ETV Bharat / entertainment

ಸೂಪರ್ ಹಿಟ್ 'ಬಾಹುಬಲಿ' ಪ್ರಮೋಶನ್​ಗೆ ಖರ್ಚಾಗಿದ್ದೆಷ್ಟು ಗೊತ್ತಾ? - Baahubali

author img

By ETV Bharat Karnataka Team

Published : May 8, 2024, 7:46 PM IST

ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ್ದ 'ಬಾಹುಬಲಿ' ಚಿತ್ರ ಪ್ರಚಾರಕ್ಕೆ ಎಷ್ಟು ಖರ್ಚಾಯಿತು ಎಂಬುದನ್ನು ಸ್ವತಃ ನಿರ್ದೇಶಕ ಎಸ್​.ಎಸ್​​ ರಾಜಮೌಳಿ ಅವರೇ ಬಹಿರಂಗಪಡಿಸಿದ್ದಾರೆ.

S.S. Rajamouli
ನಿರ್ದೇಶಕ ಎಸ್​.ಎಸ್​​ ರಾಜಮೌಳಿ (Source: Getty Images)

ಖ್ಯಾತ ನಿರ್ದೇಶಕ ಎಸ್​.ಎಸ್​​ ರಾಜಮೌಳಿ ಅವರ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಪ್ರತಿ ಸಿನಿಮಾ ಕೂಡ ವಿಭಿನ್ನವಾಗಿ, ಹೊಸತನದಿಂದ ಮೂಡಿಬರುತ್ತವೆ. ಸಿನಿಮಾವನ್ನು ಎಷ್ಟು ಪರಿಪೂರ್ಣವಾಗಿ ಮಾಡುತ್ತಾರೋ, ಅದೇ ಹಾದಿಯಲ್ಲಿ ಪ್ರಚಾರವನ್ನೂ ಮಾಡುತ್ತಾರೆ. ಸಿನಿಮಾಗೆ ಪ್ರಮೋಶನ್​ ಎಷ್ಟು ಮುಖ್ಯ ಅನ್ನೋದು ನಿಮಗೆ ತಿಳಿದಿರುವ ವಿಚಾರವೇ. ಟ್ರೇಲರ್‌ನಿಂದ ಹಿಡಿದು ಪ್ರೀ ರಿಲೀಸ್ ಈವೆಂಟ್​ವರೆಗೂ ಜಕ್ಕಣ್ಣ ಅವರ ಪ್ರಚಾರ ತಂತ್ರ ಹೊಸತನದಿಂದ ಕೂಡಿರುತ್ತದೆ. ಹಾಗಾಗಿಯೇ ಅವರ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತವೆ.

ಕೊನೆಯದಾಗಿ ಬಿಡುಗಡೆಯಾಗಿ ವಿಶ್ವಮಟ್ಟದಲ್ಲಿ ಸದ್ದು ಮಾಡಿದ 'ಆರ್​​ಆರ್​ಆರ್​' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರ ಮಾಡಿದ್ದಾರೆ ಎಂಬುದು ನಿಮಗೆ ತಿಳಿದೇ ಇದೆ. ಚಿತ್ರತಂಡದ ಜೊತೆಗೆ ಹಲವು ಸಂದರ್ಶನ, ಪ್ರೆಸ್​ ಮೀಟ್​​​​ನಲ್ಲಿ ಮಾತನಾಡಿ, ಸಿನಿಮಾವನ್ನು ಒಂದೊಳ್ಳೆ ರೇಂಜ್​ಗೆ ಪ್ರಮೋಟ್ ಮಾಡಿದ್ದರು. ಚಿತ್ರದ ಯಶಸ್ಸಿನ ನಂತರವೂ ಆಸ್ಕರ್ ಪ್ರಶಸ್ತಿವರೆಗೂ ದೊಡ್ಡ ಮಟ್ಟದಲ್ಲಿ ಪ್ರಚಾರಗಳು ನಡೆದವು. ಇದಕ್ಕೆ ಸರಿಸುಮಾರು 5 ಕೋಟಿ ರೂ.ವರೆಗೂ ಖರ್ಚಾಗಿದೆ ಎಂಬುದು ಚಿತ್ರರಂಗದ ಮಾತು. ಆದರೆ 'ಬಾಹುಬಲಿ' ಚಿತ್ರಕ್ಕೆ ಅವರು ಖರ್ಚು ಮಾಡಿದ ಹಣವೆಷ್ಟು ಎಂದು ತಿಳಿದರೆ ಶಾಕ್ ಆಗುತ್ತೀರಿ. ಆ ಚಿತ್ರಕ್ಕೆ ಅವರು ಒಂದೇ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಕೇವಲ ಬಾಯಿಮಾತಿನಿಂದಲೇ ಚಿತ್ರಕ್ಕೆ ಭಾರಿ ಕ್ರೇಜ್ ಸಿಕ್ಕಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ರಾಜಮೌಳಿ ಅವರೇ ಬಹಿರಂಗಪಡಿಸಿದ್ದಾರೆ.

"ನಾನು ನನ್ನ ಚಿತ್ರಗಳಿಂದ ಹೆಚ್ಚು ಅಥವಾ ಕಡಿಮೆ ನಿರೀಕ್ಷಿಸುವುದಿಲ್ಲ. ನಾನು ಯಾವಾಗಲೂ ಸಮತೋಲನದಿಂದ ಇರಲು ಪ್ರಯತ್ನಿಸುತ್ತೇನೆ. ನನ್ನ ಚಿತ್ರಗಳಿಗೆ ಹೊಸ ಪ್ರೇಕ್ಷಕರನ್ನು ಆಕರ್ಷಿಸುವ ಆಲೋಚನೆ ಯಾವಾಗಲೂ ನನ್ನ ಮನಸ್ಸಿನಲ್ಲಿದೆ. ನಮ್ಮ ತಂಡ ಬಾಹುಬಲಿ ಪ್ರಚಾರಕ್ಕಾಗಿ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ನಾವು ಯಾವುದೇ ಆನ್‌ಲೈನ್ ಸೈಟ್‌ಗಳಿಗೆ ಹಣ ನೀಡಿಲ್ಲ. ಆದರೆ ನಾವು ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದೆವು'' ಎಂದು ತಿಳಿಸಿದರು.

ಇದನ್ನೂ ಓದಿ: 'ಮಿಸ್ಟರ್ ಅಂಡ್​​ ಮಿಸಸ್ ಮಾಹಿ': ಜಾಹ್ನವಿ, ರಾಜ್​ಕುಮಾರ್​​ ರಾವ್ ಸಿನಿಮಾದ ಪೋಸ್ಟರ್ ರಿಲೀಸ್ - Mr and Mrs Mahi

ರಾಜಮೌಳಿ ಸದ್ಯ 'ಎಸ್​ಎಸ್​​ಎಂಬಿ 29' ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ನಾಯಕ ಮಹೇಶ್ ಬಾಬು ಜೊತೆ ಲುಕ್ ಟೆಸ್ಟ್‌ಗಾಗಿ ಲಂಡನ್‌ಗೆ ತೆರಳಿದ್ದರು. ಸದ್ಯದಲ್ಲೇ ಈ ಸಿನಿಮಾದ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: 'ಸಲಾರ್ 2' ಶೂಟಿಂಗ್​ನಲ್ಲಿ ಪ್ರಶಾಂತ್​​ ನೀಲ್​: ಜೂ. ಎನ್‌ಟಿಆರ್ ಜೊತೆಗಿನ ಚಿತ್ರ ಸೆಟ್ಟೇರೋದು ಯಾವಾಗ? - PRASHANTH NEEL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.