ETV Bharat / entertainment

'ಮಂಜುಮ್ಮೆಲ್ ಬಾಯ್ಸ್'ಗೆ ಇಳಯರಾಜ ಕಾಪಿರೈಟ್​​ ನೋಟಿಸ್​: ಕಾರಣ? - Manjummel Boys

author img

By ETV Bharat Karnataka Team

Published : May 23, 2024, 11:28 AM IST

ತಮ್ಮ ಅನುಮತಿ ಪಡೆಯದೇ ತಮಿಳಿನ 'ಗುಣ' ಚಿತ್ರದ 'ಕಣ್ಮಣಿ ಅನ್ಬೋದು ಕಾದಲನ್' ಹಾಡನ್ನು ಬಳಸಲಾಗಿದೆ ಎಂದು ಆರೋಪಿಸಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು 'ಮಂಜುಮ್ಮೆಲ್ ಬಾಯ್ಸ್' ಚಿತ್ರತಂಡಕ್ಕೆ ಕಾಪಿರೈಟ್​​ ನೋಟಿಸ್​ ಕಳುಹಿಸಿದ್ದಾರೆ.

Ilaiyaraaja, Manjummel Boys Poster
ಇಳಯರಾಜ, ಮಂಜುಮ್ಮೆಲ್ ಬಾಯ್ಸ್ ಪೋಸ್ಟರ್ (ANI)

ಸೌಬಿನ್ ಶಾಹಿರ್ ಮತ್ತು ಶ್ರೀನಾಥ್ ಭಾಸಿ ಅಭಿನಯದ ಮಲಯಾಳಂ ಸರ್ವೈವಲ್ ಥ್ರಿಲ್ಲರ್ 'ಮಂಜುಮ್ಮೆಲ್ ಬಾಯ್ಸ್' (Manjummel Boys) ಸಾಕಷ್ಟು ಸದ್ದು ಮಾಡಿದೆ. ಫೆಬ್ರವರಿ 22ರಂದು ತೆರೆಕಂಡಿರುವ ಈ ಚಿತ್ರ ಸಿನಿಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶ ಕಂಡಿದೆ. ಆದರೆ ಇದೀಗ ಚಿತ್ರತಂಡ ಕಾನೂನು ಅಡೆತಡೆಯಲ್ಲಿ ಸಿಲುಕಿದೆ.

ಖ್ಯಾತ ಸಂಗೀತ ನಿರ್ದೇಶಕ ಆರ್.ಇಳಯರಾಜ ಅವರು ಮಂಜುಮ್ಮೆಲ್ ಬಾಯ್ಸ್‌ಗೆ ಲೀಗಲ್​ ನೋಟಿಸ್ ಕಳುಹಿಸಿದ್ದಾರೆ. ತಮ್ಮ ಅನುಮತಿ ಪಡೆಯದೇ ತಮಿಳಿನ 'ಗುಣ' ಚಿತ್ರದ 'ಕಣ್ಮಣಿ ಅನ್ಬೋದು ಕಾದಲನ್' ಹಾಡನ್ನು 'ಕಾನೂನು ಬಾಹಿರವಾಗಿ ಬಳಕೆ' ಮಾಡಿಕೊಂಡಿರುವುದಾಗಿ ಅವರು ಆರೋಪಿಸಿದ್ದಾರೆ.

ಮಂಜುಮ್ಮೆಲ್ ಬಾಯ್ಸ್ 11 ಸ್ನೇಹಿತರ ಗುಂಪಿನ ಕಥೆ ಒಳಗೊಂಡಿದೆ. ಕೊಡೈಕ್ಕೆನಾಲ್​​ ಪ್ರವಾಸ ಕೈಗೊಂಡು ದಟ್ಟಾರಣ್ಯದಲ್ಲಿ ಸಿಲುಕಿ ಬದುಕುಳಿಯುವ ಥ್ರಿಲ್ಲರ್ ಮೂವಿ ಇದು. ಸೌತ್​ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ 1991ರ ಗುಣ ಸಿನಿಮಾದ ನಂತರ, ಮತ್ತೊಮ್ಮೆ ಹೆಸರಿಸಲಾಗಿರುವ ಗುಣ ಗುಹೆಯೊಳಗಿನ ಪ್ರಪಾತಕ್ಕೆ ಸ್ನೇಹಿತನೋರ್ವ ಆಯತಪ್ಪಿ ಬಿದ್ದಾಗ ಈ ಸಿನಿಮಾ ಕಠೋರ ತಿರುವು ಪಡೆಯುತ್ತದೆ. ಇತರರು ತಮ್ಮ ಸ್ನೇಹಿತನನ್ನು ಉಳಿಸಿಕೊಳ್ಳಲು ಎಲ್ಲಾ ಅಡೆತಡೆಗಳ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬುದೇ ಕಥೆ.

ಚಿತ್ರದುದ್ದಕ್ಕೂ ನಟರು ಕಮಲ್ ಹಾಸನ್ ಅವರ ಚಿತ್ರದ ಬಗ್ಗೆ ಅನೇಕ ಉಲ್ಲೇಖಗಳನ್ನು ಮಾಡುತ್ತಾರೆ. ಇದು ಗುಹೆ ನೋಡಬೇಕೆನ್ನುವ ಅವರ ಕುತೂಹಲವನ್ನು ಮತ್ತಷ್ಟು ಕೆರಳಿಸುತ್ತದೆ. ಅಲ್ಲದೇ, 1991ರ ಗುಣ ಚಿತ್ರದ ಕಣ್ಮಣಿ ಅನ್ಬೋದು ಕಾದಲನ್​​ ಹಾಡನ್ನು ಚಿತ್ರದ ಒಂದು ಪ್ರಮುಖ ದೃಶ್ಯದಲ್ಲಿ ಬಳಸಲಾಗಿದೆ. ಪರಿಣಾಮ, ಇದೀಗ ಇಳಯರಾಜ ಚಿತ್ರತಂಡಕ್ಕೆ ಕಾಪಿರೈಟ್​ ನೋಟಿಸ್ ಕಳುಹಿಸಿದ್ದಾರೆ. ತಮ್ಮ ಒಪ್ಪಿಗೆ ಪಡೆಯದೇ ಈ ಹಾಡನ್ನು ಬಳಸಲಾಗಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್​ ಆರೋಗ್ಯದಲ್ಲಿ ಚೇತರಿಕೆ, ಭಾನುವಾರ ಫೀಲ್ಡ್​​ಗೆ: ಜೂಹಿ ಚಾವ್ಲಾ - Shah Rukh Khan Health

2018ರ ರೊಮ್ಯಾಂಟಿಕ್ ಚಿತ್ರ '96' ಗೆ ಹೆಸರುವಾಸಿಯಾದ ನಿರ್ದೇಶಕ ಪ್ರೇಮ್ ಕುಮಾರ್ ವಿರುದ್ಧ ಯೂಟ್ಯೂಬ್ ಪತ್ರಕರ್ತರೋರ್ವರು ಇದೇ ರೀತಿಯ ಆರೋಪವನ್ನು ಈ ವರ್ಷದ ಮಾರ್ಚ್‌ನಲ್ಲಿ ಮಾಡಿದ್ದರು. 96 ಮತ್ತು ಮಂಜುಮ್ಮೆಲ್ ಬಾಯ್ಸ್ ತಮ್ಮ ತಮ್ಮ ಚಿತ್ರಗಳಲ್ಲಿ ಇಳಯರಾಜ ಅವರ ಹಾಡುಗಳನ್ನು ಬಳಸಲು ಅನುಮತಿ ಪಡೆದಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ: 'ದಿ ಜಡ್ಜ್‌ಮೆಂಟ್​' ಸಿನಿಮಾ ಒಪ್ಪಿಕೊಳ್ಳಲು ರವಿಚಂದ್ರನ್ ಕೂಡಾ ಕಾರಣ:‌‌ ಮೇಘನಾ ಗಾಂವ್ಕರ್ - Meghana Gaonkar

ಆದಾಗ್ಯೂ, ಪ್ರೇಮ್ ಕುಮಾರ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಎರಡೂ ಚಿತ್ರಗಳ ರಚನೆಕಾರರು ಇಳಯರಾಜರ ಹಾಡುಗಳನ್ನು ಬಳಸಲು ಥಿಂಕ್ ಮ್ಯೂಸಿಕ್ ಮತ್ತು ಇತರೆ ರೆಕಾರ್ಡ್ ಸಂಸ್ಥೆಗಳ ಮೂಲಕ ಒಪ್ಪಿಗೆ ಪಡೆದಿದ್ದಾರೆ ಎಂದು ಸ್ಟಷ್ಟಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.