ETV Bharat / health

ಮೆಂಥಾಲ್​ ಸಿಗರೇಟ್​ ನಿಷೇಧದಿಂದ ಧೂಮಪಾನ ದರ ಕಡಿತ ಸಾಧ್ಯತೆ; ಅಧ್ಯಯನ

author img

By ETV Bharat Karnataka Team

Published : Feb 21, 2024, 7:52 PM IST

ಮೆಂಥಾಲ್​ ಧೂಮಪಾನವು ಸಿಗರೇಟ್​ನಷ್ಟು ಕಠೋರವಾಗಿರದ ಹಿನ್ನೆಲೆ ಇದರ ಬಳಕೆ ಯುವ ಜನತೆ ಮತ್ತು ಹೊಸ ಧೂಮಪಾನಿಗಳಲ್ಲಿ ಹೆಚ್ಚಿದೆ.

Banning of menthol cigarettes lead to a lot of people quitting smoking

ನವದೆಹಲಿ: ಮೆಂಥಾಲ್ ಸಿಗರೇಟ್​ ಅನ್ನು ನಿಷೇಧಿಸುವುದರಿಂದ ಧೂಮಪಾನ ತ್ಯಜಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಮೆಂಥಾಲ್ ಸಿಗರೇಟ್​​ ಸಾರ್ವಜನಿಕ ಆರೋಗ್ಯದ ಪ್ರಮುಖ ಕಾಳಜಿ ವಿಷಯವಾಗಿದೆ. ಈ ಸಿಗರೇಟ್​ನಲ್ಲಿರುವ ತಣ್ಣನೆಯ ಅಂಶವೂ ಸಿಗರೇಟ್​ನಲ್ಲಿನ ಕಠೋರತೆಯನ್ನು ಮರೆಮಾಚುತ್ತದೆ. ಅಲ್ಲದೇ, ಇದು ಯುವ ಜನತೆಯು ಸುಲಭವಾಗಿ ಧೂಮಪಾನದ ಚಟಕ್ಕೆ ಒಳಗಾಗುವಂತೆ ಮಾಡುತ್ತದೆ ಎಂದು ಜರ್ನಲ್​ ನಿಕೋಟಿನ್​ ಅಂಡ್​ ಟೊಬೆಕೊ ರಿಸರ್ಚ್​ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.

ಈ ಮೊದಲು ಸಂಶೋಧಕರು ಪತ್ತೆ ಮಾಡಿದಂತೆ ಸಿಗರೇಟ್​ನಲ್ಲಿನ ಮೆಂಥಾಲ್​ ಧೂಮಪಾನಿಗಳಿಗೆ ಸುಲಭವಾಗಿ ನಿಕೋಟಿನ್​ ಅನ್ನು ಎಳೆಯಲು ಸಹಾಯ ಮಾಡುತ್ತದೆ. ಇದರಿಂದ ಈ ಸಿಗರೇಟ್​​ ಮೇಲಿನ ಅವಲಂಬನೆ ಹೆಚ್ಚಿದೆ. ಸಾಮಾನ್ಯ ಧೂಮಪಾನಿಗಳಿಗೆ ಹೋಲಿಕೆ ಮಾಡಿದಾಗ ಮೆಂಥಾಲ್​ ಧೂಮಪಾನಿಗಳು ಈ ಚಟದಿಂದ ಹೊರ ಬರುವುದು ಕಷ್ಟ.

ಸಂಶೋಧಕರ ಪ್ರಕಾರ, ಜಾಗತಿಕವಾಗಿ ಸಿಗರೇಟ್​​ ಧೂಮಪಾನಿಗಳಿಗಿಂತ ಮೆಂಥಾಲ್​ ಧೂಮಪಾನಿಗಳ ಪ್ರಮಾಣ ಬದಲಾಗುತ್ತಿದೆ. ಯುರೋಪ್​ನಲ್ಲಿ ಮೆಂಥಾಲ್ ಧೂಮಪಾನಿಗಳ ಪ್ರಮಾಣ ಶೇ 7.4ರಷ್ಟಿದೆ. ಅಮೆರಿಕದಲ್ಲಿ 2020ರಲ್ಲಿ ವಯಸ್ಕ ಧೂಮಪಾನಿಗಳಲ್ಲಿ ಶೇ 43.4ರಷ್ಟು ಮೆಂಥಾಲ್​ ಸಿಗರೇಟ್​​ ಬಳಕೆ ಮಾಡುತ್ತಿದ್ದಾರೆ.

ಮೆಂಥಾಲ್​ ಧೂಮಪಾನವನ್ನು ಯುವ ಜನತೆ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ವರ್ಣೀಯ ಅಲ್ಪಸಂಖ್ಯಾತರು ಮತ್ತು ಕಡಿಮೆ ಆದಾಯದವರಲ್ಲಿ ಈ ಚಟ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ. ಅಮೆರಿಕದ 170ಕ್ಕೂ ಹೆಚ್ಚು ನಗರದಲ್ಲಿ ಮತ್ತು ಎರಡು ರಾಜ್ಯದಲ್ಲಿ ಕೆನಡಾ, ಇಥಿಯೋಪಿಯಾ ಮತ್ತು ಯುರೋಪಿಯನ್​ ದೇಶದಲ್ಲಿ ಈ ಮೆಂಥಾಲ್​ ಸಿಗರೇಟ್​ ಅನ್ನು ನಿಷೇಧಿಸಲಾಗಿದೆ.

ಮೆಂಥಾಲ್​ ಸಿಗರೇಟ್​ ನಿಷೇಧಿಸುವುದರಿಂದ ಹೇಗೆ ನಡುವಳಿಕೆ ಬದಲಾಗಿದೆ ಎಂಬುದನ್ನು ತಜ್ಞರು ಪರಿಶೀಲನೆ ಮಾಡಿದ್ದಾರೆ. ಅಧ್ಯಯನದ ಫಲಿತಾಂಶದಲ್ಲಿ ಮೆಂಥಾಲ್​ ಸಿಗರೇಟ್​ ಬ್ಯಾನ್​ ಮಾಡಿದ ಬಳಿಕ ಶೇ 50ರಷ್ಟು ಮೆಂಥಾಲ್​ ಧೂಮಪಾನಿಗಳು ಮೆಂಥಾಲ್​ ರಹಿತ ಧೂಮಪಾನಕ್ಕೆ ಹೊರಳಿದರೆ, ಶೇ 24ರಷ್ಟು ಅಂದರೆ ಕಾಲು ಭಾಗದಷ್ಟು ಮಂದಿ ಧೂಮಪಾನವನ್ನು ತ್ಯಜಿಸಿದ್ದಾರೆ. ಶೇ 12ರಷ್ಟು ಮಂದಿ ತಮ್ಮ ಇಷ್ಟದ ಫ್ಲೇವರ್​ನ ತಂಬಾಕಿನ ಉತ್ಪನ್ನದತ್ತ ಮುಖ ಮಾಡಿದರೆ, ಶೇ 24ರಷ್ಟು ಮೆಂಥಾಲ್​ ಸಿಗರೇಟ್​​ ಧೂಮಪಾನವನ್ನು ಮುಂದುವರೆಸಿದ್ದಾರೆ.

ರಾಜ್ಯಗಳು ಮತ್ತು ಸ್ಥಳೀಯವಾಗಿ ಮೆಂಥಾಲ್​ ಸಿಗರೇಟ್​ ನಿಷೇಧಿಸುವುದಕ್ಕಿಂತ ರಾಷ್ಟ್ರ ಮಟ್ಟದಲ್ಲಿ ಇದನ್ನು ನಿಷೇಧಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ. ಇದರಿಂದ ಧೂಮಪಾನ ತ್ಯಜಿಸುವವರ ದರ ಕೂಡ ಹೆಚ್ಚಿರಲಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಧೂಮಪಾನದಿಂದ ರೋಗ ನಿರೋಧಕ ವ್ಯವಸ್ಥೆ ಮೇಲೆ ಬೀರುತ್ತೆ ಭೀಕರ ಪರಿಣಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.