ETV Bharat / entertainment

ಸ್ವಂತ ಜೆಟ್​ನಲ್ಲಿ ಪ್ರವಾಸ ಕೈಗೊಂಡ ಸೂಪರ್ ಸ್ಟಾರ್ ರಾಮ್​ ಚರಣ್​​ - Ram Charan

author img

By ETV Bharat Karnataka Team

Published : Mar 30, 2024, 1:05 PM IST

Updated : Mar 30, 2024, 1:50 PM IST

ರಾಮ್ ಚರಣ್ ತಮ್ಮ ಸ್ವಂತ ಜೆಟ್‌ನಲ್ಲಿ ಪ್ರವಾಸಕ್ಕೆ ಹೊರಟ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

Ram Charan
ರಾಮ್​ ಚರಣ್​​

ಬರ್ತ್​ಡೇ ಸೆಲೆಬ್ರೇಶನ್​, ಬ್ಯಾಕ್ ಟು ಬ್ಯಾಕ್ ಸಿನಿಮಾ ಅನೌನ್ಸ್​​ಮೆಂಟ್ಸ್ ಬೆನ್ನಲ್ಲೇ ರಾಮ್ ಚರಣ್ ಪ್ರವಾಸ ಕೈಗೊಂಡಿದ್ದಾರೆ. ಇಂದು ತಮ್ಮ ಮುದ್ದು ಶ್ವಾನದೊಂದಿಗಿನ ಫೋಟೋ ಹಂಚಿಕೊಂಡು ಪ್ರವಾಸ ಕೈಗೊಂಡಿರುವ ವಿಚಾರವನ್ನು ತಿಳಿಸಿದ್ದಾರೆ. ಫೋಟೋದಲ್ಲಿ ರಾಮ್ ಚರಣ್ ಸ್ವಂತ ವಿಮಾನದಲ್ಲಿ ಕಾಣಿಸಿಕೊಂಡಿದ್ದು, ಎಲ್ಲಿಗೆ ತೆರಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಸೌತ್​ ಸೂಪರ್​​ ಸ್ಟಾರ್ ರಾಮ್ ಚರಣ್ ಮತ್ತು ಉದ್ಯಮಿ ಉಪಾಸನಾ ದಂಪತಿಯ ಮುದ್ದಿನ ರೈಮ್‌ (Rhyme - ಸಾಕು ಶ್ವಾನ)ಗೆ ಮೀಸಲಾಗಿರುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಂದು ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, ನಟ ತಮ್ಮ ಗೇಮ್ ಚೇಂಜರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ತಮ್ಮ ಪ್ರವಾಸದ ನೋಟಕ್ಕಾಗಿ ಸಂಪೂರ್ಣ ಕಪ್ಪುಡುಗೆಯನ್ನು ಆರಿಸಿಕೊಂಡಿದ್ದಾರೆ. ರೈಮ್‌ ಫ್ಲೈಟ್​ ಸೀಟ್​ನಲ್ಲಿ ಕುಳಿತಿದ್ದರೆ, ರಾಮ್​​ ಚರಣ್​ ಸೈಡ್​​ನಲ್ಲಿದ್ದು, ಏನನ್ನೋ ನೋಡುತ್ತಿರುವಂತೆ ಪೋಸ್​ ಕೊಟ್ಟಿದ್ದಾರೆ. ನಟನ ಲುಕ್​ ಗೇಮ್​​ ಚೇಂಜರ್​​ ಸಿನಿಮಾಗೆ ಸಂಬಂಧಿಸಿದ್ದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಫೋಟೋ ಶೇರ್ ಮಾಡಿ, ''ವೆಕೆ ಮೂಡ್ ಆನ್''​ ಎಂದು ಕ್ಯಾಪ್ಷನ್​ ಕೊಡಲಾಗಿದೆ.

ನಟನ ಸಿನಿಮಾ ವಿಚಾರ ಗಮನಿಸುವುದಾದರೆ, ಎಸ್. ಶಂಕರ್ ನಿರ್ದೇಶನದ 'ಗೇಮ್ ಚೇಂಜರ್‌'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 2024ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಪೊಲಿಟಿಕಲ್​ ಥ್ರಿಲ್ಲರ್ ಚಿತ್ರದಲ್ಲಿ ಬಾಲಿವುಡ್​​ ಬೆಡಗಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್​ ಚರಣ್​ ಮತ್ತು ಕಿಯಾರಾ ಅಡ್ವಾಣಿ ಸ್ಕ್ರೀನ್​ ಶೇರ್ ಮಾಡಿರುವ ಎರಡನೇ ಚಿತ್ರವಿದು. ಇದಕ್ಕೂ ಮೊದಲು 2019ರಲ್ಲಿ ಬಂದ ವಿನಯ ವಿಧೇಯ ರಾಮ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಮಾರ್ಚ್ 27ರ ರಾಮ್ ಚರಣ್ ಅವರ 39ನೇ ಹುಟ್ಟುಹಬ್ಬದಂದು, ಚಿತ್ರ ನಿರ್ಮಾಪಕರು 'ಜರಗಂಡಿ' ಎಂಬ ಮೊದಲ ಹಾಡನ್ನು ಅನಾವರಣಗೊಳಿಸಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಇದನ್ನೂ ಓದಿ: ಮನಾರಾ ಚೋಪ್ರಾ ಬರ್ತ್​​ಡೇ ಪಾರ್ಟಿಯಲ್ಲಿ ಪ್ರಿಯಾಂಕಾ, ನಿಕ್ ಜೋನಾಸ್: ವಿಡಿಯೋ - Mannara Chopra Birthday

ಗೇಮ್​ ಚೇಂಜರ್ ಅಲ್ಲದೇ ಉಪ್ಪೇನಾ ಖ್ಯಾತಿಯ ಬುಚ್ಚಿ ಬಾಬು ಸನಾ ಅವರ ಚಿತ್ರದಲ್ಲೂ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ ''ಆರ್‌ಸಿ 16'' ಎಂದು ಹೆಸರಿಸಲಾಗಿದೆ. ಚಿತ್ರದಲ್ಲಿ ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಹ್ನವಿ ಅವರಿಗಿದು ಚೊಚ್ಚಲ ತೆಲುಗು ಸಿನಿಮಾ. ಆರ್‌ಸಿ 16 ಅನ್ನು ವೃದ್ಧಿ ಸಿನಿಮಾಸ್‌ ಅಡಿ ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

ಇದನ್ನೂ ಓದಿ: ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ: ವಿಶೇಷ ಗೌರವಕ್ಕೆ ಪಾತ್ರರಾದ ದಕ್ಷಿಣ ಭಾರತದ ಮೊದಲ ನಟ - Allu Arjun Wax Statue

ಇದಲ್ಲದೇ ರಾಮ್ ಚರಣ್, ಸುಕುಮಾರ್ ಜೊತೆ ಕೈಜೋಡಿಸಲಿದ್ದಾರೆ. ಕಥಾವಸ್ತುವನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಈ ವರ್ಷದ ಕೊನೆಯಲ್ಲಿ ಸೆಟ್ಟೇರುವ ಸಾಧ್ಯತೆಯಿದೆ. ಚಿತ್ರ 2025ರ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಈ ಪ್ರಾಜೆಕ್ಟ್​ ಅನ್ನು ಪ್ರಸ್ತುತ 'ಆರ್​ಸಿ17' ಎಂದು ಹೆಸರಿಸಲಾಗಿದೆ.

Last Updated : Mar 30, 2024, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.