ETV Bharat / health

ಪಕ್ಷಿಗಳ ಸಂಪರ್ಕದಲ್ಲಿರುವ ಮಾನವರಿಗೂ ಹರಡುತ್ತಾ ಹಕ್ಕಿ ಜ್ವರ? - bird flu virus mutations

author img

By IANS

Published : Apr 30, 2024, 12:54 PM IST

ಮಾನವರಿಂದ ಮಾನವರಿಗೆ ಸೋಂಕು ಹರಡುವ ಯಾವುದೇ ದಾಖಲೆಗಳಿಲ್ಲ. ಆದರೆ, ಇತ್ತೀಚೆಗೆ ಈ ಸೋಂಕು ಪ್ರಾಣಿಗಳಲ್ಲಿ ಕಂಡು ಬಂದಿರುವುದು ಈ ವಾದಕ್ಕೆ ಪುಷ್ಟಿ ನೀಡಿದೆ.

bird flu virus mutations show it may be inching closer to humans,
bird flu virus mutations show it may be inching closer to humans,

ನವದೆಹಲಿ: ಹಕ್ಕಿ ಹ್ವರವೂ ಮಾನವನಿಂದ ಮನುಷ್ಯನಿಗೆ ನಿರಂತರ ಹರಡುವಿಕೆಯ ಯಾವುದೇ ದಾಖಲೆಗಳಿಲ್ಲದಿದ್ದರೂ, ಇತ್ತೀಚಿನ ವೈರಸ್ ರೂಪಾಂತರಗಳು ಅದು ಮನುಷ್ಯರಿಗೆ ಹರಡುಬಹುದು ಎಂದು ತೋರಿಸಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಹಕ್ಕಿ ಜ್ವರ ಅಥವಾ ಎಚ್​5 ಎನ್​1 ಸೋಂಕು ಕೋಳಿ ಸಾಕಣೆ ಕೇಂದ್ರದಿಂದ ಹರಡುವುದರಲ್ಲಿ ಹೊಸದೇನೂ ಇಲ್ಲ. ಭಾರತದ ಹಲವು ಕೋಳಿ ಸಾಕಣೆ ಕೇಂದ್ರ ಸೇರಿದಂತೆ ಜಗತ್ತಿನೆಲ್ಲೆಡೆ ಈ ರೀತಿಯಾಗಿ ಹಕ್ಕಿ ಜ್ವರ ಹರಡುತ್ತಿದೆ. ವಲಸೆ ಬರುವ ಹಕ್ಕಿಗಳು ಕೋಳಿ ಸಾಕಣೆ ಕೇಂದ್ರದಲ್ಲಿ ಸೋಂಕು ಉಂಟಾಗಲು ಕಾರಣವಾಗುತ್ತದೆ. ಆದಾಗ್ಯೂ, ಇತ್ತೀಚಿನ ವರ್ಷದಲ್ಲಿ ಈ ಹಕ್ಕು ಜ್ವರದ ಸೋಂಕು ಎಚ್​5ಎನ್​1 ಪ್ರಾಣಿಗಳಿಗೂ ಹರಡುತ್ತಿದೆ.

2023ರಲ್ಲಿ ಎಚ್​5ಎನ್​1 ಸೋಂಕಿನಿಂದ ದಾಖಲೆ ಪ್ರಮಾಣದ ಹಕ್ಕಿಗಳು ಸಾವನ್ನಪ್ಪಿದವು. ಈ ಸೋಂಕು ನೀರುನಾಯಿಗಳು, ಸಮುದ್ರ ಸಿಂಹಗಳು, ನರಿಗಳು, ಡಾಲ್ಫಿನ್ಗಳು ಮತ್ತು ಸೀಲ್​ ಸೇರಿದಂತೆ ಇತರ ಪ್ರಾಣಿಗಳಲ್ಲಿ ಹರಡಿತು. ಇತ್ತೀಚೆಗೆ ಇದು ಅಮೆರಿಕದ ಜಾನುವಾರುಗಳಲ್ಲಿ ಕೂಡ ಕಂಡಿದೆ. ಅಮೆರಿಕದಲ್ಲಿನ ಆರೋಗ್ಯ ಅಧಿಕಾರಿಗಳು, ದೇಶದಲ್ಲಿ ಸರಬರಾಜು ಆಗುತ್ತಿದ್ದ ಪಾಶ್ಚರೈಸರ್​ ಹಾಲಿನ ಮಾದರಿ ಪರೀಕ್ಷೆ ಮಾಡಿದಾಗ ಅದಲ್ಲಿ ಶೇ 20ರಷ್ಟು ಸ್ಯಾಂಪಲ್​ನಲ್ಲಿ ಹಕ್ಕಿ ಜ್ವರದ ವೈರಸ್​ ಕಂಡು ಬಂದಿದೆ.

ಇದೀಗ ಎಚ್​5ಎನ್​1 ಹಕ್ಕಿ ಜ್ವರ ಪ್ರಾಣಿಗಳಿಗೆ ಹರಡುತ್ತಿದೆ ಎಂಬುದನ್ನು ತೋರಿಸಿದೆ. ಇದೀಗ ಸುಲಭವಾಗಿ ಸೋಂಕು ಹಕ್ಕಿಗಳಿಂದ ಹಕ್ಕಿಗೆ ಬದಲಾಗಿ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಬಹುದು. ವೈರಸ್ ಹರಡುವಿಕೆಯಲ್ಲಿ ಈಗಾಗಲೇ ರೂಪಾಂತರ ಆಗಿದೆ ಎಂದು ಇದು ತೋರಿಸುತ್ತದೆ. ಅಲ್ಲದೇ ಹಕ್ಕಿ ಜ್ವರ ವೈರಸ್ ಮನುಷ್ಯರಿಗೆ ಹರಡಲು ಒಂದು ಹೆಜ್ಜೆ ಹತ್ತಿರಕ್ಕೆ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಕೋವಿಡ್ -19 ಕಾರ್ಯಪಡೆಯ ಸಹ ಅಧ್ಯಕ್ಷ ಡಾ ರಾಜೀವ್ ಜಯದೇವನ್ ಹೇಳಿದ್ದಾರೆ.

ಪ್ರಮುಖವಾಗಿ ಮಾನವರಿಂದ ಮಾನವರಿಗೆ ಸೋಂಕು ಹರಡುವು ಯಾವುದೆ ದಾಖಲೆಗಳಿಲ್ಲ. ಇದು ಕೇವಲ ವೈರಸ್​ ರೂಪಾಂತರವಾದಾಗ ಮಾತ್ರ ಕಂಡು ಬರುತ್ತದೆ. ಇದೀಗ ವೈರಸ್​ ಜಾನುವಾರುಗಳನ್ನು ತಮ್ಮ ಹೊಸ ಆತಿಥೇಯವಾಗಿ ಮಾಡಿಕೊಂಡಿದೆ. ಜಾನುವಾರುಗಳು ಮಾನವರೊಂದಿಗೆ ಸದಾ ಸಂಪರ್ಕದಲ್ಲಿರುತ್ತವೆ ಎಂದಿದ್ದಾರೆ.

ಮಾನವರಿಗೆ ಹಾನಿ ಮಾಡಬಹುದಾ ಹಕ್ಕಿ ಜ್ವರ?: ಭಾರತದಲ್ಲಿ ಸಾಮಾನ್ಯವಾಗಿ ಕಾಣುವ ಹಕ್ಕಿ ಜ್ವರ ಕಳೆದ ವಾರ ಜಾರ್ಖಂಡ್​ನ ರಾಂಚಿಯಲ್ಲಿ ಆತಂಕ ಸೃಷ್ಟಿಸಿದೆ. ಹಟ್ವಾರ್​ನ ಪ್ರಾದೇಶಿಕ ಕೋಳಿ ಸಾಗಣಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದ ಇಬ್ಬರು ವೈದ್ಯರು ಮತ್ತು ಆರು ಸಿಬ್ಬಂದಿಗಳು ಕ್ವಾರಂಟೈನ್​ಗೆ ಒಳಗಾಗಿದ್ದರು. ಏಪ್ರಿಲ್​ 27ರಂದು ಅವರ ಸ್ವಾಬ್​ ಸ್ಯಾಂಪಲ್​ ಪರೀಕ್ಷೆ ನೆಗೆಟಿವ್​ ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶದ ಪ್ರಕಾರ, 2003ರಿಂದ 2023ರವರೆಗೆ ಜಾಗತಿಕವಾಗಿ 21 ದೇಶದಲ್ಲಿ ಎಚ್​5ಎನ್​1 ಸೋಂಕು 873 ಮಂದಿ ಮನುಷ್ಯರಲ್ಲಿ ಕಂಡು ಬಂದಿದ್ದು, 458 ಮಂದಿ ಸಾವನ್ನಪ್ಪಿದ್ದಾರೆ. ಆದಾಗ್ಯೂ ದತ್ತಾಂಶವೂ ಯಾವುದೇ ಮನುಷ್ಯನಿಂದ ಮನುಷ್ಯನಿಗೆ ಸೋಂಕು ಹರಡಿರುವ ದಾಖಲೆ ಇಲ್ಲ ಎಂದು ತಿಳಿಸಿದೆ.

ಮಾನವ ಸೋಂಕುಗಳು ಪ್ರಾಣಿಗಳೊಂದಿಗೆ ತೀರ ಹತ್ತಿರವಿದ್ದಾಗ ಮಾತ್ರ ಉಂಟಾಗುತ್ತದೆ. ಆದಾಗ್ಯೂ ಮಾನವ ಸೋಂಕು ಅಪರೂಪ. ಒಂದು ವೇಳೆ ಇದು ಆದರೂ ಅದರ ಸಾವಿದ ದರ ಹೆಚ್ಚಿದೆ ಎಂದು ಜೀವವಿಜ್ಞಾನಿ ವಿನೋದ್​ ಸ್ಕಾರಿಯಾ ತಿಳಿಸಿದ್ದಾರೆ.

ಮಾನವರಲ್ಲಿ ಹಕ್ಕಿ ಜ್ವರ ತಗುಲಿದಲ್ಲಿ ಸಾವಿನ ದರ ಹೆಚ್ಚಲು ಕಾರಣ, ಈ ನಿರ್ದಿಷ್ಟ ರೀತಿಯ ಇನ್ಫ್ಲುಯೆನ್ಸ ವೈರಸ್‌ಗೆ ಮಾನವರು ಯಾವುದೇ ಪ್ರತಿರಕ್ಷಣಾ ಸ್ಮರಣೆ ಹೊಂದಿಲ್ಲ ಎಂದು ಡಾ ಜಯದೇವನ್​ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುವಂತೆ, ಜಾನುವಾರು ಅಥವಾ ಕೋಳಿ ಸಾಕಣೆ ಕೇಂದ್ರದಲ್ಲಿ ಹತ್ತಿರದ ಸಂಪರ್ಕದಲ್ಲಿರುವ ಮಂದಿ ಪದೇ ಪದೆ ಕೈತೊಳೆಯುವ, ಆಹಾರ ಸುರಕ್ಷತೆ, ಲಸಿಕೆಯಂತಹ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದೆ. ಸೋಂಕಿತ ಪಕ್ಷಿಗಳು ಅಥವಾ ಸತ್ತ ಪಕ್ಷಿಗಳು ಅಥವಾ ಮಲವಿಸರ್ಜನೆ ನಿರ್ವಹಿಸುವಾಗ ಸೂಕ್ತವಾದ ವೈಯಕ್ತಿಕ ರಕ್ಷಣೆ ಬಹಳ ಮುಖ್ಯ ಮತ್ತು ಸಾರ್ವಜನಿಕರಲ್ಲಿ ಇದರ ಅರಿವು ಮುಖ್ಯವಾಗಿದೆ ಎಂದು ತಿಳಿಸಿದೆ. (ಐಎಎನ್ಎಸ್​)

ಇದನ್ನೂ ಓದಿ: ಉಲ್ಬಣಗೊಳ್ಳುತ್ತಿರುವ ಹಕ್ಕಿ ಜ್ವರ ಪ್ರಕರಣ.. ಮನುಷ್ಯರಿಗೂ ಸೋಂಕು ತಗಲುವ ಅಪಾಯ: WHO ವಾರ್ನಿಂಗ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.