ETV Bharat / entertainment

ಲಕ್ಕಿ ಫ್ಯಾನ್​: ರಶ್ಮಿಕಾಗೆ ಕೆಂಗುಲಾಬಿ​ ಕೊಟ್ಟು ಪ್ರೀತಿ ವ್ಯಕ್ತಪಡಿಸಿದ ಅಭಿಮಾನಿ - ವಿಡಿಯೋ ವೈರಲ್

author img

By ETV Bharat Karnataka Team

Published : Feb 17, 2024, 4:54 PM IST

ಅಭಿಮಾನಿಯೊಂದಿಗೆ ರಶ್ಮಿಕಾ ಮಂದಣ್ಣ ಅವರ ಸ್ವೀಟ್​​ ಮೂಮೆಂಟ್​ ನೆಟ್ಟಿಗರ ಮನಮುಟ್ಟಿದೆ.

Rashmika Mandanna with Fan
ಅಭಿಮಾನಿಯೊಂದಿಗೆ ರಶ್ಮಿಕಾ ಮಂದಣ್ಣ

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರು ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಂದು ಅಭಿಮಾನಿಯೋರ್ವರಿಗೆ​ ತಮ್ಮ ಅಚ್ಚುಮೆಚ್ಚಿನ ನಟಿಯನ್ನು ನೋಡುವ, ಪ್ರೀತಿ ವ್ಯಕ್ತಪಡಿಸುವ ಅದೃಷ್ಟ ಒದಗಿಬಂದಿದೆ. ಹೌದು, ಅಭಿಮಾನಿ ಓರ್ವರು ನಟಿಗೆ ಕೆಂಗುಲಾಬಿ ಕೊಟ್ಟು, ತಮ್ಮ ಪ್ರೀತಿ ವ್ಯಕ್ತಪಡಿಸಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಟಿಯ ಐಕಾನಿಕ್​​ ಸಿಂಬಲ್​ಗಳಾದ ಹಾರ್ಟ್ ಮತ್ತು ಲವ್​​ ಸಿಂಬಲ್ ಅನ್ನು ಜೊತೆಯಾಗಿ​ ಪ್ರದರ್ಶಿಸಿ ಪ್ರೀತಿದಾಯಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಮುಂಬೈನಲ್ಲಿ ನ್ಯಾಶನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಬೆರಗುಗೊಳಿಸುವ ನೋಟ ಬೀರಿದರು. ತಾರೆಯ ಮೊಗ ಕಂಗೊಳಿಸುತ್ತಿತ್ತು. ಫ್ಲೇರ್ಡ್ ಡೆನಿಮ್ ಮತ್ತು ಕ್ರಾಪ್ ಜಾಕೆಟ್‌ನಲ್ಲಿ ಸೊಗಸಾಗಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಕಿವಿಯೋಲೆ, ಅಚ್ಚುಕಟ್ಟಾದ ಮೇಕ್​​ಅಪ್​ನಲ್ಲಿ ಮಂದಣ್ಣ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ನೇಹಾ ಧೂಪಿಯಾ ಅವರ ಚಾಟ್ ಶೋ 'ನೋ ಫಿಲ್ಟರ್ ನೇಹಾ'ದ ಶೂಟಿಂಗ್​ಗಾಗಿ ರಶ್ಮಿಕಾ ಮಂದಣ್ಣ ಮುಂಬೈಗೆ ಆಗಮಿಸಿದ್ದರು. ನೇಹಾ ಅವರ ಕಾರ್ಯಕ್ರಮದ ಶೂಟಿಂಗ್‌ಗೂ ಮುನ್ನ ರಶ್ಮಿಕಾ ಪಾಪರಾಜಿಗಳ ಕ್ಯಾಮರಾಗೆ ಪೋಸ್​ ನೀಡಿದರು. ಜೊತೆಗೆ ಅಭಿಮಾನಿಗೂ ಸಮಯ ಮೀಸಲಿಟ್ಟರು.

ಪಾಪರಾಜಿಗಳ ಫೋಟೋ ಸೆಷನ್ ಸಮಯದಲ್ಲಿ, ಅಭಿಮಾನಿಯೊಬ್ಬರು ಬಂದು ರಶ್ಮಿಕಾಗೆ ಕೆಂಗುಲಾಬಿಯನ್ನು ನೀಡಿದರು. ನಟಿ ಅದನ್ನು ಬಹಳ ಪ್ರೀತಿಯಿಂದ, ನಗುಮೊಗದಲ್ಲಿ ಸ್ವೀಕರಿಸಿದರು. ಅಭಿಮಾನಿ ತಮ್ಮ ಕೈಗಳಲ್ಲಿ ಹಾರ್ಟ್, ಲವ್​ ಸಿಂಬಲ್ ಬಳಸಿ ಕ್ಯಾಮರಾಗೆ ಪೋಸ್​ ನೀಡಿದ್ದು, ನಟಿ ಅಭಿಮಾನಿಗೆ ಸಾಥ್ ನೀಡಿದರು.​​ ರಶ್ಮಿಕಾರ ಸ್ವೀಟ್​ ಮೂಮೆಂಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ: ಭಟ್ಕಳ ಶಾಪ್​​ನಲ್ಲಿ ಪತ್ನಿ ರಾಧಿಕಾಗೆ ಕ್ಯಾಂಡಿ ಕೊಡಿಸಿದ ಯಶ್​​; ಮುದ್ದಾದ ಫೋಟೋಗಳು ವೈರಲ್​

ವಿಡಿಯೋಗೆ ಪ್ರತಿಕ್ರಿಯಿಸಿದ ಸೋಷಿಯಲ್​ ಮೀಡಿಯಾ ಬಳಕೆದಾರರೋರ್ವರು, ''ಸರಳತೆ" ಎಂದು ಉಲ್ಲೇಖಿಸಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ "ಅವರು ಎಂದಿನಂತೆ ಅತ್ಯುತ್ತಮ" ಎಂದು ಬರೆದಿದ್ದಾರೆ. ನಟಿ ಪ್ರತಿಕ್ರಿಯಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಯೋರ್ವರು, "ಹಾಗಾಗಿಯೇ ಅವರು ನ್ಯಾಶನಲ್​ ಕ್ರಶ್​" ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಸಾಕಷ್ಟು ನೆಟ್ಟಿಗರು ನಟಿಯ ನಡೆನುಡಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಅಮಿತಾಭ್​​ ಬಚ್ಚನ್ ವೃತ್ತಿಜೀವನಕ್ಕೆ 55 ವರ್ಷಗಳ ಸಂಭ್ರಮ; ಪ್ರಯಾಣ ಪ್ರತಿನಿಧಿಸುವ 'ಎಐ' ಫೋಟೋ ಶೇರ್

ಅನಿಮಲ್ ಯಶಸ್ಸಿನಲ್ಲಿರುವ ರಶ್ಮಿಕಾ ಕೈಯಲ್ಲಿ ಹಲವು ಪ್ರಾಜೆಕ್ಟ್​​ಗಳಿವೆ. ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಜೊತೆಗಿನ ಪೀರಿಯಾಡಿಕಲ್​ ಡ್ರಾಮಾ ಛಾವಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ, 'ಪುಷ್ಪ: ದಿ ರೂಲ್‌'ನಲ್ಲಿ ಬ್ಯುಸಿಯಾಗಿದ್ದಾರೆ. ದಿ ಗರ್ಲ್‌ಫ್ರೆಂಡ್ ಮತ್ತು ರೈನ್‌ಬೋ ಸಿನಿಮಾಗಳಲ್ಲಿಯೂ ತಮ್ಮ ತೊಡಗಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.