ಪುನೀತ್ ಹುಟ್ಟುಹಬ್ಬಕ್ಕೆ "ಗೌರಿ" ಚಿತ್ರದ ವಿಶೇಷ ಗೀತೆ ಬಿಡುಗಡೆ

author img

By ETV Bharat Karnataka Team

Published : Feb 24, 2024, 7:16 PM IST

ಸಾನ್ಯಾ ಅಯ್ಯರ್ ಮತ್ತು ಸಮರ್ಜಿತ್ ಲಂಕೇಶ್

ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅಭಿನಯದ "ಗೌರಿ" ಚಿತ್ರದ ವಿಶೇಷ ಗೀತೆಯೊಂದು ಬಿಡುಗಡೆಯಾಗಲಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ನಿಮಿತ್ತ ಯುವ ನಟ ಸಮರ್ಜಿತ್ ಲಂಕೇಶ್ ಅಭಿನಯದ "ಗೌರಿ" ಚಿತ್ರದ ವಿಶೇಷ ಗೀತೆಯೊಂದು ಬಿಡುಗಡೆಯಾಗಲಿದೆ. "ಗೌರಿ" ಚಿತ್ರವು ಸಮರ್ಜಿತ್ ಅವರ ಮೊದಲ ಕಾಣಿಕೆಯಾಗಿದ್ದು, ಕನ್ನಡದ ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಅವರ ಪುತ್ರ.

gowri movie special song will be released soon
ಸಾನ್ಯಾ ಅಯ್ಯರ್ ಮತ್ತು ಸಮರ್ಜಿತ್ ಲಂಕೇಶ್

ತಮ್ಮದೇ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಿಂದ ಮಾ. 17ರಂದು ಪುನೀತ್ ಅವರ ಹುಟ್ಟುಹಬ್ಬ ನಿಮಿತ್ತ ವಿಶೇಷ ಗೀತೆಯೊಂದನ್ನು ಬಿಡುಗಡೆ ಮಾಡಲಿದ್ದಾರೆ. ಈ ವಿಶೇಷ ಗೀತೆಗೆ ಸಮರ್ಜಿತ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

gowri movie special song will be released soon
ಸಾನ್ಯಾ ಅಯ್ಯರ್ ಮತ್ತು ಸಮರ್ಜಿತ್ ಲಂಕೇಶ್

ಈ ಹಾಡಿನ ಬಗ್ಗೆ ಮಾತನಾಡಿದ ಸಮರ್ಜಿತ್, ನಾನು ಅಪ್ಪು ಅವರ ಅಭಿಮಾನಿ. ಅವರ ಡ್ಯಾನ್ಸ್ ನನಗೆ ಸ್ಫೂರ್ತಿ. ಹಾಗಾಗಿ ಅವರ ಹುಟ್ಟು ಹಬ್ಬದಂದು "ಗೌರಿ" ಚಿತ್ರತಂಡದಿಂದ ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದರು.

gowri movie special song will be released soon
ಸಾನ್ಯಾ ಅಯ್ಯರ್ ಮತ್ತು ಸಮರ್ಜಿತ್ ಲಂಕೇಶ್

ಇಂದ್ರಜಿತ್ ಅವರ ಮಗ ಸಮರ್ಜಿತ್ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರವಿದು. ಸಮರ್ಜಿತ್ ಬಹಳ ಲವಲವಿಕೆಯ ಹುಡುಗ. ಈ ಹಾಡಿನಲ್ಲಿ ಸಮರ್ಜಿತ್ ಅವರ ಜೊತೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ನಾನು ಸಹ ಪುನೀತ್ ಅವರ ಅಭಿಮಾನಿ‌ ಎಂದು ತಾನ್ಯ ಹೋಪ್ ತಿಳಿಸಿದರು.

gowri movie special song will be released soon
ಸಾನ್ಯಾ ಅಯ್ಯರ್ ಮತ್ತು ಸಮರ್ಜಿತ್ ಲಂಕೇಶ್

ಈಗಾಗಲೇ "ಗೌರಿ" ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಆದರೆ, ಇಂದು ಸಿನಿಮಾಗಿಂತ ಈ ಹಾಡಿನ ಬಗ್ಗೆ ಹೇಳಲು ಬಯಸುತ್ತೇನೆ. ಮುಂಬರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ "ಗೌರಿ" ಚಿತ್ರತಂಡದಿಂದ ವಿಶೇಷ ಹಾಡೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಪುನೀತ್ ರಾಜಕುಮಾರ್ ಅವರ ಚಿತ್ರಗಳ ಪ್ರಸಿದ್ದ ಹಾಡುಗಳಿಗೆ ಸಮರ್ಜಿತ್ ಹಾಗೂ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಗೀತೆಯ ತಾಲೀಮು ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣವಾಗಲಿದೆ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಸಾನ್ಯಾ ಅಯ್ಯರ್ ಜೋಡಿಯಾಗಿದ್ದಾರೆ.

gowri movie special song will be released soon
ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಅಯ್ಯರ್

ಇದನ್ನೂ ಓದಿ: 'ಗೌರಿ'ಯ ಪ್ರೇಮಭರಿತ ಫೋಟೋಶೂಟ್​: ಇಂದ್ರಜಿತ್ ಲಂಕೇಶ್ ಪುತ್ರನ ಸಿನಿಮಾವಿದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.