ETV Bharat / entertainment

'ಆರ್​ಸಿ 16' ಮುಹೂರ್ತ: ರಾಮ್ ಚರಣ್ ಜೊತೆ ಜಾಹ್ನವಿ- ವಿಡಿಯೋ ನೋಡಿ

author img

By ETV Bharat Karnataka Team

Published : Mar 20, 2024, 2:23 PM IST

ಬಹುನಿರೀಕ್ಷಿತ ಸಿನಿಮಾ 'ಆರ್​ಸಿ16'ರ ಪೂಜಾ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ.

RC16
ಆರ್​ಸಿ 16

'ಆರ್​ಆರ್​ಆರ್'​ ಖ್ಯಾತಿಯ ನಟ ರಾಮ್​ ಚರಣ್​ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಆರ್​ಸಿ16'. ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾದ ಲಾಂಚ್​ ಈವೆಂಟ್​​ ಇಂದು ಜರುಗಿದೆ. ಪೂಜಾ ಸಮಾರಂಭದಲ್ಲಿ ಜಾಹ್ನವಿ ಕಪೂರ್ ಹಾಗೂ ಮತ್ತು ರಾಮ್ ಚರಣ್​ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋಗಳು ಆನ್​ಲೈನ್​ನಲ್ಲಿ ವೈರಲ್​ ಆಗಿವೆ. ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗಲಿರುವ ಈ ಚಿತ್ರದ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಆರ್​ಸಿ16' ಎಂಬುದು ತಾತ್ಕಾಲಿಕ ಶೀರ್ಷಿಕೆ.

ಪೂಜಾ ಸಮಾರಂಭದಲ್ಲಿ ಸಂಪೂರ್ಣ ಚಿತ್ರತಂಡದ ಭಾಗಿಯಾಗಿತ್ತು. ಚಿತ್ರದ ಗ್ರ್ಯಾಂಡ್ ಲಾಂಚ್‌ ಈವೆಂಟ್​​ಗೆ, ಜಾಹ್ನವಿ ಹಸಿರು ಬಣ್ಣದ ಸೀರೆ ಧರಿಸಿದ್ದರೆ, ರಾಮ್ ಚರಣ್​​ ಬಿಳಿ ಶರ್ಟ್‌ನಲ್ಲಿ ಕಾಣಿಸಿಕೊಂಡರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರವನ್ನು ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಪ್ರಸ್ತುತಪಡಿಸಲಿದೆ. ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಖ್ಯಾತ ಗಾಯಕ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.

ಇದಕ್ಕೂ ಮುನ್ನ ಜಾಹ್ನವಿ, ತಂದೆ ಬೋನಿ ಕಪೂರ್ ಜೊತೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬ್ಲ್ಯೂ ಜೀನ್ಸ್‌, ವೈಟ್​ ಶರ್ಟ್, ಲಾಂಗ್​ ಕೋಟ್‌ ಧರಿಸುವ ಮೂಲಕ ತಮ್ಮ ಏರ್​ಪೋರ್ಟ್ ಲುಕ್​ ಪೂರ್ಣಗೊಳಿಸಿಕೊಂಡಿದ್ದರು. ನಟಿಯ ಏರ್​ಪೋರ್ಟ್ ವಿಡಿಯೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: ಒಂದೇ ಈವೆಂಟ್​ನಲ್ಲಿ ಸಮಂತಾ, ನಾಗ ಚೈತನ್ಯ, ಶೋಭಿತಾ ಧೂಳಿಪಾಲ - ಫೋಟೋಗಳಿಲ್ಲಿವೆ

ಆರ್​ಆರ್​ಆರ್​ ಬಳಿಕ ಬಿಡುಗಡೆ ಆಗುತ್ತಿರುವ ರಾಮ್ ಚರಣ್ ಅವರ ಬಹುನಿರೀಕ್ಷಿತ ಚಿತ್ರ ಗೇಮ್​ ಚೇಂಜರ್​. ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಇತ್ತೀಚೆಗಷ್ಟೇ ಶೂಟಿಂಗ್​ ಲೊಕೇಶನ್‌ನಿಂದ ಫೋಟೋ, ವಿಡಿಯೋಗಳು ವೈರಲ್​ ಆಗಿ ಸಖತ್​ ಸದ್ದು ಮಾಡಿದ್ದವು. ಶಂಕರ್ ನಿರ್ದೇಶನದ ಆ್ಯಕ್ಷನ್​ ಸಿನಿಮಾ ಶೀಘ್ರ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಚಿತ್ರದಲ್ಲಿ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರವನ್ನು ಪೊಲಿಟಿಕಲ್​ ಆ್ಯಕ್ಷನ್ ಡ್ರಾಮಾ ಎಂದು ಬಿಂಬಿಸಲಾಗಿದೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಪುಷ್ಪ 2​​ ಸೆಟ್​​ನಿಂದ ರಶ್ಮಿಕಾ ಮಂದಣ್ಣ ಲುಕ್​​ ವೈರಲ್: ಮಧುಮಗಳಂತೆ ಕಾಣಿಸಿಕೊಂಡ ನಟಿ

ಮತ್ತೊಂದೆಡೆ, ಜಾಹ್ನವಿ ಕಪೂರ್​​ ಜೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಜೊತೆ 'ದೇವರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ದೇವರ' ಬಾಲಿವುಡ್​ ಬೆಡಗಿಯ ಚೊಚ್ಚಲ ತೆಲುಗು ಚಿತ್ರ. 'ಆರ್​ಸಿ 16' ತೆಲುಗಿನ ಎರಡನೇ ಸಿನಿಮಾ. ಆರ್​ಆರ್​ಆರ್​ ಮೂಲಕ ವಿಶ್ವಾದ್ಯಂತ ಜನಪ್ರಿಯರಾಗಿರುವ ಜೂನಿಯರ್ ಎನ್‌ಟಿಆರ್ ಮತ್ತು ರಾಮ್​ ಚರಣ್​ ಜೊತೆ ಜಾಹ್ನವಿ ತೆಲುಗು ಸಿನಿಪಯಣ ಆರಂಭಿಸುತ್ತಿರುವುದು ಗಮನಾರ್ಹ ವಿಚಾರ. ಕೊರಟಾಲ ಶಿವ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರ ಇದೇ ಅಕ್ಟೋಬರ್‌ನಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಅಲ್ಲದೇ, ನಟಿ ಬಳಿ ಉಲಜ್ಹ್ ಪ್ರೊಜೆಕ್ಟ್​ ಕೂಡ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.