ETV Bharat / entertainment

ಮಾ.26ಕ್ಕೆ 'ಮಗಧೀರ' ಮರು ಬಿಡುಗಡೆ: ರಾಮ್​ ಚರಣ್​​ ಫ್ಯಾನ್ಸ್​​​ಗೆ ಸ್ಪೆಷಲ್​ ಗಿಫ್ಟ್​

author img

By ETV Bharat Karnataka Team

Published : Mar 20, 2024, 6:05 PM IST

ರಾಮ್ ಚರಣ್ ಅಭಿನಯದ 2009ರ ಸೂಪರ್​ ಹಿಟ್​ ಚಿತ್ರ 'ಮಗಧೀರ' ನಟನ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ.

Magadheera Re release
ಮಗಧೀರ ಮರು ಬಿಡುಗಡೆ

ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಲೆಜೆಂಡರಿ ಡೈರೆಕ್ಟರ್​​ ಎಸ್​.ಎಸ್​​ ರಾಜಮೌಳಿ ನಿರ್ದೇಶನದಲ್ಲಿ 2009ರಲ್ಲಿ ಮೂಡಿಬಂದ 'ಮಗಧೀರ' ತೆಲುಗಿನ ಬ್ಲಾಕ್​ಬಸ್ಟರ್ ಚಿತ್ರಗಳಲ್ಲೊಂದು. ರಾಮ್ ಚರಣ್ ಮತ್ತು ಕಾಜಲ್​ ಅಗರ್​ವಾಲ್​​ ನಟನೆಯ ಮಗಧೀರ, ಆ ಕಾಲದ ಅತಿ ಹೆಚ್ಚು ಗಳಿಕೆಯ ತೆಲುಗು ಚಲನಚಿತ್ರಗಳಲ್ಲಿ ಒಂದಾಗಿದೆ. ಆರ್​ಆರ್​ಆರ್​ ಮೂಲಕ ವಿಶ್ವವಿಖ್ಯಾತರಾಗಿರುವ ಎಸ್​.ಎಸ್​​ ರಾಜಮೌಳಿ ಮತ್ತು ರಾಮ್ ಚರಣ್ ಕಾಂಬಿನೇಶನ್​ನ 2009ರ ಸಿನಿಮಾ ಮರು ಬಿಡುಗಡೆಗೆ ಸಜ್ಜಾಗಿದೆ. ಈ ಬಗ್ಗೆ ಸುದ್ದಿಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಮಾರ್ಚ್ 27, ಸೌತ್​ ಸೂಪರ್ ಸ್ಟಾರ್ ರಾಮ್ ಚರಣ್ ಅವರ ಹುಟ್ಟುಹಬ್ಬ. ಆರ್​ಆರ್​ಅರ್​ ಬಳಿಕ ನಟನ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದ್ದು, ಈ ಬಾರಿ ಅವರ ಹುಟ್ಟುಹಬ್ಬ ಹಿಂದಿನದಕ್ಕಿಂತ ಹೆಚ್ಚು ವಿಶೇಷವಾಗಿರಲಿದೆ ಎಂದು ನಂಬಲಾಗಿದೆ. ಜನ್ಮದಿನದ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 26ರಂದು ಮಗಧೀರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ. ಈ ವಿಶೇಷ ಪ್ರದರ್ಶನ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿರುವ ಅವರ ಅಭಿಮಾನಿಗಳನ್ನು ಸಂತೋಷಪಡಿಸುವ ಗುರಿ ಹೊಂದಿದೆ.

ಯಶಸ್ವಿ ಚಿತ್ರದ ಮರುಬಿಡುಗಡೆ ಚಿತ್ರಮಂದಿರಗಳಿಗೆ ಅಪಾರ ಸಂಖ್ಯೆಯ ಸಿನಿಪ್ರಿಯರನ್ನು ಸೆಳೆಯೋ ಸಾಧ್ಯತೆ ಇದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್, ಕಾಜಲ್ ಅಗರ್​ವಾಲ್​​, ಶ್ರೀಹರಿ, ದೇವ್ ಗಿಲ್, ಸುನೀಲ್ ಸೇರಿದಂತೆ ಹಲವರು ನಟಿಸಿದ್ದಾರೆ. ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಅವರ ಅದ್ಭುತ ಸಂಗೀತವನ್ನು ಹೊಂದಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಪೋಸ್ಟರ್​ನಲ್ಲೇ ಕುತೂಹಲ ಮೂಡಿಸಿದ ಝೈದ್ ಖಾನ್ ನೂತನ ಚಿತ್ರ; ಶೀಘ್ರವೇ ಟೈಟಲ್​ ರಿವೀಲ್

ಪ್ರಸ್ತುತ ಗೇಮ್ ಚೇಂಜರ್ ಚಿತ್ರೀಕರಣದಲ್ಲಿ ತೊಡಗಿರುವ ರಾಮ್ ಚರಣ್ ಅವರ ಆರ್‌ಸಿ 16 ಚಿತ್ರ ಕೂಡ ಇಂದೇ ತನ್ನ ಪೂಜಾ ಸಮಾರಂಭವನ್ನು ಪೂರ್ಣಗೊಳಿಸಿಕೊಂಡಿದೆ. ಶಂಕರ್ ನಿರ್ದೇಶನದ ಪೊಲಿಟಿಕಲ್​ ಡ್ರಾಮಾ 'ಗೇಮ್ ಚೇಂಜರ್'ನಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪ್ರೊಜೆಕ್ಟ್​​ ನಂತರ ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ''ಆರ್‌ಸಿ 16'' ಚಿತ್ರೀಕರಣ ಶುರುವಾಗಲಿದೆ. ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಚಿತ್ರದ ನಾಯಕನಟಿ. ಇಂದು ಮುಂಜಾನೆ ಚಿತ್ರದ ಪೂಜಾ ಕಾರ್ಯಕ್ರಮ ನೆರವೇರಿದ್ದು, ಫೋಟೋ-ವಿಡಿಯೋಗಳು ಸಖತ್​​ ಸದ್ದು ಮಾಡುತ್ತಿದೆ. ಜಾಹ್ನವಿ ಕಪೂರ್ ಮತ್ತು ರಾಮ್​​ ಚರಣ್​ ಜೋಡಿಯ ಚೊಚ್ಚಲ ಚಿತ್ರ ಇದು. ಆರ್​ಆರ್​ಆರ್​ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಮ್​ ಚರಣ್​ ಅವರ ಮುಂದಿನ ಚಿತ್ರಗಳ ಬಿಡುಗಡೆಗೆ ಅಭಿಮಾನಿಗಳು ಮತ್ತು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ತಾಯಿ, ಪತಿ, ಪುತ್ರಿ ಜೊತೆ ಅಯೋಧ್ಯೆಗೆ ಭೇಟಿ ಕೊಟ್ಟ ಪ್ರಿಯಾಂಕಾ ಚೋಪ್ರಾ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.