ETV Bharat / entertainment

ಯುವ ಜನತೆಗೆ 'ಮತದಾನ'ದ ಮಹತ್ವ ಸಾರಿದ ಚಂದನವನದ ತಾರೆಯರು: ರ‍್ಯಾಪ್ ಸಾಂಗ್ ರಿಲೀಸ್ - Vote Namma Power

author img

By ETV Bharat Karnataka Team

Published : Apr 23, 2024, 12:50 PM IST

''ವೋಟ್​ ನಮ್ಮ ಪವರ್'' ಎಂಬ ರ‍್ಯಾಪ್ ಸಾಂಗ್‌ ಅನಾವರಣಗೊಂಡಿದೆ.

Vote Namma Power Rap Song
''ವೋಟ್​ ನಮ್ಮ ಪವರ್'' ರ‍್ಯಾಪ್ ಸಾಂಗ್‌ ಅನಾವರಣ

2024ರ ಲೋಕಸಭೆ ಚುನಾವಣೆ ಹೊತ್ತಿನಲ್ಲಿ 'ಮಾಧ್ಯಮ ಅನೇಕ ಸಂಸ್ಥೆ'ಯು (ಅನೇಕ ಆಡಿಯೋ) ''ವೋಟ್​ ನಮ್ಮ ಪವರ್'' ಎಂಬ ರ‍್ಯಾಪ್ ಸಾಂಗ್​​ ಪ್ರಸ್ತುತಪಡಿಸಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ಮತದಾನದ ಹಕ್ಕುಗಳನ್ನು ಪ್ರತಿಪಾದಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನದೊಂದಿಗೆ ಭವ್ಯ ಭಾರತದ ಭವಿಷ್ಯ ನಿರ್ಧರಿಸುವುದು ನಮ್ಮೆಲ್ಲರ ಕೈಯಲಿದೆ. ಈ ಪ್ರಜಾಪ್ರಭುತ್ವದ ಹಬ್ಬವನ್ನು ಒಂದು ಸಂದೇಶಭರಿತ ರ‍್ಯಾಪ್ ಸಾಂಗ್‌ ಮೂಲಕ ಸೆಲೆಬ್ರೇಟ್‌ ಮಾಡುವ ಆಶಯ ಹಾಗೂ ಆ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಮತದಾನಕ್ಕೆ ಅವರನ್ನು ಪ್ರೇರೇಪಿಸುವುದು 'ಮಾಧ್ಯಮ ಅನೇಕ ಸಂಸ್ಥೆ'ಯ ಉದ್ದೇಶ. ಈ ಮೂಲಕ ದೇಶದ ಉಜ್ವಲ ಭವಿಷ್ಯದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇರಲಿ ಎನ್ನುವ ಸದ್ದುದ್ದೇಶ ಈ ಸಂಸ್ಥೆಯದ್ದು. ಈ ನಿಟ್ಟಿನಲ್ಲಿ "ವೋಟ್​ ನಮ್ಮ ಪವರ್" ಎಂಬ ಹಾಡು ಮೂಡಿ ಬಂದಿದೆ. ಈ ಸಾಂಗ್​ ಬಗ್ಗೆ ನಟ ರಾಕೇಶ್ ಅಡಿಗ, ನಟಿ ತೇಜಸ್ವಿನಿ ಶರ್ಮಾ, ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅಮರ್ ಮಾಹಿತಿ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

ನಟ ರಾಕೇಶ್ ಅಡಿಗ ಮಾತನಾಡಿ, 'ಮೊದಲ ಬಾರಿಗೆ ಮತದಾನ ಮಾಡುವವರಿಗೆ ಈ ರ‍್ಯಾಪ್ ಸಾಂಗ್‌ ಬಹಳ ಇಷ್ಟವಾಗಬಹುದು. ಯುವಜನತೆ ಹೆಚ್ಚಾಗಿ ಮತದಾನ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ರ‍್ಯಾಪ್ ಹಾಡನ್ನು ಹಾಡಿದ್ದೇನೆ' ಎಂದು ತಿಳಿಸಿದರು.

'ಮತದಾನದ ಬಗ್ಗೆ ಸಂವಿಧಾನದಲ್ಲಿರುವ ಕೆಲ ವಿಷಯಗಳನ್ನು ತೆಗೆದುಕೊಂಡು ಈ ಹಾಡನ್ನು ಸಿದ್ಧಪಡಿಸಿದ್ದೇವೆ. ಈಗಿನ ಯುವಜನತೆ ಹೆಚ್ಚಾಗಿ ರ‍್ಯಾಪ್ ಸಾಂಗ್​ನ ಅಭಿಮಾನಿಗಳು. ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ' ಎಂದು ನಿರ್ದೇಶಕ ರಾಜ್ ಗೋಪಿ ತಿಳಿಸಿದರು.

'ಮತದಾನದ ದಿನ‌ ರಜೆ ಇದೆ ಎಂದು ಮನೆಯಲ್ಲಿ ಕೂರುವುದು, ಪ್ರವಾಸಕ್ಕೆ ಹೋಗುವುದು ಮಾಡಬೇಡಿ. ಎಲ್ಲರೂ ಮತದಾನ ಮಾಡಿ.‌ ಏಕೆಂದರೆ ಅದು ನಮ್ಮ ಹಕ್ಕಲ್ಲ.‌ ಅಧಿಕಾರ' ಎನ್ನುವುದು ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ ಅವರ ಮಾತು. ಪ್ರಸ್ತುತ ಅವರೀಗ ಮತದಾನ ಜಾಗೃತಿ ರಾಯಭಾರಿಯೂ ಹೌದು.

ಇದನ್ನೂ ಓದಿ: 'ಉತ್ತರಕಾಂಡ' ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಐಶ್ವರ್ಯಾ ರಾಜೇಶ್ - Aishwarya Rajesh

ಹಾಡಿಗೆ ಹೆಜ್ಜೆ ಹಾಕಿರುವ ನಟಿ ತೇಜಸ್ವಿನಿ ಶರ್ಮಾ, ನಟ ಸ್ಮೈಲ್ ಗುರು ರಕ್ಷಿತ್ ಹಾಗೂ ನೃತ್ಯ ನಿರ್ದೇಶನ ಮಾಡಿರುವ ನಟಿ ಅನನ್ಯ ಅಮರ್ ಮತದಾನದ ಮಹತ್ವವನ್ನು ತಿಳಿಸಿ, ಅವಕಾಶ ಮಾಡಿಕೊಟ್ಟ 'ಮಾಧ್ಯಮ ಅನೇಕ ಸಂಸ್ಥೆ'ಗೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಹಾಡು ಪ್ರಸ್ತುತಪಡಿಸುವ ಮುನ್ನ ಮಾಧ್ಯಮ ಅನೇಕ ಸಂಸ್ಥೆಯ ಡಾ ನಮನ ಬಿ.ಎನ್​ ಅವರು ಈ ಹಾಡಿನ ಆಶಯ, ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮುದ್ದಿನ ಮಡದಿ ಜೊತೆಗಿನ ರೋಮ್ಯಾಂಟಿಕ್​ ಡೇಟ್ ​ವೇಳೆ ಪ್ಯಾಪಾರಾಜಿಗಳ ಮುಂದೆ ತಾಳ್ಮೆ ಕಳೆದುಕೊಂಡ ನಟ ಶಾಹೀದ್​ ಕಪೂರ್​​ - Shahid Loses Cool at Paparazzi

'ಮಾಧ್ಯಮ ಅನೇಕ' ಸಂಸ್ಥೆಯ 'ಅನೇಕ ಆಡಿಯೋ' ಮೂಲಕ ಈ ರ‍್ಯಾಪ್ ಸಾಂಗ್ ಬಿಡುಗಡೆಯಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ಅರವಿಂದ್ ಮೋತಿ ಈ ಯೋಜನೆಯ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಅನು ಮೋತಿ ಬರೆದು, ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಹಾಡನ್ನು ರಾಕೇಶ್ ಅಡಿಗ ಹಾಗೂ ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ. ಗಿರೀಶ್ ಛಾಯಾಗ್ರಾಹಣ ನಿರ್ವಹಿಸಿದ್ದಾರೆ. ಪ್ರತಿಭಾವಂತ ಯುವ ತಾರೆಯರಾದ ತೇಜಸ್ವಿನಿ, ರಕ್ಷಿತ್‌, ಬೃಂದಾ ಪ್ರಭಾಕರ್‌, ಅಭಯ್‌ ಮತ್ತು ಅನನ್ಯ ತಮ್ಮ ಎನರ್ಜಿಟಿಕ್​​ ಸ್ಟೆಪ್ಸ್ ಮೂಲಕ ಹಾಡನ್ನು ಪವರ್​ಫುಲ್​ ಆಗಿ​ ಪ್ರಸ್ತುತಪಡಿಸಿದ್ದಾರೆ. ಇವರಷ್ಟೇ ಅಲ್ಲದೇ ಕಿರುತೆರೆ, ಸಿನಿಮಾ ರಂಗದ ಕೆಲ ಸೆಲೆಬ್ರಿಟಿಗಳು ಹೂಕ್ ಸ್ಟೆಪ್ ಹಾಕುತ್ತಾ ಹಾಡಿನ ಆಕರ್ಷಣೆ ಹೆಚ್ಚಿಸಿದ್ದಾರೆ. ನವೀನ್‌ ಶಂಕರ್‌, ನೀತು ವನಜಾಕ್ಷಿ, ಕಾರ್ತಿಕ್ ಮಹೇಶ್‌, ತನಿಶಾ ಕುಪ್ಪಂಡ, ಸಾನ್ಯ ಅಯ್ಯರ್‌, ಸಾಗರ್‌ ಪುರಾಣಿಕ್‌, ನಿರಂಜನ್‌ ದೇಶಪಾಂಡೆ, ಚಂದನಾ ಅನಂತಕೃಷ್ಣ ಮುಂತಾದವರು ಹಾಡಿನಲ್ಲಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.