ETV Bharat / entertainment

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಿರ್ದೇಶಕ ಆರ್​.​​ ಚಂದ್ರು

author img

By ETV Bharat Karnataka Team

Published : Feb 8, 2024, 9:42 AM IST

ಕಬ್ಜ ಸಿನಿಮಾ ನಿರ್ದೇಶಕ ಆರ್​.​​​ ಚಂದ್ರು ಬುಧವಾರ ತಮ್ಮ ಹುಟ್ಟುಹಬ್ಬವನ್ನು ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ.

R chandru birthday
ನಿರ್ದೇಶಕ ಆರ್​​ ಚಂದ್ರು ಹುಟ್ಟುಹಬ್ಬ

ಕನ್ನಡ ಚಿತ್ರರಂಗದಲ್ಲಿ ತಾಜ್​​ ಮಹಲ್​​, ಚಾರ್​​ ಮಿನಾರ್​​, ಮೈಲಾರಿ, ಕಬ್ಜದಂತಹ ಸಿನಿಮಾಗಳನ್ನು ನಿರ್ದೇಶನ ‌ಮಾಡಿ ಸಕ್ಸಸ್​ ಕಂಡ ಡೈರೆಕ್ಟರ್​​ ಆರ್​​ ಚಂದ್ರು ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಕೆಲವು ದಿನಗಳ ಹಿಂದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ ಐದು ಸಿನಿಮಾಗಳನ್ನು ಅನೌನ್ಸ್​ ಮಾಡುವ ಮೂಲಕ ಸದ್ದು ಮಾಡಿದ ಆರ್​. ಚಂದ್ರು ಬುಧವಾರ ಅಭಿಮಾನಿಗಳ ಜೊತೆ ಸಹಕಾರ ನಗರದ ನಿವಾಸದಲ್ಲಿ ಕೇಕ್​​​ ಕಟ್​​ ಮಾಡುವ‌ ಮೂಲಕ ಕುಟುಂಬದ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದರು. ಸ್ಯಾಂಡಲ್​ವುಡ್​ನ ಅನೇಕ ಗಣ್ಯರು ಹಾಗೂ ರಾಜಕಾರಣಿಗಳು ಮತ್ತು ಕೆಲ ಪೊಲೀಸ್​ ಅಧಿಕಾರಿಗಳು ಅಭಿನಂದಿಸಿ ಶುಭ ಹಾರೈಸಿದರು.

45ನೇ ವಸಂತಕ್ಕೆ ಕಾಲಿಟ್ಟಿರುವ ನಿರ್ದೇಶಕ ಆರ್​ ಚಂದ್ರು ರಾಜ್ಯ ಮಟ್ಟದಲ್ಲಿ ಅಭಿಮಾನಿ ಸಂಘ ಹೊಂದಿದ್ದು, ಆ ಸಂಘದಿಂದ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದರು. ಸಿನಿಮಾದಿಂದ ಸಿನಿಮಾಕ್ಕೆ ಹೆಚ್ಚೆಚ್ಚು ಅಭಿಮಾನಿಗಳು ಸ್ನೇಹಿತರನ್ನು ಸಂಪಾದಿಸಿಕೊಂಡು ಬೆಳೆಯುತ್ತಿರುವ ಚಂದ್ರು ಅವರು ಈಗ ತಮ್ಮದೇ ಆದ ಬ್ಯಾನರ್​​ ಆರ್.ಸಿ ಸ್ಟುಡಿಯೋಸ್​ ವತಿಯಿಂದ ಐದು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಶ್ರೀರಾಮಬಾಣ, ಫಾದರ್, ಪೋಕ್ (Pok), ಡಾಗ್ ಹಾಗೂ ಕಬ್ಜ 2 ಸಿನಿಮಾಗಳ ಟೈಟಲ್ ಅನಾವರಣ ಮಾಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಅವುಗಳಲ್ಲಿ ಫಾದರ್​ ಸಿನಿಮಾ ಶೂಟಿಂಗ್​ ಈ ತಿಂಗಳ 27 ರಿಂದ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಿನಿಮಾಗಳ ನಿರ್ಮಾಣ ಮತ್ತು ನಿರ್ದೇಶನ ಮಾಡೋ ಗುರಿ ಹೊಂದಿದ್ದು, ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಿ ಅನ್ನುವುದು ಅಭಿಮಾನಿಗಳ ಆಶಯ‌ವಾಗಿದೆ.

ಇದನ್ನೂ ಓದಿ: ನೀವಿದ್ದಲ್ಲೇ ಕುಳಿತು ನೋಡಿ 'ಜಲಪಾತ': ಯಾವಾಗ? ಎಲ್ಲಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.