ETV Bharat / entertainment

''ಕಾರ್ತಿಕ್​​-ಸಂಗೀತಾ ನಟ ನಟಿ, ವಿನಯ್ ವಿಲನ್, ವರ್ತೂರ್​ ನ್ಯಾಯ ಕೊಡಿಸುವವ'': ತುಕಾಲಿ ಸಂತೋಷ್​​

author img

By ETV Bharat Karnataka Team

Published : Jan 31, 2024, 1:33 PM IST

ಬಿಗ್​ ಬಾಸ್​ ಸೀಸನ್​ 10ರ ಐದನೇ ರನ್ನರ್ ಅಪ್ ತುಕಾಲಿ ಸಂತೋಷ್​​ ಅವರ ಜಿಯೋ ಸಿನಿಮಾ ಸಂದರ್ಶನ ಇಲ್ಲಿದೆ.

Bigg Boss Tukali Santhosh
ಬಿಗ್​ ಬಾಸ್​ ತುಕಾಲಿ ಸಂತೋಷ್​​

ಭಾನುವಾರ ರಾತ್ರಿ ಬಿಗ್​ ಬಾಸ್​ ಸೀಸನ್​ 10ರ ವಿಜೇತರ ಘೋಷಣೆಯಾಗಿದೆ. ತುಕಾಲಿ ಸಂತೋಷ್ ಶನಿವಾರವೇ 5ನೇ ರನ್ನರ್​​ ಅಪ್​ ಆಗಿ ಹೊರ ಬಂದಿದ್ದರು. ಈ ಸೀಸನ್​ನಲ್ಲಿ ಎಲ್ಲಾ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನೂ ಹುಡುಕಿಕೊಂಡು ಹೋದರೆ ಅದರಲ್ಲಿಯೂ ತುಕಾಲಿ ಸಂತೋಷ್ ಅವರ ಕೊಡುಗೆ ಸಣ್ಣದಲ್ಲ! ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು. ಐದನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ತುಕಾಲಿ ಅವರು ಜಿಯೋ ಸಿನಿಮಾ ಜೊತೆ ನಡೆಸಿದ ಸಂದರ್ಶನ ಇಲ್ಲಿದೆ.

''ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಸಂತೋಷ್‌ ಕುಮಾರ್ ಹೆಚ್.ಜಿ ಅಲಿಯಾಸ್ ತುಕಾಲಿ ಸಂತೋಷ್. ನಿಮ್ಮ ಪ್ರೀತಿ ಪಾತ್ರ ವ್ಯಕ್ತಿ. ಈ ಸೀಸನ್‌ನ ಟಾಪ್‌ 6 ಫಿನಾಲೆ ಕಂಟೆಸ್ಟೆಟ್ಸ್‌ನಲ್ಲಿ ನಾನೂ ಒಬ್ಬ. ಐದನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಸ್ಥಾನದಲ್ಲಿದ್ದೇನೆ. ಸಿಕ್ಕಾಪಟ್ಟೆ ಉತ್ಸಾಹ ಇದೆ. ನಾನು ಬಿಗ್​ ಬಾಸ್​ ಮನೆಗೆ ಹೋಗುವಾಗಲೇ, ಶೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಎಂದುಕೊಂಡಿದ್ದೆ. ಹಾಗೇ ಆಗಿದೆ. ಗ್ರ್ಯಾಂಡ್ ಫಿನಾಲೆ ದಿನ ವೇದಿಕೆ ಮೇಲಿಂದ ಬೀಳ್ಕೊಟ್ಟಿದ್ದು, ಅಲ್ಲಿಂದ ಹೊರಬಂದಿದ್ದೇನೆ. ಬಹಳ ಖುಷಿಯಾಗುತ್ತಿದೆ'' - ತುಕಾಲಿ ಸಂತೋಷ್​​.

Bigg Boss Tukali Santhosh
ಬಿಗ್​ ಬಾಸ್​ ತುಕಾಲಿ ಸಂತೋಷ್​​

''ಬಿಗ್‌ ಬಾಸ್ ಮನೆಯಲ್ಲಿ ಪ್ರತಿಯೊಂದೂ ವಿಷಯವೂ ಸವಾಲೇ. ಆ ಎಲ್ಲಾ ಸವಾಲುಗಳನ್ನು ಎದುರಿಸಿ ಫಿನಾಲೆಯವರೆಗೆ ಬಂದು ಕಾಮಿಡಿಯಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೀನಿ. ಅಚ್ಚುಮೆಚ್ಚಿನ ಕ್ಷಣ ಅಂದ್ರೆ, ಬಿಗ್‌ ಬಾಸ್‌ ಮನೆಯಲ್ಲಿ ಮಾತ್ರೆ ತಂದುಕೊಡುತ್ತಿದ್ದದ್ದು. ಇನ್ಮುಂದೆ, 'ಮಾತ್ರೆ ತಂದ್ಕೊಡೋರು ಯಾರೋ ಅಣ್ಣಾ, ಯಾರೋ ಅಣ್ಣಾ, ಚಪಾತಿ ಒತ್ಕೊಡೋರು ಯಾರೋ ಅಣ್ಣಾ, ಯಾರೋ ಅಣ್ಣಾ' ಎಂದು ಹಾಡುವಂತಾಗಿದೆ. ತಿಂದ್ಯಾ ಮಲಗಿದ್ಯಾ ಏನು ಮಾಡ್ದೆ ಅಂತೆಲ್ಲ ಕೇಳೋರು ಯಾರೂ ಇಲ್ಲ ಇನ್ಮೇಲೆ. ಬಿಗ್‌ ಬಾಸ್‌ ಮನೆಯಲ್ಲಿ ಅಲಾರಾಂ​​ ರೀತಿಯಲ್ಲಿ ಒಂದು ಹಾಡು ಬರುತ್ತಿತ್ತು. ನಿದ್ದೆಗಣ್ಣಲ್ಲಿದ್ರೂ ಆ ಹಾಡು ಕೇಳಿದ ತಕ್ಷಣ ರಪ್ ಅಂತ ಎಚ್ಚರ ಆಗಿಬಿಡುತ್ತದೆ. ಅದನ್ನು ಬಹಳ ಮಿಸ್ ಮಾಡಿಕೊಳ್ತೇನೆ. ಹಾಗೆಯೇ ಎಲ್ಲಾ ಸ್ಪರ್ಧಿಗಳನ್ನೂ ಮಿಸ್ ಮಾಡಿಕೊಳ್ಳುತ್ತೇನೆ'' - ತುಕಾಲಿ ಸಂತೋಷ್.

ಬಿಗ್​ ಬಾಸ್​ ಸಿನಿಮಾವಾದರೆ.. ಈ 111 ದಿನಗಳಲ್ಲಿ ಮಿಸ್ ಮಾಡಿಕೊಳ್ಳೋದು ಬಹಳ ಇದೆ. ಆ ನೆನಪುಗಳನ್ನು ಬರೆಯಬೇಕಂದ್ರೆ 111 ಪಿಚ್ಚರ್ ಸ್ಟೋರಿ ಹೇಳಬೇಕಾಗುತ್ತದೆ. ಈ ಸೀಸನ್‌ನಲ್ಲಿ ಕಾರ್ತಿಕ್​​ ಹೀರೋ. ಸಿನಿಮಾದಲ್ಲಿ ಹೀರೋ ಎಷ್ಟು ಮುಖ್ಯವೋ ಪೋಷಕ ನಟನೂ ಅಷ್ಟೇ ಮುಖ್ಯ. ಪ್ರತಾಪ್‌ ಪೋಷಕ ನಟ. ಸಂಗೀತಾ ಶೃಂಗೇರಿ ಆ ಸಿನಿಮಾದ ಹೀರೋಯಿನ್ ಇದ್ದ ಹಾಗೆ. ನಟ ನಟಿ ಇದ್ದಮೇಲೆ ವಿನಯ್ ವಿಲನ್ ಆಗಿರಲೇಬೇಕಲ್ವ. ವರ್ತೂರು ಸಂತೋಷಣ್ಣ ನ್ಯಾಯ ಕೊಡುವ ದೇವರ ಥರ. ಕರ್ಣನ ರೀತಿ.… ಅವರ ಬಗ್ಗೆ ಹೇಳೋಕೆ ಇರೋದು ಒಂದಾ ಎರಡಾ. ತುಂಬಾ ಹೇಳಬಹುದು ಎಂದು ತಿಳಿಸಿದರು.

Bigg Boss Tukali Santhosh
ಬಿಗ್​ ಬಾಸ್​ ತುಕಾಲಿ ಸಂತೋಷ್​​

ಇದನ್ನೂ ಓದಿ: 'ಬಿಗ್​ ಬಾಸ್​ ಬದುಕಿನ ಪಾಠ ಕಲಿಸಿದೆ': ಸಂಗೀತಾ ಶೃಂಗೇರಿ ಅನುಭವದ ಮಾತು

ನೆನಪುಗಳ ಮಾತು ಮಧುರ.. ಈ 111 ದಿನಗಳ ನೆನಪುಗಳನ್ನು ಒಂದೇ ಸಾಲಿನಲ್ಲಿ ಹೇಳಬೇಕು ಅಂದ್ರೆ, 'ನೆನಪುಗಳ ಮಾತು ಮಧುರ'. ಬಿಗ್‌ ಬಾಸ್ ಐ ಮಿಸ್ ಯೂ. ಐ ಲವ್ ಯೂ. ನಿಮ್ಮ ಧ್ವನಿ ನನ್ನನ್ನು ಎಚ್ಚರಗೊಳಿಸುತ್ತಿತ್ತು. ಒಂದು ಅಶರೀರವಾಣಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡಿತು ಅಂದ್ರೆ ನೀವು ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮನಸ್ಸು ಎಂಥದ್ದಿರಬೇಕು ಎಂದರು.

Bigg Boss Tukali Santhosh
ಬಿಗ್​ ಬಾಸ್​ ತುಕಾಲಿ ಸಂತೋಷ್​​

ಇದನ್ನೂ ಓದಿ: 'ನನ್ನಿಂದಲೇ ಅವರು ಟಾಪ್​​ 3 ತಲುಪಿದ್ದು': ಬಿಗ್‌ ಬಾಸ್ ವಿನಯ್ ಗೌಡ ಸಂದರ್ಶನ..!

ನನಗೆ ಇದ್ದ ಆಸೆಗಳನ್ನು ಪೂರೈಸಿದ್ದಾರೆ. ನಾನು ಅಂದುಕೊಂಡಿದ್ದನ್ನೆಲ್ಲಾ ಕೊಟ್ಟಿದೀರಾ. ಅದಕ್ಕಿಂತ ಹೆಚ್ಚು ಕೊಟ್ಟಿದೀರಾ. ನಾನು ನಕ್ಕಾಗ ನೀವೂ ನಕ್ಕಿದ್ದೀರಾ. ನೋವಲ್ಲಿ ನೋವು ಪಟ್ಟಿದ್ದೀರ. ನನ್ನ ಜೀವಮಾನದಲ್ಲಿ ಬಿಗ್‌ ಬಾಸ್ ಅನ್ನೋದು ಒಂದು ಇತಿಹಾಸ. ಮಿಸ್‌ ಯೂ ಬಿಗ್‌ ಬಾಸ್‌. ಲವ್‌ ಯೂ ಬಿಗ್‌ ಬಾಸ್‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.