ETV Bharat / entertainment

ಗೇಮ್ ಚೇಂಜರ್ ಶೂಟಿಂಗ್​ ಸ್ಪಾಟ್​ನಲ್ಲಿ ಜಮಾಯಿಸಿದ ಅಭಿಮಾನಿಗಳು: ರಾಮ್​ ಚರಣ್​​ ವಿಡಿಯೋ ವೈರಲ್​

author img

By ETV Bharat Karnataka Team

Published : Mar 17, 2024, 3:06 PM IST

'ಗೇಮ್ ಚೇಂಜರ್' ಶೂಟಿಂಗ್​ ಲೊಕೇಶನ್​ನಿಂದ ಫೋಟೋ-ವಿಡಿಯೋಗಳು ವೈರಲ್​ ಆಗಿವೆ.

Ram Charan and Kiara Advani
ರಾಮ್​ ಚರಣ್ ಕಿಯಾರಾ ಅಡ್ವಾಣಿ

ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಹಾಗೂ ಬಾಲಿವುಡ್​​ ಬೆಡಗಿ ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್'. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಚಿತ್ರೀಕರಣ ಚುರುಕುಗೊಂಡಿದೆ. ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಚಿತ್ರದ ಶೂಟಿಂಗ್​​ನಲ್ಲಿ ಪ್ರಮುಖ ತಾರೆಯರು ಭಾಗಿಯಾಗಿದ್ದಾರೆ. ಮೆಚ್ಚಿನ ನಟರು ಶೂಟಿಂಗ್​​ ಸಲುವಾಗಿ ನಗರದಲ್ಲಿರುವ ವಿಚಾರ ತಿಳಿದು ಉತ್ಸುಕರಾದ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ನೋಡಲು ಲೊಕೇಶನ್​ಗೆ ಬಂದು ಜಮಾಯಿಸಿದರು. ಇದೀಗ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅವರ ಫೋಟೋ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

'ಗೇಮ್ ಚೇಂಜರ್‌' ಚಿತ್ರತಂಡ ನಟರ ನೋಟದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಅಭಿಮಾನಿಗಳೀಗ ಚಿತ್ರೀಕರಣದ ಸ್ಥಳದಿಂದ ಫೋಟೋ-ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಲೀಕ್​ ಆದ ದೃಶ್ಯಗಳಲ್ಲಿ, ರಾಮ್ ಚರಣ್ ಫಾರ್ಮಲ್ ಶರ್ಟ್, ಪ್ಯಾಂಟ್ ಮತ್ತು ಶೂ ಧರಿಸಿದ್ದು, ಅದಕ್ಕೆ ಹೊಂದಿಕೆಯಾಗುವಂತೆ ಹೇರ್​ಸ್ಟೈಲ್​​ ಇತ್ತು. ಜೊತೆಗೆ ಕಪ್ಪು ಕನ್ನಡಕವನ್ನೂ ಧರಿಸಿದ್ದರು. ಮತ್ತೊಂದೆಡೆ ಕಿಯಾರಾ ಅಡ್ವಾಣಿ ಸರಳವಾಗಿ ಬ್ಲ್ಯೂ-ಗೋಲ್ಡ್​ ಕಾಂಬಿನೇಶನ್​ನ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಗೆ ಇಟ್ಟಿದ್ದ ಸಣ್ಣ ಬಿಂದಿ ಕಿಯಾರಾ ಅವರ ಆಕರ್ಷಣೆ ಹೆಚ್ಚಿಸಿತ್ತು.

ವಿಡಿಯೋವೊಂದರಲ್ಲಿ, ಆರ್​​ಕೆ ಬೀಚ್‌ ಬಳಿ ಸೆಟ್ ಹಾಕಿದಂತಿತ್ತು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಡಬೇಕಾಯ್ತು. ಭದ್ರತೆಯ ಹೊರತಾಗಿಯೂ ರಾಮ್ ಚರಣ್ ಸುತ್ತಲೂ ಸಾಕಷ್ಟು ಅಭಿಮಾನಿಗಳು ನೆರೆದಿದ್ದರು. ನಟನ ಶೂಟಿಂಗ್ ಪೂರ್ಣಗೊಳ್ಳುವವರೆಗೂ ದೊಡ್ಡ ಜನಸಮೂಹವೇ ಇತ್ತು.

ಇದನ್ನೂ ಓದಿ: 'ವಂಗಾಗೆ ನನ್ನ ಒಂದೇ ಒಂದು ತಪ್ಪು ಕಂಡುಹಿಡಿಯಲು ಆಗಲಿಲ್ಲ': ಜಾವೇದ್ ಅಖ್ತರ್ ವ್ಯಂಗ್ಯ

ಸಿನಿಮಾದ ಕಥಾಹಂದರದ ಬಗ್ಗೆ ಚಿತ್ರತಂಡ ಮೌನ ಮುಂದುವರಿಸಿದೆ. ಸದ್ಯ ಸಿನಿಮಾ ಸುತ್ತಲಿರುವ ಮಾಹಿತಿ ಪ್ರಕಾರ, ನೈಜಘಟನೆಗಳನ್ನಾಧರಿಸಿದ ಪೊಲಿಟಿಕಲ್​ ಡ್ರಾಮಾ. ನಿರ್ದೇಶಕ ಶಂಕರ್ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಆದ ಹಿನ್ನೆಲೆ, ಸಿನಿಮಾ ವಿಳಂಬವಾಗಿದೆ. ರಾಮ್ ಚರಣ್ ಮತ್ತು ಕಿಯಾರಾ ಜೊತೆ ಅಂಜಲಿ, ಜೈರಾಮ್, ಸುನಿಲ್, ಸಮುದ್ರಕನಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಅಪ್ಪು ನಿರ್ವಹಿಸಿದ ಪಾತ್ರಗಳೆಲ್ಲವೂ ವಿಭಿನ್ನ: ತೆರೆ ಮೇಲೆ ನಕ್ಷತ್ರದಂತೆ ಮಿಂಚಿ ಮರೆಯಾದ ನಟ

ಗೇಮ್ ಚೇಂಜರ್ ಪೂರ್ಣಗೊಂಡ ಬಳಿಕ ರಾಮ್ ಚರಣ್, ಬುಚ್ಚಿ ಬಾಬು ಸನಾ ನಿರ್ದೇಶನದ ಸ್ಪೋರ್ಟ್ ಡ್ರಾಮಾದಲ್ಲಿ ಕೆಲಸ ಮಾಡಲಿದ್ದಾರೆ. ಜಾಹ್ನವಿ ಕಪೂರ್ ಜೊತೆ ಇದೇ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡುತ್ತಿರೋ ಈ ಚಿತ್ರ ಇದೇ ತಿಂಗಳಲ್ಲಿ ಸೆಟ್ಟೇರಲಿದೆ ಎನ್ನಲಾಗಿದೆ. ಮತ್ತೊಂದೆಡೆ, ಕಿಯಾರಾ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್​ ಜೊತೆ ವಾರ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣ್​​ವೀರ್ ಸಿಂಗ್ ಅಭಿನಯದ ಡಾನ್ 3 ನಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.