ಭರ್ಜರಿ ಮೊತ್ತಕ್ಕೆ ಸೇಲ್ ಆದ 'ಯುವ' ಚಿತ್ರದ ಆಡಿಯೋ ರೈಟ್ಸ್; ಬಿಡುಗಡೆಗೂ ಮೊದಲೇ ದಾಖಲೆ ಬರೆದ ದೊಡ್ಮನೆಯ ಕುಡಿ

author img

By ETV Bharat Karnataka Team

Published : Feb 21, 2024, 9:05 PM IST

ಯುವ ಚಿತ್ರ ತಂಡ

ಈಗಾಗಲೇ ಹಲವು ವಿಶೇಷತೆಗಳಿಂದ ಸ್ಯಾಂಡಲ್‌ವುಡ್​​ನಲ್ಲಿ ಸದ್ದು ಮಾಡುತ್ತಿರುವ 'ಯುವ' ಚಿತ್ರ ಬಿಡುಗಡೆಗೂ ಮುಂಚೆ ದಾಖಲೆ ಬರೆದಿದೆ.

ದೊಡ್ಮನೆಯ ಕುಡಿ, ಚಂದನವನದ ಚಂದದ ಹುಡುಗ, ಡಾ. ರಾಜಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ಯುವರಾಜ್‌ಕುಮಾರ್ ಕನ್ನಡದ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಕೌಂಟ್ ಡೌನ್ ಶುರುವಾಗಿದೆ. ಹೊಂಬಾಳೆ ಸಂಸ್ಥೆಯ ನಿರ್ಮಾಣದಲ್ಲಿ, ಸಂತೋಷ್ ಆನಂದ್ ರಾಮ್‌ ನಿರ್ದೇಶನದ 'ಯುವ' ಎಂಬ ಚಿತ್ರದ ಮೂಲಕ ಬೆಳ್ಳಿ ಪರದೆ ಪ್ರವೇಶ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಶೂಟಿಂಗ್ ಮುಗಿಸಿರುವ 'ಯುವ' ಬಳಗ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ತೆರೆಗೂ ಅಪ್ಪಳಿಸಲಿದೆ. ಇನ್ನು ಬಿಡುಗಡೆಗೂ ಮುನ್ನ ಹಲವು ವಿಚಾರಗಳಿಂದ ಸಖತ್​ ಸದ್ದು ಮಾಡುತ್ತಿರುವ ಚಿತ್ರ, ಇದೀಗ ಭರ್ಜರಿ ದಾಖಲೆಯೊಂದನ್ನು ಬರೆದು ಗಮನ ಕೂಡ ಸೆಳೆದಿದೆ.

ಚಿತ್ರ ತಂಡ
ಚಿತ್ರ ತಂಡ

ಹೌದು, 'ಯುವ' ಚಿತ್ರ ಯುವರಾಜ್‌ಕುಮಾರ್ ಅವರ ಮೊದಲ ಕಾಣಿಕೆಯಾಗಿದ್ದು ಇದರ ಆಡಿಯೋ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆಯಂತೆ. ಈ ಸುದ್ದಿ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಟಾಕ್ ಆಫ್ ದಿ ನ್ಯೂಸ್ ಆಗಿದೆ. ಹಾಗಾದ್ರೆ ಸಿನಿಮಾದ ಧ್ವನಿಸುರುಳಿ ಎಷ್ಟು ಕೋಟಿಗೆ, ಯಾವ ಆಡಿಯೋ ಕಂಪನಿ ಖರೀದಿಸಿದೆ ಅನ್ನೋ ಮಾಹಿತಿ ಇಲ್ಲಿದೆ.

ಮಾಸ್ ಎಲಿಮೆಂಟ್ಸ್ ಜೊತೆ ಒಂದು ಲವ್‌ ಸ್ಟೋರಿ ಕಥೆ ಆಧರಿಸಿರುವ 'ಯುವ' ಯೂತ್ ಸ್ಟೋರಿ ಸಿನಿಮಾ ಅನ್ನೋದು ಪಕ್ಕಾ. ರಗಡ್ ಲುಕ್‌ನಲ್ಲಿ ಯುವರಾಜ್​ಕುಮಾರ್ ಮೊದಲ ಬಾರಿಗೆ ಚಂದವನಕ್ಕೆ ಪರಿಚಿತರಾಗಲಿದ್ದಾರೆ. ಕಥೆ ಬಗ್ಗೆ ಯಾವುದೇ ಸುಳಿವು ಕೊಡದೇ ಚಿತ್ರತಂಡ ಈವರೆಗೂ ಗುಟ್ಟು ಕಾಪಾಡಿಕೊಂಡಿದೆ. ಅಣ್ಣಾವ್ರ ಮೊಮ್ಮಗನ ಆರಂಗೇಟ್ರಂ ಸಿನಿಮಾ ಆಗಿರುವುದರಿಂದ ಹೆಚ್ಚು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ. ಅದರಲ್ಲೂ ಯುವರಾಜ್‌ಕುಮಾರ್ ಸ್ಟಂಟ್ಸ್ ಮತ್ತು ಡ್ಯಾನ್ಸ್ ಬಗ್ಗೆ ಕುತೂಹಲ ತುಸು ಜಾಸ್ತಿಯೇ ಇದೆ.

ಚಿತ್ರ ತಂಡ
ಚಿತ್ರ ತಂಡ

ಒಂದು ಮಾಸ್ ಸಬ್ಜೆಕ್ಟ್ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರೋ ಹೊಂಬಾಳೆ ಸಂಸ್ಥೆ ಮೇಲೆ ನಂಬಿಕೆ. ಹೀಗಾಗಿ ಯುವ ಚಿತ್ರಕ್ಕೆ ರಿಲೀಸ್​ಗೂ ಮುಂಚೆ ಡಿಮ್ಯಾಂಡ್ ಹೆಚ್ಚಾಗಿದೆ.

ಸದ್ಯ ಪೋಸ್ಟರ್ ಹಾಗೂ ಸಣ್ಣ ಟೀಸರ್​ನಿಂದಲೇ ಹೈಪ್ ಕ್ರಿಯೇಟ್ ಆಗಿರುವ ಯುವ ಚಿತ್ರದ ಆಡಿಯೋ ರೈಟ್ಸ್ ಅನ್ನು ಕನ್ನಡದ ನಂಬರ್​ ಒನ್ ಆಡಿಯೋ ಕಂಪನಿಯಾಗಿರೋ ಆನಂದ್ ಆಡಿಯೋ ಸಂಸ್ಥೆ ಬರೋಬ್ಬರಿ 2 ಕೋಟಿ 70 ಲಕ್ಷ ರೂಪಾಯಿಗೆ ಮಾರಾಟ ಆಗಿದೆ ಅಂತಾ ಹೊಂಬಾಳೆ ಫಿಲ್ಮ್​ ಸಂಸ್ಥೆಯ ಆಪ್ತರೊಬ್ಬರು ಹೇಳಿದ್ದಾರೆ. ಯುವ ನಟನಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಆಡಿಯೋ ರೈಟ್ಸ್ ಮಾರಾಟ ಆಗಿರೋದು ಫಸ್ಟ್ ಟೈಮ್ ಎಂದು ಚಿತ್ರರಂಗ ಮಾತನಾಡಿಕೊಳ್ಳುತ್ತಿದೆ.

ಚಿತ್ರ ತಂಡ
ಚಿತ್ರ ತಂಡ

ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ಹೊಸ್ತಿಲ್ಲಲ್ಲಿ ಯುವ ಚಿತ್ರದ ಅಧಿಕೃತ ಟ್ರೇಲರ್ ಲಾಂಚ್ ಆಗುವ ನಿರೀಕ್ಷೆಯಿದೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಸದ್ಯ ಯುವ ಆಪ್ತರ ಪ್ರಕಾರ ಸಿನಿಮಾದ ಮೇಕಿಂಗ್ ಜೊತೆಗೆ ಯುವ ಆ್ಯಕ್ಟಿಂಗ್ ನೋಡುಗರಿಗೆ ಇಷ್ಟವಾಗುತ್ತೆ. ಆ ಮಟ್ಟಿಗೆ ಯುವರಾಜ್‌ಕುಮಾರ್ ಅಭಿನಯ ಮಾಡಿದ್ದಾರೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್ ಮಾರ್ಚ್ 28ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಅಂದು ಯುವ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ ಕಾದು ನೋಡಬೇಕು.

ಚಿತ್ರ ತಂಡ
ಚಿತ್ರ ತಂಡ

ಇದನ್ನೂ ಓದಿ: ಕನ್ನಡದ 'ಕಪ್ಪು ಬಿಳುಪಿನ ನಡುವೆ' ಚಿತ್ರದ ಟ್ರೈಲರ್ ಮೆಚ್ಚಿದ ಕಾಲಿವುಡ್ ನಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.