ETV Bharat / entertainment

ಶೀಘ್ರದಲ್ಲೇ 'ಯು.ಐ' ತೆರೆಗೆ: ಉಪ್ಪಿ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ

author img

By ETV Bharat Karnataka Team

Published : Feb 9, 2024, 6:18 PM IST

ಬಹುನಿರೀಕ್ಷಿತ ಸಿನಿಮಾ 'ಯು.ಐ' ಶೀಘ್ರದಲ್ಲೇ ತೆರೆಕಾಣಲಿದೆ. ಈ ನಿಟ್ಟಿನಲ್ಲಿ ಡಬ್ಬಿಂಗ್ ಕೆಲಸ ಚುರುಕಾಗಿದೆ.

Upendra starrer U I
ಉಪೇಂದ್ರ ನಟನೆಯ 'ಯು.ಐ'

ಉಪೇಂದ್ರ ನಟನೆಯ 'ಯು.ಐ'

ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಟಾಕ್ ಆಗುತ್ತಿರುವ ಸಿನಿಮಾ 'ಯು ಐ'. ಇದು 2024ರ ಬಹುನಿರೀಕ್ಷಿತ ಚಿತ್ರವೂ ಹೌದು. ವಿಭಿನ್ನ ಚಿತ್ರಗಳಿಗೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಏಳು ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಸದ್ಯ ಟೈಟಲ್ ಹಾಗೂ ಟೀಸರ್​ನಿಂದಲೇ ಕ್ರೇಜ್ ಹುಟ್ಟಿಸಿರುವ 'ಯು ಐ' ಅಡ್ಡದಿಂದ ಇಂಟ್ರೆಸ್ಟಿಂಗ್​​ ವಿಚಾರ ಹೊರಬಿದ್ದಿದೆ. ಯು ಐ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿರುವ ಉಪ್ಪಿ, ಈ ವರ್ಷ ಅಭಿಮಾನಿಗಳಿಗೆ ಯು ಐ ದರ್ಶನ ಪಕ್ಕಾ ಅಂತಿದ್ದಾರಂತೆ‌. ಇದು ನಟನ ಆಪ್ತಮೂಲಗಳು ಕೊಟ್ಟಿರುವ ಮಾಹಿತಿ. ಆದಾಗ್ಯೂ, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಕೆಲವು ದಿನಗಳ ಹಿಂದೆ ಡೈಲಾಗ್ ಇಲ್ಲದೇ ಯು ಐ ಪ್ರಪಂಚ ತೋರಿಸಿದ್ದ ಉಪ್ಪಿ ಈ ಚಿತ್ರವನ್ನು ಆದಷ್ಟು ಬೇಗ ಸಿನಿಪ್ರಿಯರೆದುರು ತರಲು ಪ್ಲ್ಯಾನ್​ ಮಾಡಿದ್ದಾರೆ.‌ ಸದಾ ಡಿಫ್ರೆಂಟ್ ಕಾನ್ಸೆಪ್ಟ್​​, ವಿಭಿನ್ನ ಯೋಚನೆಗಳ ಮೂಲಕ ಗುರುತಿಸಿಕೊಳ್ಳುವ ಉಪೇಂದ್ರ ತಮ್ಮ ಚಿತ್ರಕ್ಕೆ ಯು ಐ ಎಂಬ ವಿಭಿನ್ನ ಶೀರ್ಷಿಕೆ ಇಟ್ಟು, ಸಿನಿಪ್ರಿಯರು ಹಾಗೂ ಗಾಂಧಿನಗರದ ತಲೆಗೆ ಹುಳ ಬಿಟ್ಟಿದ್ದಾರೆ. ಯು ಐ - ನೀನು ನಾನು ಎನ್ನುವ ಇಂಟ್ರೆಸ್ಟಿಂಗ್​ ಟೈಟಲ್​​ ಅಡಿ ಹೊಸ ಕಥೆ ಹೇಳಲು ಅವರು ಹೊರಟಿದ್ದಾರೆ.

ಸದ್ದಿಲ್ಲದೇ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಉಪೇಂದ್ರ, ಅದ್ಧೂರಿ ಸೆಟ್​​ಗಳನ್ನು ಹಾಕಿ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರೀಕರಣಕ್ಕೆ ಬಳಸಿರುವ ಹೈ ಟೆಕ್ನಾಲಜಿ ಕ್ಯಾಮರಾ ಹಾಗೂ ಮೇಕಿಂಗ್ ವಿಡಿಯೋವನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅವರು ಹೈದರಾಬಾದ್​ನಲ್ಲಿ ತೆಲುಗು ವರ್ಷನ್​​ನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಮಾತಿನ ಮನೆಯಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹೇಳುವಂತೆ ಈಗಾಗಲೇ ಕನ್ನಡ, ತಮಿಳು, ಹಿಂದಿ, ಮಲೆಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿದೆ.

ಇದನ್ನೂ ಓದಿ: ಮೊದಲ ಹಂತದ ಶೂಟಿಂಗ್ ಮುಗಿಸಿದ 'ಶಭ್ಬಾಷ್‍' ಚಿತ್ರತಂಡ

ಈಗಾಗಲೇ ಅನಾವರಣಗೊಂಡಿರುವ ಯು ಐ ಟೀಸರ್ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದು ಮೆಚ್ಚುಗೆ ಗಳಿಸಿದೆ. ಇದೇ ಮೊದಲ ಬಾರಿಗೆ ಉಪೇಂದ್ರರಿಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ‌. ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಮತ್ತು ಜಿ.ಮನೋಹರ್ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಈ‌ ಸಿನಿಮಾ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಯು ಐ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಆಪ್ತರ ಮಾಹಿತಿ ಪ್ರಕಾರ, ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಯು ಐ ಬಿಡುಗಡೆ ಪಕ್ಕಾ ಅಂತೆ. ಆದರೆ ಬುದ್ಧಿವಂತ ನಟ ಕಮ್ ನಿರ್ದೇಶಕ ಉಪೇಂದ್ರ ಸಿನಿಮಾವನ್ನು ಯಾವಾಗ ಬಿಡುಗಡೆ ಮಾಡುತ್ತಾರೆ ಅನ್ನೋದನ್ನು ಕಾಲ ನಿರ್ಧರಿಸಲಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 2ನೇ ಬಾರಿ ಭೇಟಿ ನೀಡಿದ ಅಮಿತಾಭ್​​​ ಬಚ್ಚನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.