ETV Bharat / entertainment

'ಹಾಡೇ ಹಿಂಗೈತೆ, ಸಿನಿಮಾ ಹೆಂಗಿರಬಹುದು?': ಉಪ್ಪಿಯ 'UI' ಟ್ರೋಲ್​​ ಸಾಂಗ್​​ಗೆ ಹುಬ್ಬೇರಿಸಿದ ಫ್ಯಾನ್ಸ್

author img

By ETV Bharat Karnataka Team

Published : Mar 6, 2024, 12:19 PM IST

UI troll song: ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ 'ಯುಐ' ಸಿನಿಮಾದ ಟ್ರೋಲ್​​ ಸಾಂಗ್​​ ಸಖತ್​ ಸದ್ದು ಮಾಡುತ್ತಿದೆ.

UI troll song
ಯುಐ ಸಿನಿಮಾದ ಟ್ರೋಲ್​​ ಸಾಂಗ್​​

ರಿಯಲ್ ಸ್ಟಾರ್ ಉಪೇಂದ್ರ. ಸ್ಯಾಂಡಲ್​​ವುಡ್​ ಮಾತ್ರವಲ್ಲ ದಕ್ಷಿಣ ಚಿತ್ರರಂಗದಲ್ಲೇ 'ಬುದ್ಧಿವಂತ' ನಟ-ನಿರ್ದೇಶಕ ಎಂದು ಜನಪ್ರಿಯತೆ ಸಂಪಾದಿಸಿದವರು. ಇದೀಗ 7 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನಕ್ಕಿಳಿದಿರುವುದು ನಿಮಗೆ ತಿಳಿದೇ ಇದೆ. ಉಪ್ಪಿ ಡೈರೆಕ್ಷನ್ ಅಂದ್ಮೇಲೆ ಸಾಮಾನ್ಯ ಸಿನಿಮಾ ನಿರೀಕ್ಷೆ ಸಾಧ್ಯವೇ?. ಅವರ ಸಿನಿಮಾ ನೋಡುವ ಪರಿಯೇ ಬೇರೆ. ಈ ಹಿಂದೆ ಬಂದ ಸಿನಿಮಾಗಳು ಇದನ್ನೇ ಸಾಬೀತುಪಡಿಸಿವೆ. 'ಯುಐ' ಕೂಡ ಉಪೇಂದ್ರ ವೃತ್ತಿಜೀವನದ ವಿಶಿಷ್ಟ ಸಿನಿಮಾ ಎಂದೆನಿಸುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಅದಕ್ಕೆ ಸಾಕ್ಷಿ ಸದ್ಯ ರಿವೀಲ್ ಆಗಿರುವ 'ಟ್ರೋಲ್ ಸಾಂಗ್'.

ಕೆಲವು ದಿನಗಳ ಹಿಂದೆ ಉಪೇಂದ್ರ ಹಾಡಿನ ಝಲಕ್‌ವೊಂದನ್ನು ರಿಲೀಸ್ ಮಾಡಿದ್ದರು. ಅದು ನಂದು ದೊಡ್ಡದು, ನಿಂದು ಚಿಕ್ಕದು ಎಂಬ ಸಾಲುಗಳಿಂದ ಕೂಡಿತ್ತು. ಇದೇನಪ್ಪಾ ಹಾಡು ಹೀಗಿದೆ ಅಂದವರೇ ಹೆಚ್ಚು. ಸಂಪೂರ್ಣ ಹಾಡನ್ನು ಮಾರ್ಚ್ 4ರಂದು ರಿಲೀಸ್ ಮಾಡುವುದಾಗಿ ಹೇಳಿದ್ದರು. ಅಂತೂ ಇಂತೂ ಟ್ರೋಲಿಗರನ್ನೇ ರೋಸ್ಟ್ ಮಾಡುವ 'ಟ್ರೋಲ್ ಸಾಂಗ್' ಹರಿಬಿಟ್ಟಿದ್ದಾರೆ. ಈ ಹಾಡು ಸದ್ಯ ಟ್ರೆಂಡಿಂಗ್​​ನಲ್ಲಿದ್ದು 3 ಮಿಲಿಯನ್​ಗೂ ಹೆಚ್ಚು ಜನ ನೋಡಿ ತಲೆಕೆಡಿಸಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಯುಐ ಸಿನಿಮಾದ ಈ ಟ್ರೋಲ್ ಸಾಂಗ್‌ ಸ್ಯಾಂಡಲ್​​ವುಡ್ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ರಾಜ್ಯವೇ ಖುಷಿಪಡುವ ಸುದ್ದಿ, ನಾನು ನಂದಿನಿ, ನಾ ಡ್ರೈವರಾ, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್ ಹೀಗೆ ಹಲವು ಟ್ರೋಲ್‌ಗಳು ಈ ಹಾಡಿನಲ್ಲಿವೆ. ಈ ಹಾಡು ಕೇಳಿದವರು ನಮ್​​ ಬಾಸ್ ಉಪ್ಪಿ ಸೂಪರ್ ಅಂತಿದ್ದಾರೆ.

ಟ್ರೋಲ್ ಸಾಂಗ್ ಕೇಳುತ್ತಿದ್ದಂತೆ ಉಪ್ಪಿ ಅಭಿಮಾನಿಗಳಿ ಥ್ರಿಲ್ ಆಗಿದ್ದಾರೆ. ಹಾಡು ರಿಲೀಸ್ ಆಗುತ್ತಿದ್ದಂತೆ ಒಂದರ ಹಿಂದೊಂದರಂತೆ ಕಾಮೆಂಟ್‌ಗಳು ಪಟಪಟನೆ ಬರುವುದಕ್ಕೆ ಶುರುವಾಗಿದೆ. ಅದರಲ್ಲೊಂದು, ಎಲ್ಲರಿಗೂ ಸೇರ್ಸಿ ಕ್ಯಾಕರ್ಸಿ ಒಂದೇ ಸಲ ಉಗಿದ್ರಲ್ಲ ಉಪ್ಪಿ ಸಾರ್ ಅಂತಾ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಎಲ್ಲರಿಗೂ ಗುಮ್ಮಿದ್ದಾರೆ ಎಂದು ತಿಳಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​​ನಲ್ಲಿರುವ ವಿಷಯಗಳು ಈ ಹಾಡಿನಲ್ಲಿವೆ.

ಇದನ್ನೂ ಓದಿ: 'ಒಂದು ಸರಳ ಪ್ರೇಮಕಥೆ' ಸಕ್ಸಸ್​: 25 ದಿನ ಪೂರೈಸಿದ ಸಂಭ್ರಮ

ಅಷ್ಟೇ ಅಲ್ಲ, ಟ್ರೋಲ್ ಸಾಂಗ್‌ನಲ್ಲಿ ಬಂದು ಹೋಗುವ ಪ್ರತೀ ಸಾಲನ್ನು ಟೈಮ್ ಕೋಡ್‌ಸಮೇತ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ಬಿಟ್ಟಿಲ್ಲ. ಇದು ಖಚಿತ, ಇದು ಉಚಿತ, ಇದು ನಿಶ್ಚಿತ. ಡಿ.ಕೆ.ಶಿವಕುಮಾರ್ ಡೈಲಾಗ್ ಇದು ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ. ಹಾಡೇ ಹೀಗಿರಬೇಕಾದರೆ ಸಿನಿಮಾ ಹೇಗಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: 'ಪ್ರೇಮಲೋಕ-2'ಗೆ ಕ್ರೇಜಿಸ್ಟಾರ್ ಸಜ್ಜು; ಹುಟ್ಟುಹಬ್ಬದಂದೇ ಸೆಟ್ಟೇರಲಿದೆ ಸಿನಿಮಾ

ಇನ್ನು, ಈ ಚಿತ್ರದ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ಅಲ್ಲದೇ, ತಾಂತ್ರಿಕವಾಗಿಯೂ ಸಿನಿಮಾ ಅಡ್ವಾನ್ಸ್ ಆಗಿರುತ್ತದೆ ಅನ್ನೋದು ಅಭಿಮಾನಿಗಳ ನಂಬಿಕೆ. ಸಲಗ ಸಿನಿಮಾ ಬಳಿಕ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜಂಟಿಯಾಗಿ ನಿರ್ಮಾಣ ಮಾಡಿರುವ ಯುಐ ಸಿನಿಮಾ ಈ ವರ್ಷವೇ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.