ETV Bharat / entertainment

ರಶ್ಮಿಕಾ ಜನ್ಮದಿನದಂದು ವಿಜಯ್ ದೇವರಕೊಂಡ ಸಿನಿಮಾ, 'ದಿ ಗರ್ಲ್‌ಫ್ರೆಂಡ್' ಟೀಸರ್ ರಿಲೀಸ್ - Rashmika Mandanna

author img

By ETV Bharat Karnataka Team

Published : Apr 3, 2024, 6:56 PM IST

Updated : Apr 3, 2024, 7:35 PM IST

ಶುಕ್ರವಾರ ನಟಿ ರಶ್ಮಿಕಾ ಮಂದಣ್ಣ 28ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಅಂದು ವಿಜಯ್ ದೇವರಕೊಂಡ ಅವರ 'ಫ್ಯಾಮಿಲಿ ಸ್ಟಾರ್', 'ದಿ ಗರ್ಲ್‌ಫ್ರೆಂಡ್‌'ನ ಟೀಸರ್ ಬಿಡುಗಡೆ ಆಗಲಿದೆ.

Rashmika Mandanna
ರಶ್ಮಿಕಾ ಮಂದಣ್ಣ

ನ್ಯಾಶನಲ್ ಕ್ರಶ್ ಖ್ಯಾತಿಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬ ಆಚರಿಸಲು ಸಿದ್ಧರಾಗಿದ್ದಾರೆ. ನಟಿಯ ಜನ್ಮದಿನದಂದು ಮುಂದಿನ ಬಹುನಿರೀಕ್ಷಿತ ಚಿತ್ರಗಳ ಅಪ್​ಡೇಟ್ಸ್ ಸಿಗುವ ಸಾಧ್ಯತೆಗಳಿದ್ದು, ಸಿನಿಪ್ರಿಯರು ಹಾಗೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಶುಕ್ರವಾರ ತಮ್ಮ 28ನೇ ಜನ್ಮದಿನ ಆಚರಿಸಲು ಸಜ್ಜಾಗಿರುವ ಕಿರಿಕ್​ ಪಾರ್ಟಿ ಬೆಡಗಿ ಇಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನಟಿಯ ಪ್ರಯಾಣವನ್ನು ಸೆರೆಹಿಡಿದಿದೆ. ಆದ್ರೆ ಎಲ್ಲಿಗೆ ತೆರಳುತ್ತಿದ್ದಾರೆಂಬುದನ್ನು ಬಹಿರಂಗಪಡಿಸಿಲ್ಲ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ ಕಿರು ವಿಡಿಯೋ ಹಂಚಿಕೊಂಡ ರಶ್ಮಿಕಾ ಅದಕ್ಕೆ ಬಿಳಿ ಹೃದಯದ ಎಮೋಜಿ ಹಾಕಿದ್ದಾರೆ. "ಇದು ನನ್ನ ಜನ್ಮದಿನದ ವಾರ" ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ಮರುಭೂಮಿಯಂತೆ ತೋರಿದ್ದು, ಎಲ್ಲಿಗೆ ತೆರೆಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಎಂದಿನಂತೆ ಈ ವರ್ಷವೂ ರಶ್ಮಿಕಾ ಮಂದಣ್ಣ ಅವರ ಜನ್ಮದಿನ ವಿಶೇಷವಾಗಿರಲಿದೆ. ರಶ್ಮಿಕಾ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದಿ ಗರ್ಲ್‌ಫ್ರೆಂಡ್‌'ನ ಟೀಸರ್ ಏಪ್ರಿಲ್ 5 ರಂದು ಅನಾವರಣಗೊಳ್ಳಲಿದೆ. ರಶ್ಮಿಕಾ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಟೀಸರ್‌ಗಾಗಿ ಡಬ್ ಮಾಡಿದ್ದಾರೆ.

Rashmika Mandanna
ರಶ್ಮಿಕಾ ಇನ್​ಸ್ಟಾ ಸ್ಟೋರಿ

ಕುತೂಹಲದ ವಿಚಾರವೆಂದರೆ, ರಶ್ಮಿಕಾ ಮಂದಣ್ಣ ಅವರ ವದಂತಿಯ ಗೆಳೆಯ ವಿಜಯ್ ದೇವರಕೊಂಡ ಅವರ ಮುಂಂದಿನ ಬಹುನಿರೀಕ್ಷಿತ ಚಿತ್ರ 'ಫ್ಯಾಮಿಲಿ ಸ್ಟಾರ್' ಅನ್ನೂ ಕೂಡ ನಟಿಯ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇತ್ತೀಚೆಗೆ 'ಫ್ಯಾಮಿಲಿ ಸ್ಟಾರ್' ಪ್ರಮೋಶನಲ್​ ಈವೆಂಟ್​ನಲ್ಲಿ ಭಾಗವಹಿಸಿದ್ದ ಸಂದರ್ಭ, ಈ ದಿನಾಂಕದ ಆಯ್ಕೆಯ ಬಗ್ಗೆ ವಿಜಯ್ ಅವರಲ್ಲಿ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಟ, ಹಾಲಿಡೇ ಸೀಸನ್​​, ಅದಕ್ಕೆ ಹೊಂದಿಕೆಯಾಗುತ್ತದೆ ಎಂದು ತಿಳಿಸಿದರು. ರಶ್ಮಿಕಾ ಜನ್ಮದಿನದ ಬಗ್ಗೆ ಗಮನಸೆಳೆದಾಗ, "ಹೌದು, ರಶ್ಮಿಕಾರ ಹುಟ್ಟುಹಬ್ಬ. ಇದು ನಮಗೆ ಅದೃಷ್ಟ ತರಬಹುದು ಎಂದು ನಾನು ಭಾವಿಸುತ್ತೇನೆ" ಎಂದು ವಿಜಯ್ ತಿಳಿಸಿದರು. ನಟನ ಈ ಹೇಳಿಕೆಯು ಅವರ ಸಂಬಂಧದ ಸುತ್ತಲಿನ ಊಹಾಪೋಹಗಳಿಗೆ ತುಪ್ಪ ಸುರಿದಂತಿತ್ತು.

ಇದನ್ನೂ ಓದಿ: ಏ.8ಕ್ಕೆ 'ಪುಷ್ಪ 2' ಟೀಸರ್: ಕುತೂಹಲ ಕೆರಳಿಸಿದ ಗೆಜ್ಜೆ ತೊಟ್ಟ ಅಲ್ಲು ಅರ್ಜುನ್ ಪೋಸ್ಟರ್ - Pushpa 2 Teaser

ರಶ್ಮಿಕಾ ಕೊನೆಯದಾಗಿ ಅನಿಮಲ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಬ್ಲಾಕ್​ಬಸ್ಟರ್ ಹಿಟ್ ಆಗಿದೆ. ದಿ ಗರ್ಲ್‌ಫ್ರೆಂಡ್ ಹೊರತುಪಡಿಸಿ, ಆ್ಯಕ್ಷನ್-ಪ್ಯಾಕ್ಡ್ ಡ್ರಾಮಾ 'ಪುಷ್ಪ 2: ದಿ ರೂಲ್‌'ನಲ್ಲಿ ಅಲ್ಲು ಅರ್ಜುನ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ ನಟ ವಿಕ್ಕಿ ಕೌಶಲ್ ಜತೆ ಛಾವಾ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಯಶ್ 'ಟಾಕ್ಸಿಕ್​' ಚಿತ್ರೀಕರಣ: ಕಾರಣಗಳಿಲ್ಲಿವೆ - Toxic Shooting

ಶುಕ್ರವಾರ ರಶ್ಮಿಕಾ ಜನ್ಮದಿನವಾದರೆ, ಸೋಮವಾರ ಪುಷ್ಪ ನಾಯಕ ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬ. ಚಿತ್ರತಂಡ ಈಗಾಗಲೇ ಸೋಮವಾರದಂದು ಟೀಸರ್ ಅನಾವರಣಗೊಳಿಸುವುದಾಗಿ ತಿಳಿಸಿದೆ. ನಟಿಯ ಜನ್ಮದಿನದಂದು ಪೋಸ್ಟರ್ ಅನಾವರಣಗೊಳ್ಳುವ ಸಾಧ್ಯತೆ ಇದೆ.

Last Updated : Apr 3, 2024, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.