ETV Bharat / entertainment

'ಪ್ರೇಮಲು' ನಾಯಕಿ ಮಮಿತಾ ಅಭಿನಯಕ್ಕೆ ನಿರ್ದೇಶಕ ರಾಜಮೌಳಿ ಫಿದಾ

author img

By ETV Bharat Karnataka Team

Published : Mar 13, 2024, 9:24 AM IST

Updated : Mar 13, 2024, 10:24 AM IST

Rajamouli Premalu Movie Heroine: ಸಾಮಾನ್ಯವಾಗಿ ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಜಕ್ಕಣ್ಣ ಇತ್ತೀಚೆಗೆ ಲವ್ ಸ್ಟೋರಿ ಸಿನಿಮಾವೊಂದರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಅದರಲ್ಲಿನ ನಾಯಕಿಯ ಅಭಿನಯದ ಬಗ್ಗೆ ಜಕಣ್ಣ ಫಿದಾ ಆಗಿದ್ದಲ್ಲದೇ, ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

premalu movie  rajamouli praises  heroine mamitha baiju  Rajamouli Premalu Movie Heroine
ಪ್ರೇಮಲು ಚಿತ್ರದ ಹಿರೋಯಿನ್ ಅ್ಯಕ್ಟಿಂಗ್​ಗೆ ಫಿದಾ ಆದ ರಾಜಮೌಳಿ

ಹೈದರಾಬಾದ್​: ನಿರ್ದೇಶಕ ರಾಜಮೌಳಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳು ಇದ್ದಾರೆಯೇ.. ಇಲ್ಲಿಯವರೆಗೆ ಅವರು ನಿರ್ದೇಶಿಸಿದ ಪ್ರತಿಯೊಂದು ಚಲನಚಿತ್ರಗಳೂ ಬಾಕ್ಸ್ ಆಫೀಸ್​ನಲ್ಲಿ ಸೂಪರ್​​ ಹಿಟ್ ಆಗಿವೆ. ಅವರು ತೆಗೆದುಕೊಳ್ಳುವ ಪ್ರತಿಯೊಂದು ಚಿತ್ರವೂ ಭಾವನಾತ್ಮಕ ಮತ್ತು ಆಕ್ಷನ್ ಪರಿಪೂರ್ಣವಾಗಿರಬೇಕು. ಆದರೆ ಜಕ್ಕಣ್ಣ ಅವರಿಗೆ ಸಾಮಾನ್ಯವಾಗಿ ಆ್ಯಕ್ಷನ್ ಸಿನಿಮಾಗಳು ಇಷ್ಟವಾಗಿದ್ದು, ಇತ್ತೀಚೆಗೆ ಲವ್ ಸ್ಟೋರಿ ಸಿನಿಮಾವೊಂದು ಅವರಿಗೆ ಇಷ್ಟವಾಗಿದೆಯಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ, ಅದರಲ್ಲಿನ ನಾಯಕಿಯನ್ನು ನೋಡಿ ಫಿದಾ ಆಗಿದ್ದಾರಂತೆ ಜಕಣ್ಣ.

ಇತ್ತೀಚೆಗೆ, 'ಪ್ರೇಮಲು' ಚಿತ್ರದ ತೆಲುಗು ಆವೃತ್ತಿಯ ಯಶಸ್ಸಿನ ಕಾರ್ಯಕ್ರಮಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಚಿತ್ರದಲ್ಲಿ ಮ್ಯಾಥ್ಯೂ ಥಾಮಸ್, ನಸ್ಲೇನ್ ಕೆ. ಕಪೂರ್ ಮತ್ತು ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಗಿರೀಶ್ ಎ.ಡಿ. ನಿರ್ದೇಶಿಸಿದ್ದಾರೆ. ಮಲಯಾಳಂನಲ್ಲಿ ಭರ್ಜರಿ ಹಿಟ್ ಆಗಿದ್ದ ಚಿತ್ರವನ್ನು ತೆಲುಗಿನಲ್ಲಿ ರಾಜಮೌಳಿ ಅವರ ಪುತ್ರ ಕಾರ್ತಿಕೇಯ ವಿತರಿಸಿದ್ದಾರೆ. ಇಲ್ಲಿಯೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಯಿತು. ಜಕ್ಕಣ್ಣ ಜೊತೆಗೆ ನಿರ್ದೇಶಕರಾದ ಅನಿಲ್ ರಾವಿಪುಡಿ, ಅನುದೀಪ್ ಕೆ.ವಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತಿತರರು ಭಾಗವಹಿಸಿದ್ದರು.

  • " class="align-text-top noRightClick twitterSection" data="">

ಈ ಸಂದರ್ಭದಲ್ಲಿ ರಾಜಮೌಳಿ ಮಾತನಾಡಿ, ''ಕೀರವಾಣಿ ಅಣ್ಣಯ್ಯ ನೀಲಗಿರಿ ಚಿತ್ರದಲ್ಲಿ ಕೆಲಸ ಮಾಡುವಾಗ ಮಲೆಯಾಳಂ ಪದ ಎಂಡಮಾಶೆಗೆ ಅರ್ಥ ಕಲಿತೆ. ಶಾಂತಿನಿವಾಸಂ ಧಾರಾವಾಹಿ ನಿರ್ದೇಶನ ಮಾಡುವಾಗ ಬರಹಗಾರ ಪೃಥ್ವಿತೇಜ ಅವರನ್ನು ಮಾಷೆ ಎಂದು ಕರೆಯುತ್ತಿದ್ದೆ. ಸ್ವಲ್ಪ ದಿನಗಳ ನಂತರ ಮಾಷೆ ಎಂದ್ರೇನು ಅಂತಾ ಪೃಥ್ವಿತೇಜ ನನ್ನನ್ನು ಕೇಳಿದರು. ಮಾಷೆ ಎಂದರೆ ಬಾಸ್ ಎಂದು ನಾನು ಅವರಿಗೆ ಹೇಳಿದೆ. ಆಗ ಆತ ನಕ್ಕ. ಹೀಗೆ ನನಗೆ ಮಲಯಾಳಂ ಜೊತೆ ಪರಿಚಯವಾಯಿತು'' ಎಂದು ಹೇಳಿದರು.

''ನನ್ನ ಸಹೋದರಿಯರು ಕೇರಳದ ಇಬ್ಬರನ್ನು ಮದುವೆಯಾಗಿದ್ದಾರೆ. ನನಗೆ ಪ್ರೇಮ ಕಥೆಗಳು ಮತ್ತು ಚಲನಚಿತ್ರಗಳಲ್ಲಿ ರೊಮ್ಯಾಂಟಿಕ್ ಕಾಮಿಡಿಗಳು ಇಷ್ಟವಿಲ್ಲ. ನನಗೆ ಆಕ್ಷನ್ ಮತ್ತು ಫೈಟ್‌ಗಳು ಇಷ್ಟ. ಇಲ್ಲಿ ಪ್ರೇಮಲು ಸಿನಿಮಾವನ್ನು ಕಾರ್ತಿಕೇಯ ರಿಲೀಸ್ ಮಾಡಿದಾಗಲೂ ಅಷ್ಟೊಂದು ಆಸಕ್ತಿ ತೋರಲಿಲ್ಲ. ಆಸಕ್ತಿ ಇಲ್ಲದೆ ಥಿಯೇಟರ್​ಗೆ ಹೋಗಿ ಸಿನಿಮಾ ನೋಡಿದೆ. ಸಿನಿಮಾ ನೋಡಿ ನಗುತ್ತಲೇ ಇದ್ದೆ. ಈ ಸಿನಿಮಾ ಥಿಯೇಟರ್​ನಲ್ಲಿ ನೋಡಬೇಕು. ಅಸೂಯೆ ಮತ್ತು ನೋವಿನಿಂದ ಹೇಳುತ್ತಿದ್ದೇನೆ. ಎಲ್ಲಾ ಮಲಯಾಳಿ ನಟರು ಚೆನ್ನಾಗಿ ನಟಿಸಿದ್ದಾರೆ. ಗಿರಿಜಾ (ಗೀತಾಂಜಲಿ ಖ್ಯಾತಿ) ಮತ್ತು ಸಾಯಿ ಪಲ್ಲವಿ ತರಹ ಈ ಚಿತ್ರದ ನಾಯಕಿ ಮಮಿತಾ ಕೂಡ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಇತ್ತೀಚೆಗಷ್ಟೇ ಮಮಿತಾ ಪಾತ್ರವನ್ನು ಜಕಣ್ಣ ಹೊಗಳಿದ್ದರು'' ಎಂದರು.

ಓದಿ: ಸೂಪರ್ ಹಿಟ್ 'ದೇವಿ' ಚಿತ್ರಕ್ಕೆ 25 ವರ್ಷ: ಶೂಟಿಂಗ್ ವೇಳೆ ಹಾವು ಕಡಿತ ನೆನೆದ ಪ್ರೇಮಾ

Last Updated : Mar 13, 2024, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.