವನ್ನು ಸಂಯೋಜಿಸಿ ಈ ಅಧ್ಯಯನ ನಡೆಸಲಾಗಿದೆ. ಅಧ್ಯಯನದ ಫಲಿತಾಂಶದಲ್ಲಿ ಶೇ 22ಕ್ಕಿಂತ ಹೆಚ್ಚಿನ ಪ್ರೋಟಿನಿಂದ ಕೂಡಿದ ಆಹಾರದ ಕ್ಯಾಲೋರಿಗಳು ಪ್ರತಿ ರಕ್ಷಣಾ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಅಪಧಮನಿಕಾಠಿಣ್ಯದ ಪ್ಲೇಕ್ ರಚನೆ ಆಗಿ ರೋಗದ ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಂತರದಲ್ಲಿ ವಿಜ್ಞಾನಿಗಳು ಒಂದು ಅಮೈನೋ ಆಮ್ಲ ಲ್ಯುಸಿನ್ ಅಪಧಮನಿ ರೋಗ ಹೆಚ್ಚಳದ ಪಾತ್ರವನ್ನು ಹೊಂದಿದೆ.

ಉತ್ತಮ ಚಯಾಪಚಯ ಆರೋಗ್ಯಕ್ಕಾಗಿ ಪ್ರೋಟೀನ್ ಸೇವನೆಯನ್ನು ಮಾಡುವುದು ಪರಿಹಾರವಲ್ಲ ಎಂದು ನಮ್ಮ ಅಧ್ಯಯನವು ತೋರಿಸುತ್ತದೆ. ಇದರಿಂದ ನೀವು ಅಪಧಮನಿಗೆ ನಿಜಕ್ಕೂ ಹೆಚ್ಚು ಹಾನಿ ಮಾಡುತ್ತಿರಬಹುದು ಎಂದು ಅಧ್ಯಯನದ ಸಹ ಲೇಖಕರಾದ ಬಬಕ್​ ರಜಾನಿ ತಿಳಿಸಿದ್ದಾರೆ.

ದೇಹದ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುವ ಮತ್ತು ರೋಗದ ಅಪಾಯಗಳನ್ನು ಕಡಿಮೆ ಮಾಡುವ ನಿಖರವಾದ ರೀತಿಯಲ್ಲಿ ಆಹಾರಕ್ರಮವನ್ನು ಮಾರ್ಪಡಿಸುವ ವಿಧಾನ ಕುರಿತು ನಮ್ಮ ಸಂಶೋಧನೆ ತಿಳಿಸುತ್ತದೆ. ಸಮೀಕ್ಷೆ ಪ್ರಕಾರ, ಕಳೆದ ದಶಕದಿಂದ ಅಮೆರಿಕದ ಡಯಟ್​ನಲ್ಲಿ ಜನರು, ಪ್ರಾಣಿ ಮೂಲದ ಹೆಚ್ಚಿನ ಪ್ರೋಟೀನ್​ ಬಳಕೆಗೆ ಮುಂದಾಗಿದ್ದಾರೆ. ಕಾಲು ಭಾಗದಷ್ಟಿ ಜನರು ದಿನಕ್ಕೆ ಶೇ 22ರಷ್ಟು ಪ್ರಮಾಣದ ನಿತ್ಯದ ಕ್ಯಾಲೋರಿಯನ್ನು ಪ್ರೋಟೀನ್ ​ನಿಂದಲೇ ಪಡೆಯುತ್ತಿದ್ದಾರೆ. ಈ ಟ್ರೆಂಡ್​ ಜನರಲ್ಲಿ ಆರೋಗ್ಯಯುತ ಜೀವನ ನಡೆಸಲು ಪ್ರೋಟೀನ್​ ಡಯಟ್​ ಸೇವಿಸುವುದು ಅಗತ್ಯ ಎಂಬ ಜನಪ್ರಿಯತೆಯನ್ನು ಬಿಂಬಿಸುತ್ತದೆ ಎಂದು ರಜಾನಿ ತಿಳಿಸಿದ್ದಾರೆ

ಆದರೆ, ಅಧ್ಯಯನದಲ್ಲಿ ಅತಿಯಾದ ಪ್ರೋಟೀನ್​ ಅನ್ನು ದೀರ್ಘಕಾಲದ ಆರೋಗ್ಯದಲ್ಲಿ ಬಳಕೆ ಮಾಡುವುದು ಉತ್ತಮವಾದ ವಿಧಾನವಲ್ಲ. 2020ರ ಸಂಶೋಧನೆಯಲ್ಲೂ ರಜಾನಿ ಪ್ರಯೋಗಾಲಯದಲ್ಲಿ ಮೊದಲ ಬಾರಿಗೆ ಪ್ರೋಟೀನ್​ ಅತಿಹೆಚ್ಚಿನ ಬಳಕೆ ಅಪಧಮನಿಕಾಠಿಣ್ಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ತಿಳಿಸಿದರು. ಅವರ ಮುಂದಿನ ಅಧ್ಯಯನವನ್ನು ಚಯಾಪಚಯ ತಜ್ಞರಾದ ಕೊಲಂಬಿಯಾದ ಮಿಸ್ಸೋರಿ ಯುನಿವರ್ಸಿಟಿಯ ಬೆಟ್ಟಿನಾ ಮಿಟೆಂಡೋರ್ಫರ್ ಜೊತೆ ನಡೆಸಿದರು. ಇದು ಸಂಭಾವ್ಯ ಕಾರ್ಯವಿಧಾನ ಮತ್ತು ಮಾನವ ದೇಹಕ್ಕೆ ಅದರ ಪ್ರಸ್ತುತತೆಯನ್ನು ಆಳವಾಗಿ ಅಧ್ಯಯನ ಮಾಡಿದೆ. ಸೆಲ್ಯುಲಾರ್ ಬಯಾಲಜಿ ಮತ್ತು ಮೆಟಾಬಾಲಿಸಮ್‌ ಸಂಯೋಜನೆ ಹಲವು ಮಾದರಿಗಳು ಇಲಿಗಳಿಂದ ಮಾನವನ ಕೋಶದ ವರೆಗೆ ಹಲವು ಪ್ರಯೋಗ ನಡೆಸಲಾಗಿದೆ.

ಪ್ರೋಟೀನ್‌ನ ಬಿಲ್ಡಿಂಗ್ ಬ್ಲಾಕ್ಸ್ ಆಗಿರುವ ಅಮೈನೋ ಆಮ್ಲಗಳು ನಿರ್ದಿಷ್ಟ ಸಿಗ್ನಲಿಂಗ್ ಕಾರ್ಯವಿಧಾನಗಳ ಮೂಲಕ ರೋಗವನ್ನು ಪ್ರಚೋದಿಸಬಹುದು. ಬಳಿಕ ಇದು ಜೀವಕೋಶಗಳ ಚಯಾಪಚಯವನ್ನು ಬದಲಾಯಿಸಬಹುದು ಅಧ್ಯಯನ ತಿಳಿಸಿದೆ ಎಂದು ಬೆಟ್ಟಿನಾ ತಿಳಿಸಿದ್ದಾರೆ.

ಡಯಟ್​ನಲ್ಲಿ ಪ್ರಮುಖ ವಿಷಯದ ಬದಲಾಗಿ, ಒಟ್ಟಾರೆ ಆಹಾರದ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಇದು ಹೃದಯದ ಕಾಯಿಲೆ ಮತ್ತು ರಕ್ತದ ಅಸ್ವಸ್ಥತೆಗಳ ಅಪಾಯದಲ್ಲಿರುವರಲ್ಲಿ ಯಾವುದೇ ಸಮಸ್ಯೆ ಮೂಡಿಸುವುದಿಲ್ಲ.

ಇದನ್ನೂ ಓದಿ: ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಅಪಾಯ: ಬಯೋಮಾಸ್​​​​ ಇಂಧನ ಬಳಕೆಯೇ ಇಷ್ಟಕ್ಕೆಲ್ಲ ಕಾರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.