ನೀವು ನೋವಿನಿಂದ ಬಳುತ್ತಿದ್ದೀರಾ: ಇವಕ್ಕೆಲ್ಲ ಅರಿಶಿಣ, ಶುಂಠಿ, ತುಳಸಿ ರಾಮಬಾಣ

author img

By ETV Bharat Karnataka Team

Published : Feb 17, 2024, 10:10 AM IST

Ayurvedic Painkillers

ನೀವು ಕೀಲು ನೋವು, ಬೆನ್ನು ನೋವು, ತಲೆನೋವಿನಂತಹ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಅವುಗಳ ನಿವಾರಣೆಗಾಗಿ ನೀವು ಆಗಾಗ್ಗೆ ನೋವು ನಿವಾರಕಗಳನ್ನು ಬಳಸುತ್ತೀರಾ? ಆದರೆ ಅವುಗಳನ್ನು ನೀವು ಬಿಟ್ಟುಬಿಡಿ. ನಿಮ್ಮ ಅಡುಗೆಮನೆಯಲ್ಲಿಯೇ ಅದ್ಭುತವಾದ ಆಯುರ್ವೇದ ಔಷಧಿಗಳಿವೆ. ಅವುಗಳನ್ನೇ ಬಳಸಿ ಅಡ್ಡ ಪರಿಣಾಮಗಳಿರದೇ ಆರೋಗ್ಯವಂತರಾಗಿ

ಹಲವರು ತಲೆನೋವು, ಕಾಲು ನೋವು, ಕೀಲು ನೋವು, ಬೆನ್ನು ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರೆಲ್ಲ ಆ ಸಮಸ್ಯೆಗಳಿಂದ ದೂರವಾಗಲು ಅಥವಾ ನೋವು ನಿವಾರಣೆ ಮಾಡಿಕೊಳ್ಳಲು ಅಲೋಪತಿ ಔಷಧಿಗಳನ್ನು ಬಳಸುತ್ತಾರೆ. ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ ನೋವು ನಿವಾರಕಗಳನ್ನು ಖರೀದಿ ಸೇವನೆ ಮಾಡಿ ನೋವಿನಿಂದ ಮುಕ್ತಿ ಪಡೆಯುವ ಕೆಲಸ ಮಾಡುತ್ತಾರೆ.

ವಾಸ್ತವವಾಗಿ ಈ ನೋವು ನಿವಾರಕಗಳನ್ನು ಬಳಸುವುದು ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ನೋವು ನಿವಾರಕಗಳನ್ನು ಆಗಾಗ್ಗೆ ಬಳಸುವವರು ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಮೂತ್ರಪಿಂಡದ ಹಾನಿ ಮತ್ತು ಯಕೃತ್ತಿನ ಹಾನಿಯಂತಹ ಅಪಾಯಕಾರಿ ಕಾಯಿಲೆಗಳಿಂದ ಬಳಲುವ ಸಾಧ್ಯತೆಯಿದೆ.

ನೋವಿಗೆ ಇಂತಹ ರಾಸಾಯನಿಕ ಔಷಧಗಳ ಬಗ್ಗೆ ಯೋಚಿಸುವವರಿಗೆ ತಮ್ಮ ಅಡುಗೆ ಮನೆಯಲ್ಲಿ ಲಭ್ಯವಿರುವ ದಿವ್ಯ ಆಯುರ್ವೇದ ಔಷಧಿಗಳ ಬಗ್ಗೆ ತಿಳಿದಿರುವುದಿಲ್ಲ. ಹೌದು ಅಂತಹ ಔಷಧಗಳು ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುತ್ತವೆ ಎಂಬುದನ್ನು ಮರೆಯದಿರಿ. ನಮ್ಮ ನಿಮ್ಮ ಮನೆಗಳಲ್ಲಿ ಸದಾ ಇರುವ ಅರಿಶಿನ, ಶುಂಠಿ ಮತ್ತು ತುಳಸಿ ಉತ್ತಮ ನೋವು ನಿವಾರಕಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಇವುಗಳನ್ನು ತೆಗೆದುಕೊಂಡರೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

ಹಳದಿ - ಅರಿಶಿಣದ ಆರೋಗ್ಯ ಪ್ರಯೋಜನಗಳೇನು?: ಅರಿಶಿಣವು ನೈಸರ್ಗಿಕ ನೋವು ನಿವಾರಕ ಎಂಬುದು ಬಹುತೇಕರಿಗೆ ಗೊತ್ತಿಲ್ಲ ಅನಿಸುತ್ತಿದೆ. ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ತಕ್ಷಣ ಅರಿಶಿಣವನ್ನು ಹಚ್ಚಲಾಗುತ್ತದೆ. ಕಾರಣ ಅದು ತಕ್ಷಣ ಪರಿಹಾರವಾಗಿ ಕೆಲಸ ಮಾಡುತ್ತದೆ. ನೋವು ಕೂಡ ಕೆಲ ಸಮಯದಲ್ಲೇ ಕಡಿಮೆಯಾಗುತ್ತದೆ.

ಅರಿಶಿಣವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಅರಿಶಿಣಕ್ಕೆ ವಿಶೇಷ ಮಹತ್ವವಿದೆ. ಅರಿಶಿಣವು ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ. ಗಾಯ ಮತ್ತು ಚರ್ಮ ರೋಗಗಳನ್ನು ಕಡಿಮೆ ಮಾಡಲು ಅರಿಶಿಣ ಅತ್ಯಂತ ಪರಿಣಾಮಕಾರಿಯಾದ ಔಷಧವಾಗಿದೆ. ಹಳದಿ ಇರುವಲ್ಲಿ ಬ್ಯಾಕ್ಟೀರಿಯಾ ಹರಡುವುದಿಲ್ಲ. ಜ್ವರದಂತಹ ವೈರಸ್‌ಗಳು ಕೂಡಾ ಸಾಯುತ್ತವೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಮನೆ ಬಾಗಿಲಿಗೆ ಅರಿಶಿಣವನ್ನು ಹಚ್ಚುತ್ತಿದ್ದರು. ಅರಿಶಿಣದಿಂದಾಗಿ ಆರೋಗ್ಯ ಸಮಸ್ಯೆಗಳು ನಮ್ಮನ್ನು ತಲುಪುವುದಿಲ್ಲ. ಬಾಯಿ ಹುಣ್ಣು ಬಂದಾಗ ಅರಿಶಿಣ ಹಚ್ಚಿದರೆ ತಕ್ಷಣ ಕಡಿಮೆಯಾಗುತ್ತದೆ.

ಶುಂಠಿ: ಶುಂಠಿಯಿಂದಲೂ ಸಹ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅಡುಗೆಯಲ್ಲಿ ಮಸಾಲೆಯುಕ್ತ ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಶುಂಠಿ ಸ್ನಾಯು ನೋವು ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ನೋವನ್ನು ಉಂಟುಮಾಡುವ ಹಾರ್ಮೋನ್ ಗಳನ್ನು ನಿಯಂತ್ರಿಸುವಲ್ಲಿ ಶುಂಠಿ ಪರಿಣಾಮಕಾರಿ ಕೆಲಸ ಮಾಡುತ್ತದೆ. ನೀವು ಆಲಸ್ಯ ಅಥವಾ ವಾಕರಿಕೆ ಅನುಭವಿಸುತ್ತಿದ್ದರೆ, ಒಂದು ಸಣ್ಣ ತುಂಡು ಶುಂಠಿ ತಿನ್ನುವುದರಿಂದ ಯಾವುದೇ ಸಮಯದಲ್ಲಿ ಆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಆರಾಮದಾಯಕ ಅನುಭವವನ್ನು ಕೂಡಾ ಪಡೆಯಬಹುದು. ಅದರಲ್ಲೂ ಗರ್ಭಿಣಿಯರು ವಾಕರಿಕೆಯಿಂದ ಬಳಲುತ್ತಿದ್ದರೆ, ಶುಂಠಿಯನ್ನು ಪ್ರತಿವಿಷವಾಗಿ ಬಳಸುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.

ತುಳಸಿ: ಪವಿತ್ರ ತುಳಸಿಯಿಂದ ಸಾಕಷ್ಟು ಪ್ರಯೋಜನಗಳು ಉಂಟು: ಪ್ರತಿ ಮನೆಯಲ್ಲೂ ಪೂಜಿಸುವ ತುಳಸಿಯು ಅದ್ಭುತವಾದ ನೋವು ನಿವಾರಕವಾಗಿದೆ. ಗಿಡಮೂಲಿಕೆ ಔಷಧಗಳಲ್ಲಿ ತುಳಸಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ತುಳಸಿ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ಸಹ ನೀಡುತ್ತದೆ. ಹೊಟ್ಟೆಯ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ವಿಶೇಷವಾಗಿ ಕೋವಿಡ್ ವೈರಸ್ ಅನ್ನು ತುಳಸಿಯಿಂದ ನಿವಾರಣೆ ಮಾಡಬಹುದು ಅಂತಾರೆ ವೈದ್ಯರು. ತುಳಸಿ ದೇಹದಲ್ಲಿ ಕೆಲವು ಹಾರ್ಮೋನ್‌ಗಳ ಬಿಡುಗಡೆಯನ್ನು ನಿಯಂತ್ರಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ.

ಈ ರೀತಿಯಾಗಿ ನಮ್ಮ ಅಡುಗೆಮನೆಯಲ್ಲಿರುವ ನೈಸರ್ಗಿಕ ಮತ್ತು ಆಯುರ್ವೇದ ಔಷಧಗಳಾದ ತುಳಸಿ, ಅರಿಶಿಣ ಮತ್ತು ಶುಂಠಿಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ, ವೈದ್ಯರನ್ನು ಸಂಪರ್ಕಿಸದೇ ಅವುಗಳನ್ನು ಬಳಸಬಹುದು. ಆದರೆ, ಪ್ರತಿಜೀವಕಗಳು ಮತ್ತು ನೋವು ನಿವಾರಕಗಳನ್ನು ಬಳಸುವಾಗ, ನೀವು ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವೈದ್ಯರ ಸಲಹೆ ಇಲ್ಲದಂತೆ ಇಂಗ್ಲಿಷ್​ ಔಷಧಗಳನ್ನು ಬಳಕೆ ಮಾಡಬೇಕು ಎಂಬುದನ್ನು ಮರೆಯಬೇಡಿ

ಗಮನಕ್ಕೆ: (ಈ ವರದಿಯು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಗಳನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.)

ಇದನ್ನು ಓದಿ:ಮಾನಸಿಕ ಒತ್ತಡದಿಂದಲೂ ಇಸುಬು ಸಮಸ್ಯೆ ಉಲ್ಬಣ: ಪರಿಹಾರ ಹೇಗೆ? ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.