ETV Bharat / entertainment

ಪಂದ್ಯದ​ ವೇಳೆ ಸ್ಟೇಡಿಯಂನಲ್ಲಿ ಶಾರುಖ್​ ಖಾನ್​ ಸ್ಮೋಕಿಂಗ್: ವಿಡಿಯೋ ವೈರಲ್​​ - Shah Rukh Khan Smoking

author img

By ETV Bharat Karnataka Team

Published : Mar 24, 2024, 1:31 PM IST

Updated : Mar 24, 2024, 2:04 PM IST

ನಿನ್ನೆ ರಾತ್ರಿ ಜರುಗಿದ ಐಪಿಎಲ್​​ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಶಾರುಖ್ ಖಾನ್ ಧೂಮಪಾನ ಮಾಡುತ್ತಿದ್ದರು ಎಂದು ಆರೋಪಿಸಿರುವ ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿವೆ.

Shah Rukh Khan Smoking
ಶಾರುಖ್​ ಖಾನ್​ ಸ್ಮೋಕಿಂಗ್​

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ರಾತ್ರಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವರ್ಸಸ್ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಹೈವೋಲ್ಟೇಜ್​​ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲುವಿನ ನಗೆ ಬೀರಿದೆ. ಕೋಲ್ಕತ್ತಾ ತಂಡದ ಮಾಲೀಕರೂ ಆಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಧೂಮಪಾನ ಮಾಡುತ್ತಿದ್ದರು ಎಂದು ಆರೋಪಿಸಿರುವ ಹಲವು ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿವೆ.

ವಿಐಪಿ ಗ್ಯಾಲರಿಯೊಳಗಿದ್ದ ಎಸ್‌ಆರ್‌ಕೆ ಧೂಮಪಾನ ಮಾಡುತ್ತಿರುವ ಫೋಟೋ, ವಿಡಿಯೋಗಳು ಆನ್​ಲೈನ್​ನಲ್ಲಿ ಕಾಣಿಸಿಕೊಂಡಿವೆ. ಸ್ಮೋಕಿಂಗ್​​ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಕೆಆರ್‌ 77 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಎಸ್​ಆರ್​ಕೆ ಸ್ಮೋಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಜತೆಗಿದ್ದರು.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್​ ಖಾತೆಯಲ್ಲಿ ಶಾರುಖ್​ ಖಾನ್​ ಸ್ಮೋಕಿಂಗ್ ವಿಡಿಯೋ ಹಂಚಿಕೊಂಡು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಸ್ಕ್ರೀನ್​​ ಐಕಾನ್ ಆಗಿದ್ದರೂ ಸಹ ಈ ವರ್ತನೆಗೆ ಹೆಚ್ಚಿನ ಸಂಖ್ಯೆಯ ನೆಟಿಜನ್‌ಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಶಾರುಖ್​ ಸಖತ್ ಟ್ರೋಲ್​ ಆಗಿದ್ದಾರೆ.

ನೆಟ್ಟಿಗರೋರ್ವರು ಈ ವಿಡಿಯೋವನ್ನು ಹಂಚಿಕೊಂಡು, "ಈ ದೇಶದ ಹೆಚ್ಚಿನ ಯುವಕರು ಟಿವಿಯಲ್ಲಿ ಮ್ಯಾಚ್​​ ನೋಡುತ್ತಿರುವಾಗ ಶಾರುಖ್​ ಖಾನ್​ ಅವರ ಸ್ಮೋಕಿಂಗ್​ ದೃಶ್ಯವನ್ನು ತೋರಿಸಲು ನಿಮಗೆ (ವಾಹಿನಿ) ಎಷ್ಟು ಧೈರ್ಯ. ನಮ್ಮ ಮಕ್ಕಳ ಭವಿಷ್ಯ ಉಳಿಸುವ ಸಲುವಾಗಿ ಈ ವ್ಯಕ್ತಿಯನ್ನು ಟಿವಿಯಲ್ಲಿ ತೋರಿಸುವುದನ್ನು ಪ್ರಸಾರಕರು ನಿಲ್ಲಿಸಬೇಕು. ಬಿಸಿಸಿಐ, ದಯವಿಟ್ಟು ಭಾರತದ ಯಾವುದೇ ಕ್ರೀಡಾಂಗಣಕ್ಕೆ ಎಸ್​ಆರ್​ಕೆ ಪ್ರವೇಶವನ್ನು ನಿಷೇಧಿಸಿ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ವಿಜಯ್​: ಶೂಟಿಂಗ್​ ಲೊಕೇಶನ್​ನಿಂದ ವಿಡಿಯೋ ಶೇರ್ - Thalapathy Vijay

ಆರಂಭದಿಂದಲೂ ಕೆಕೆಆರ್​ ತಂಡದ ಸಹ-ಮಾಲೀಕರಾಗಿ ಶಾರುಖ್​ ಖಾನ್​ ಗುರುತಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗ, ಕೆಲವೊಮ್ಮೆ ಸಮಯ ಮಾಡಿಕೊಂಡು ಐಪಿಎಲ್ ಮ್ಯಾಚ್​ಗೆ ಹಾಜರಾಗುತ್ತಾರೆ. ಶನಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಈ ಸೀಸನ್​ನ ಮೊದಲ ಪಂದ್ಯವಾದ ಹಿನ್ನೆಲೆಯಲ್ಲಿ ಶಾರುಖ್ ತಮ್ಮ ತಂಡವನ್ನು ಬೆಂಬಲಿಸಲು ಸ್ಟೇಡಿಯಂಗೆ ಬಂದರು. ಸ್ಟೇಡಿಯಂನಿಂದ ಬಾಲಿವುಡ್​ ಕಿಂಗ್​ನ ಹಲವು ಫೋಟೋ-ವಿಡಿಯೋಗಳು ಹೊರಬಿದ್ದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: ಯಶ್​​ 'ಟಾಕ್ಸಿಕ್'​ನಲ್ಲಿ ಕರೀನಾ, ಸಾಯಿ ಪಲ್ಲವಿ, ಶ್ರುತಿ ಹಾಸನ್​?: 'ಊಹಾಪೋಹದಿಂದ ದೂರವಿರಿ' - Toxic

ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಶಾರುಖ್​ ಖಾನ್​​ ಮೂರು ಸಿನಿಮಾಗಳೊಂದಿಗೆ ಬಾಲಿವುಡ್​ಗೆ ಕಮ್​ ಬ್ಯಾಕ್​ ಮಾಡಿ ಯಶ ಕಂಡರು.​ ಮತ್ತು ಜವಾನ್ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿ, ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರುವಲ್ಲಿ ಯಶಸ್ವಿಯಾಯಿತು. ನಟನ ಮುಂದಿನ ಬಹುನಿರೀಕ್ಷಿತ ಸಿನಿಮಾ ಪಠಾಣ್​​ 2. ಜೊತೆಗೆ ಟೈಗರ್​ ವರ್ಸಸ್ ಪಠಾಣ್​ ಕೂಡ ಯೋಜನಾ ಹಂತದಲ್ಲಿದೆ. ಇನ್ನೂ ಸಲ್ಮಾನ್​ ಖಾನ್​​, ಅಮಿರ್​ ಖಾನ್​ ಜೊತೆ ಸಿನಿಮಾ ಮಾಡುವ ಸಾಧ್ಯತೆಗಳಿದ್ದು, ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

Last Updated :Mar 24, 2024, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.