'ಸಂತಸದ ಕ್ಷಣ': ಪದ್ಮಭೂಷಣ ಸ್ವೀಕರಿಸಿದ ಮಿಥುನ್ ಚಕ್ರವರ್ತಿ, ಉಷಾ ಉತ್ತುಪ್ ಹೇಳಿದ್ದಿಷ್ಟು - Padma Bhushan

author img

By ETV Bharat Karnataka Team

Published : Apr 23, 2024, 4:59 PM IST

Usha Uthup and Mithun Chakraborty Grateful for Padma Bhushan Recognition
ಪದ್ಮಭೂಷಣ ಸ್ವೀಕರಿಸಿದ ಮಿಥುನ್ ಚಕ್ರವರ್ತಿ, ಉಷಾ ಉತ್ತುಪ್ ()

ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿರುವ ನಟ ಮಿಥುನ್ ಚಕ್ರವರ್ತಿ, ಗಾಯಕಿ ಉಷಾ ಉತ್ತುಪ್ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ಚಿತ್ರರಂಗದ ಖ್ಯಾತ ನಟ ಮಿಥುನ್ ಚಕ್ರವರ್ತಿ ಮತ್ತು ಹಿರಿಯ, ಹೆಸರಾಂತ ಗಾಯಕಿ ಉಷಾ ಉತ್ತುಪ್ ಅವರಿಗೆ ಪದ್ಮಭೂಷಣ ಗೌರವ ಸಲ್ಲಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ನವದೆಹಲಿಯಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹಿರಿಯ ಗಾಯಕಿ ಪದ್ಮಭೂಷಣ ಪ್ರಶಸ್ತಿ ಪಡೆದ ನಂತರ ತಮ್ಮ ಸಂತೋಷವನ್ನು ಹಂಚಿಕೊಂಡರು. ಹಿರಿಯ ನಟ ಮಿಥುನ್ ಚಕ್ರವರ್ತಿ, ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಹಿರಿಯ ಗಾಯಕಿ ಉಷಾ ಉತ್ತುಪ್, "ನನಗೆ ಬಹಳ ಸಂತೋಷವಾಗಿದೆ. ಸಂತಸದ ಕ್ಷಣದಲ್ಲಿ ತೇಲುತ್ತಿದ್ದೇನೆ. ನನ್ನ ಕಣ್ಣಲ್ಲಿ ನೀರಿದೆ, ನೀವೆಲ್ಲರೂ ನೋಡಬಹುದು. ನನ್ನ ಜೀವನದಲ್ಲಿದು ದೊಡ್ಡ ಕ್ಷಣವಾಗಿದೆ. ದೇಶದಿಂದ ಮತ್ತು ಸರ್ಕಾರದಿಂದ ಗುರುತಿಸಲ್ಪಲ್ಪಟ್ಟ ಮಹತ್ವದ ಕ್ಷಣ. ಇದಕ್ಕಿಂತ ಇನ್ನೇನು ಕೇಳಬಹುದು? ಎಂದು ತಿಳಿಸಿದ್ದಾರೆ.

ಉಷಾ ಉತ್ತುಪ್ ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ, ರಂಬಾ ಹೋ ಹೋ, ಹರಿ ಓಂ ಹರಿ, ಕೋಯಿ ಯಹಾ ಆಹಾ, ಒನ್ ಟು ಚಾ ಚಾ ಚಾ ಮತ್ತು ಡಾರ್ಲಿಂಗ್ ಸೇರಿದಂತೆ ಹಲವು ಹಿಟ್ ಸಾಂಗ್ಸ್ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ವಿಶಿಷ್ಟ ಮತ್ತು ಪವರ್​ ಫುಲ್​ ವಾಯ್ಸ್ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮತ್ತೊಂದೆಡೆ ಅಮೋಘ ಅಭಿನಯದ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ಮಿಥುನ್ ಚಕ್ರವರ್ತಿ ಕೂಡ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದು, ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. "ಬಹಳ ಸಂತೋಷವಾಗಿದೆ. ನಾನು ನನ್ನ ಜೀವನದಲ್ಲಿ ನನಗಾಗಿ ಯಾರಿಂದಲೂ ಏನನ್ನೂ ಕೇಳಿಲ್ಲ. ಇದೀಗ ಅತ್ಯುನ್ನತ ಗೌರವ ಸ್ವೀಕರಿಸಿದ್ದು, ನನಗೆ ತುಂಬಾನೇ ಸಂತೋಷವಾಗಿದೆ. ಅತ್ಯಂತ ಸಂತೋಷಕರ ಕ್ಷಣ" ಎಂದು ತಿಳಿಸಿದರು.

ಇದನ್ನೂ ಓದಿ: ಹನುಮ ಜಯಂತಿ: ರಾಮ್​ ಚರಣ್​ ಸೇರಿ ಸೆಲೆಬ್ರಿಟಿಗಳಿಂದ ಶುಭಾಶಯ - Hanuman Jayanti

1976ರಲ್ಲಿ 'ಮೃಗಾಯಾ' ಮೂಲಕ ಚಿತ್ರರಂಗ ಪ್ರವೇಶಿಸಿದ ಮಿಥುನ್ ಚಕ್ರವರ್ತಿ, ತಮ್ಮ ನಟನಾ ಸಾಮರ್ಥ್ಯದೊಂದಿಗೆ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದ್ದಾರೆ.ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ನಂತರ ತಹದರ್ ಕಥಾ (1992) ಮತ್ತು ಸ್ವಾಮಿ ವಿವೇಕಾನಂದ (1998) ನಲ್ಲಿನ ಪಾತ್ರಗಳಿಗಾಗಿ ಎರಡು ಹೆಚ್ಚುವರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿನಯದ 'ಕೂಲಿ' ಟೀಸರ್ ರಿಲೀಸ್​: ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ - Coolie Teaser

ಮಿಥುನ್ ಚಕ್ರವರ್ತಿ ತಮ್ಮ ಸುಮಾರು ಐದು ದಶಕಗಳ ವೃತ್ತಿಜೀವನದಲ್ಲಿ ಐ ಆ್ಯಮ್​ ಎ ಡಿಸ್ಕೋ ಡ್ಯಾನ್ಸರ್ (ಡಿಸ್ಕೋ ಡ್ಯಾನ್ಸರ್), ಜಿಮ್ಮಿ ಜಿಮ್ಮಿ (ಡಿಸ್ಕೋ ಡ್ಯಾನ್ಸರ್) ಮತ್ತು ಸೂಪರ್ ಡ್ಯಾನ್ಸರ್‌ನಂತಹ ಎನರ್ಜಿಟಿಕ್​​ ಸಾಂಗ್ಸ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಸರು ಸಂಪಾದಿಸಿದ್ದಾರೆ. ಕೊನೆಯದಾಗಿ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಲ್ಲಿ ಕಾಣಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.