ETV Bharat / entertainment

ಮೈಸೂರಿನಲ್ಲಿ ರವೀನಾ ಟಂಡನ್: ಮಸ್ತ್ ಮಸ್ತ್ ಹುಡ್ಗಿ ಬಂದ್ಲು ಹಾಡಿಗೆ ಮಸ್ತ್ ಡ್ಯಾನ್ಸ್ - Raveen Tandon in Mysuru

author img

By ETV Bharat Karnataka Team

Published : May 12, 2024, 4:40 PM IST

ಬಾಲಿವುಡ್ ಅಭಿನೇತ್ರಿ ರವೀನಾ ಟಂಡನ್ ಇಂದು ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ.

Raveen Tandon in Mysuru
ಮೈಸೂರಿನಲ್ಲಿ ರವೀನಾ ಟಂಡನ್ (ETV Bharat)

ಮೈಸೂರಿನಲ್ಲಿ ರವೀನಾ ಟಂಡನ್ (ETV Bharat)

ಮೈಸೂರು: ನಗರದ ಸಂತ ಫಿಲೋಮಿನಾ ಚರ್ಚ್ ರಸ್ತೆಯಲ್ಲಿ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ ಕಂಪನಿಯೊಂದರ 11ನೇ ಶಾಖೆಯನ್ನು ಬಾಲಿವುಡ್ ಬೆಡಗಿ ರವೀನಾ ಟಂಡನ್ ಇಂದು ಲೋಕಾರ್ಪಾಣೆಗೊಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಸ್ತ್ ಮಸ್ತ್ ಹುಡ್ಗಿ ಬಂದ್ಲು ಹಾಡಿಗೆ ಸಕತ್​ ಸ್ಟೆಪ್​​​ ಹಾಕಿದ್ರು.

ವಯೋಲಿನ್ ಹಾಗೂ ಚಂಡೆ ಮೂಲಕ ಮಸ್ತ್ ಮಸ್ತ್ ಹುಡ್ಗಿ ಬಂದ್ಲು ಹಾಡನ್ನು ನುಡಿಸೋ ಮೂಲಕ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ರವೀನಾ ಟಂಡನ್ ಅವರನ್ನು ಸ್ವಾಗತಿಸಲಾಯಿತು. ಪ್ರಸಿದ್ಧ ಕಂಪನಿಯ 11ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪೇಂದ್ರ ಅವರ ಮೂಲಕ ನಾನು ಕನ್ನಡ ಚಲನಚಿತ್ರಕ್ಕೆ ಪರಿಚಯವಾದೆ. ಅಲ್ಲದೇ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳ ಮೂಲಕ ಹೆಸರು ಮಾಡಿದೆ. ನಾನು ಎಲ್ಲೇ ಹೋದರೂ, ಕನ್ನಡ ನಾಡಿನ ಜನರನ್ನು ಮರೆಯುವುದಿಲ್ಲ ಎಂದು ತಿಳಿಸಿದರು. ಜೊತೆಗೆ ಯಾವುದೇ ಕಂಪನಿಗಳು ಉಳಿಯಬೇಕಾದರೆ ಗ್ರಾಹಕರ ನಂಬಿಕೆ ಮುಖ್ಯವಾಗಿದೆ ಎಂದು ಕೂಡ ತಿಳಿಸಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಸಂತ ಫಿಲೋಮಿನಾ ಚರ್ಚ್​​ನ ಸ್ಟ್ಯಾನ್ಲಿ ಅಲ್ಮೆಂಡ, ಮಾಜಿ ಮಿಸೆಸ್ ಇಂಡಿಯಾ ಯೂನಿವರ್ಸ್ ಡಾ. ಹೇಮಮಾಲಿನಿ ಲಕ್ಷ್ಮಣ್, ವೆಲ್ಫೀನ್ ಇಂಡಸ್ಟ್ರಿಸ್‌ನ ಗೌವ್ಹರ್ ನಾಜ್, ಸುಲ್ತಾನ್ ಆಡಳಿತ ಮಂಡಳಿಯ ನಿರ್ದೇಶಕ ಡಾ. ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: 'ಪ್ರಭಾಸ್ ನಾವು ಹೇಳಿದ ಪಾತ್ರದ ಬದಲಾಗಿ, ಅವರಿಷ್ಟದ ರೋಲ್ ಆಯ್ದುಕೊಂಡರು': ವಿಷ್ಣು ಮಂಚು - Kannappa

ರವೀನಾ ಟಂಡನ್ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ. 49ರ ಹರೆಯದಲ್ಲೂ ಯುವತಿಯರೂ ನಾಚುವಂತ ಸೌಂದರ್ಯ. ಅಭಿನಯ ಅತ್ಯುತ್ತಮ. ಅಭಿಮಾನಿಗಳ ಸಂಖ್ಯೆ ಅಪಾರ. ಕೆಜಿಎಫ್​ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಿ ಕನ್ನಡಿಗರ ಮನೆ ಮಾತಾಗಿದ್ದಾರೆ. ಇವರ ಅಮೋಘ ಅಭಿನಯ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಪುತ್ರನ 'ಟೈಮ್ ಬರುತ್ತೆ' ಹಾಡಿಗೆ ಫ್ಯಾನ್ಸ್ ಫಿದಾ - Gowri movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.