ETV Bharat / entertainment

ಬರಗೂರು ರಾಮಚಂದ್ರಪ್ಪರ 'ಚಿಣ್ಣರ ಚಂದ್ರ' ಸಿನಿಮಾಗೆ ಮತ್ತೊಂದು ಪ್ರಶಸ್ತಿ

author img

By ETV Bharat Karnataka Team

Published : Feb 27, 2024, 8:24 PM IST

'ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವ'ದಲ್ಲಿ ಚಿಣ್ಣರ ಚಂದ್ರ ಸಿನಿಮಾ 'ಉತ್ತಮ ಮಕ್ಕಳ ಚಿತ್ರ' ಪ್ರಶಸ್ತಿ ಗೆದ್ದುಕೊಂಡಿದೆ.

Chinnara Chandra movie got an award at Dubai International Film Festival
'ಚಿಣ್ಣರ ಚಂದ್ರ' ಸಿನಿಮಾಗೆ 'ಉತ್ತಮ ಮಕ್ಕಳ ಚಿತ್ರ' ಪ್ರಶಸ್ತಿ

ಕನ್ನಡದ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ಚಿಣ್ಣರ ಚಂದ್ರ ಸಿನಿಮಾ 'ದುಬೈ ಅಂತಾರಾಷ್ಟ್ರೀಯ ಚಿತ್ರೋತ್ಸವ'ದಲ್ಲಿ 'ಉತ್ತಮ ಮಕ್ಕಳ ಚಿತ್ರ' ಪ್ರಶಸ್ತಿಗೆ ಭಾಜನವಾಗಿದೆ. ಬರಗೂರು ಮೊಮ್ಮಗ ಆಕಾಂಕ್ಷ್ ಬರಗೂರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಉತ್ತಮ ಬಾಲನಟ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

'ಚಿಣ್ಣರ ಚಂದ್ರ'ಕ್ಕೂ ಮುನ್ನ ಆಕಾಂಕ್ಷ್ ಬರಗೂರು, ಬಯಲಾಟದ ಭೀಮಣ್ಣ, ಭಾಗೀರಥಿ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿಣ್ಣರ ಚಂದ್ರ ಬರಗೂರರ ಅಡಗೋಲಜ್ಜಿ ಎಂಬ ಕಾದಂಬರಿ ಆಧರಿಸಿದೆ. ರಾಮಚಂದ್ರಪ್ಪನವರೇ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿಕ್ಷೇಪ್, ಷಡ್ಜ, ಇಶಾನ್, ಅಭಿನವ್‌ ನಾಗ್, ಸುಂದರರಾಜು, ರೇಖಾ, ವತ್ಸಲಾ ಮೋಹನ್, ರಾಧಾ ರಾಮಚಂದ್ರ, ಸುಂದರ ರಾಜ ಅರಸು, ರಾಘವ್, ರಾಜಪ್ಪ ದಳವಾಯಿ, ಹಂಸ, ವೆಂಕಟರಾಜು, ಮೈಸೂರು ಮಂಜುಳ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

Chinnara Chandra movie got an award at Dubai International Film Festival
'ಚಿಣ್ಣರ ಚಂದ್ರ' ಸಿನಿಮಾಗೆ 'ಉತ್ತಮ ಮಕ್ಕಳ ಚಿತ್ರ' ಪ್ರಶಸ್ತಿ

ಈ ಚಿತ್ರ ಅಲಹಾಬಾದ್ ಮತ್ತು ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೂ ಆಯ್ಕೆಯಾಗಿತ್ತು. ಇದು ಶಿಕ್ಷಣದ ಮಹತ್ವವನ್ನು ಸಾದರಪಡಿಸುವ ಚಿತ್ರವಾಗಿದ್ದು, ಮಕ್ಕಳ ಮೂಲಕವೇ ಈ ಆಶಯವನ್ನು ಅಭಿವ್ಯಕ್ತಪಡಿಸಲಾಗಿದೆ. ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸಬೇಕೆಂಬ ಸಂದೇಶವನ್ನೂ ಸಿನಿಮಾ ನೀಡುತ್ತದೆ. ಅಡಗೋಲಜ್ಜಿಯ ಮೂಲಕ ಜನಪದ ಕಥೆಗಳನ್ನು ಕೇಳುವ ಮಕ್ಕಳು ಸದಭಿರುಚಿ ಸಿನಿಮಾಗಳ ಅಗತ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುವ ವಿಶೇಷ ಪ್ರಸಂಗವನ್ನೂ ಚಿತ್ರ ಒಳಗೊಂಡಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸ್ತಾರಾ ಕಂಗನಾ? ನಟಿ ಹೇಳಿದ್ದಿಷ್ಟು

ಜಿ.ಎನ್.ಗೋವಿಂದರಾಜ ನಿರ್ಮಿಸಿರುವ ಚಿತ್ರಕ್ಕೆ ನಾಗರಾಜ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ನಟ್ರಾಜ ಶಿವು ಮತ್ತು ಪ್ರವೀಣ್ ಅವರ ಸಹ ನಿರ್ದೇಶನವಿದೆ. ಈಗಾಗಲೇ ಕೆಲ ಪ್ರಶಸ್ತಿಗಳ ಮೂಲಕ ಮನ್ನಣೆ ಪಡೆಯುತ್ತಿರುವ ಈ ಚಿತ್ರ ಶೀಘ್ರವೇ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ಹೆಚ್ಚಿನ ಪ್ರೇಕ್ಷಕರನ್ನು ತಲುಪೋ ಪ್ರಯತ್ನದಲ್ಲಿ 'ರವಿಕೆ ಪ್ರಸಂಗ' ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.