ETV Bharat / entertainment

ಕಲ್ಕಿ 2898 AD ಟೀಸರ್ ಅನಾವರಣ: ಬಿಗ್ ಬಿ ಅಮಿತಾಬ್ ಬಚ್ಚನ್ ಅಶ್ವತ್ಥಾಮ ಲುಕ್​ಗೆ ಸಿನಿ ರಸಿಕರು ಫಿದಾ - Kalki 2898 AD Teaser

author img

By ETV Bharat Karnataka Team

Published : Apr 22, 2024, 7:39 AM IST

ಪ್ರಭಾಸ್ ಅಭಿನಯದ ಕಲ್ಕಿ 2898 AD ನಿರ್ಮಾಪಕರು, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನು ಅಮರ ಅಶ್ವತ್ಥಾಮ ಎಂದು ಪರಿಚಯಿಸುವ ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಅಶ್ವತ್ಥಾಮ ಲುಕ್​ಗೆ ಸಿನಿ ರಸಿಕರು ಫಿದಾ ಆಗಿದ್ದಾರೆ.

KALKI 2898 AD TEASER  AMITABH BACHCHAN AS ASHWATTHAMA  PRABHAS  KALKI 2898 AD
ಕಲ್ಕಿ 2898 AD ಟೀಸರ್ ಅನಾವರಣ: ಬಿಗ್ ಬಿ ಅಮಿತಾಬ್ ಬಚ್ಚನ್ ಅಶ್ವತ್ಥಾಮ ಲುಕ್​ಗೆ ಸಿನಿ ರಸಿಕರು ಫಿದಾ

ಹೈದರಾಬಾದ್: ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿದಂತೆ ತಾರಾ ಬಳಗ ಇದೆ. ಕಲ್ಕಿ 2898 AD ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರ ಪಾತ್ರವನ್ನು ತಿಳಿಸುವ ಟೀಸರ್​ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಪಾತ್ರವನ್ನು ಗಮನಿಸಿದರೆ, ವರ್ಷದ ಅತ್ಯಂತ ದೊಡ್ಡ ಭಾರತೀಯ ಚಲನಚಿತ್ರ ಎನ್ನುವ ನಿರೀಕ್ಷೆ ಮತ್ತಷ್ಟು ದೃಢವಾಗಿದೆ.

  • " class="align-text-top noRightClick twitterSection" data="">

ಟೀಸರ್‌ನಲ್ಲಿ, ಅಮರ ಅಶ್ವತ್ಥಾಮನನ್ನು ಚಿತ್ರಿಸುವ ಅಮಿತಾಬ್​ ಬಚ್ಚನ್ ಅವರಿಗೆ, ''ನೀನು ಯಾರು?, ನಿನಗೆ ಮರಣವಿಲ್ಲವೇ? ನೀನು ದೇವರೇ?'' ಎಂದು ಮಗುವೊಂದು ಪ್ರಶ್ನೆ ಕೇಳುತ್ತದೆ. "ನಾನು ದ್ವಾಪರಯುಗದವನು, ನಾನು ದ್ರೋಣನ ಮಗ ಅಶ್ವತ್ಥಾಮ!" ಎಂದು ಬಿಗ್​ ಬಿ ಉತ್ತರಿಸಿದ್ದಾರೆ. ಕಲ್ಕಿ 2898 AD ಚಿತ್ರದ ಟೀಸರ್​ ಮೂಲಕ ನಿರ್ಮಾಪಕರು ಬಿಗ್​ ಅಪ್​ಡೇಟ್​ ನೀಡಿದ್ದಾರೆ.

ವಿಶೇಷ ವಿಡಿಯೋ ಮೂಲಕ ರಿವೀಲ್ ಆಗಿರುವ ಈ ಲುಕ್ ಸದ್ಯ ಟ್ರೆಂಡ್ ಆಗುತ್ತಿದೆ. ಆದರೆ, ಇದರಲ್ಲಿ ಅವರು ಎರಡು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಅವರ ಯಂಗ್ ಲುಕ್ ನೆಟ್ಟಿಗರನ್ನು ಆಕರ್ಷಿಸಿದೆ. ಡಿ - ಏಜಿಂಗ್ ತಂತ್ರಜ್ಞಾನದೊಂದಿಗೆ ತಯಾರಕರು ಈ ಲುಕ್ ಮಾಡಿದ್ದಾರೆ ಎಂದು ತೋರುತ್ತದೆ.

ಗ್ಲಿಂಪ್ಸಸ್ ನೋಡಿದ ಅಭಿಮಾನಿಗಳು ಸೂಪರ್, ಗೂಸ್‌ಬಂಪ್ಸ್ ಗ್ಯಾರಂಟಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಅಶ್ವತ್ಥಾಮನ ಯಂಗ್ ಲುಕ್ ನೋಡಿ ಅಭಿಷೇಕ್ ಬಚ್ಚನ್ ನಂತೆ ಕಾಣುತ್ತಿದ್ದಾರೆ ಎನ್ನುತ್ತಾರೆ.

ಕಲ್ಕಿ 2898 AD ಚಿತ್ರ ಬಿಡುಗಡೆಗೆ ಚರ್ಚೆ: ಆದರೆ, ಕಲ್ಕಿ ನಿರ್ಮಾಪಕರು ಇತ್ತೀಚೆಗೆ ವಿತರಕರನ್ನು ಭೇಟಿ ಮಾಡಿದರು. ಈ ಸಭೆಯಲ್ಲಿ ಚಿತ್ರದ ಬಿಡುಗಡೆ ಕುರಿತು ಪ್ರಮುಖವಾಗಿ ಚರ್ಚೆ ನಡೆದಿದೆಯಂತೆ. ಇದರೊಂದಿಗೆ ಚಿತ್ರತಂಡ ಬಿಡುಗಡೆ ದಿನಾಂಕದ ನಿರ್ಧಾರ ಕೈಗೊಂಡಿದೆಯಂತೆ. ಆದರೆ, ಹೊಸದಾಗಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಹಿರಂಗಪಡಿಸಿಲ್ಲ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಕಲ್ಕಿ 2898 AD ಸಿನಿಮಾದ ತಾರಾಬಳಗ: ಈಗ ಕಲ್ಕಿ ಚಿತ್ರದ ವಿಷಯವನ್ನು ಪೌರಾಣಿಕ ವೈಜ್ಞಾನಿಕ ಕಾಲ್ಪನಿಕ ರೀತಿಯಲ್ಲಿ ನಾಗ ಅಶ್ವಿನ್ ನಿರ್ದೇಶಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಗ್ಲಿಂಪ್‌ಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ಬಿಗ್ ಬಿ ಅಮಿತಾಬ್ ಬಚ್ಚನ್, ರಾಜೇಂದ್ರ ಪ್ರಸಾದ್, ಪಶುಪತಿ ಮುಂತಾದವರು ಈ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ತೆಲುಗು ನಟ, ರಾಜಕಾರಣಿ ಬಾಲಕೃಷ್ಣ ಅವರ ಆಸ್ತಿ ಎಷ್ಟು ಗೊತ್ತಾ?; ನಟನಗಿಂತ ಅವರ ಪತ್ನಿಯೇ ಹೆಚ್ಚು ಸಿರಿವಂತೆ - Balakrishna has family assets

ETV Bharat Logo

Copyright © 2024 Ushodaya Enterprises Pvt. Ltd., All Rights Reserved.