ETV Bharat / entertainment

ಪುಷ್ಪ 3 ಬಗ್ಗೆ ಖಚಿತ ಮಾಹಿತಿ ಕೊಟ್ಟ ಅಲ್ಲು ಅರ್ಜುನ್

author img

By ETV Bharat Karnataka Team

Published : Feb 18, 2024, 10:08 AM IST

Updated : Feb 18, 2024, 12:11 PM IST

'ಪುಷ್ಪ 2' ತೆರೆಕಾಣೋ ಮುನ್ನವೇ 'ಪುಷ್ಪ 3' ಸಖತ್​ ಸದ್ದು ಮಾಡುತ್ತಿದ್ದು, ಸ್ವತಃ ಅಲ್ಲು ಅರ್ಜುನ್​ ಈ ಬಗ್ಗೆ ಮಾತನಾಡಿದ್ದಾರೆ.

Allu Arjun Confirms Pushpa 3
ಅಲ್ಲು ಅರ್ಜುನ್ ಪುಷ್ಪ 3

'ಪುಷ್ಪ: ದಿ ರೈಸ್​' ಭಾರತೀಯ ಚಿತ್ರರಂಗದ ಯಶಸ್ವಿ ಸಿನಿಮಾ. ಅಮೋಘ ಅಭಿನಯದ ಮೂಲಕ ಜನಮನ ಸೆಳೆದ ಸೌತ್​ ಸೂಪರ್​ ಸ್ಟಾರ್ ಅಲ್ಲು ಅರ್ಜುನ್​​​ ಪ್ರತಿಷ್ಟಿತ ರಾಷ್ಟ್ರಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು. ಸದ್ಯ ಸೂಪರ್ ಹಿಟ್​ ಸಿನಿಮಾದ ಸೀಕ್ವೆಲ್​​ ರೆಡಿಯಾಗುತ್ತಿದ್ದು, ಈ ಸಾಲಿನಲ್ಲೇ ತೆರೆಗಪ್ಪಳಿಸಲಿದೆ. 'ಪುಷ್ಪ 2' ತೆರೆಕಾಣೋ ಮುನ್ನವೇ 'ಪುಷ್ಪ 3' ಸಖತ್​ ಸದ್ದು ಮಾಡುತ್ತಿದೆ.

ಪುಷ್ಪ ಫ್ರಾಂಚೈಸಿಯ ಭವಿಷ್ಯದ ಪ್ರಾಜೆಕ್ಟ್​​​​ ಬಗ್ಗೆ ಹಲವು ಸುದ್ದಿಗಳು ಕಳೆದ ಕೆಲ ದಿನಗಳಿಂದ ಸಖತ್​ ಸದ್ದು ಮಾಡುತ್ತಿದೆ. 'ಪುಷ್ಪ 2: ದಿ ರೂಲ್‌' ಮೇಲೆ ಸಾಕಷ್ಟು ಕುತೂಹಲ ವ್ಯಕ್ತವಾಗುತ್ತಿರುವ ಈ ಹೊತ್ತಿನಲ್ಲಿ, 'ಪುಷ್ಪ ಸರಣಿಯ ಮೂರನೇ ಭಾಗದ ಕೆಲಸಗಳು ಕೂಡ ನಡೆಯುತ್ತಿರಬಹುದು' ಎಂದು ಸ್ವತಃ ನಾಯಕ ನಟ ಅಲ್ಲು ಅರ್ಜುನ್ ಪರೋಕ್ಷವಾಗಿ ದೃಢಪಡಿಸಿದ್ದಾರೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆ, ಪ್ರಸ್ತುತ ಜರ್ಮನಿಯಲ್ಲಿರುವ ಅಲ್ಲು ಅರ್ಜುನ್ ಅವರು ಅಂತಾರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ 'ಪುಷ್ಪ 3'ಅನ್ನು ಖಚಿತಪಡಿಸಿದ್ದಾರೆ. ಜರ್ಮನಿ ಮತ್ತು ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಲ್ಲು ಅರ್ಜುನ್​ ಅವರ ಮೊದಲ ಭೇಟಿ ಇದಾಗಿದೆ.

ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾವನ್ನು ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. 2021ರ ಕೊನೆಗೆ, ಡಿಸೆಂಬರ್​ 17ರಂದು ತೆರೆಕಂಡ ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ಆಗಿ ಹೊರಹೊಮ್ಮಿತು. ಈ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ, ಕಳೆದ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕೆಂಪು ಚಂದನದ ಕಳ್ಳಸಾಗಣೆ ಪ್ರಕರಣ ಸುತ್ತ ಸಿನಿಮಾ ಸಾಗಿದ್ದು, ಅಲ್ಲು ಅರ್ಜುನ್ ಅವರು​ ಪುಷ್ಪ ರಾಜ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಪಾರ್ಟ್ 2ಗೆ ಪೂರ್ಣಗೊಳ್ಳಲ್ಲ 'ಪುಷ್ಪ': 'ದಿ ರೂಲ್' ಬಳಿಕ ಬರಲಿದೆ 'ದಿ ರೋರ್' - ಪುಷ್ಪ 3 ಲೋಡಿಂಗ್​​?

ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ಪುಷ್ಪ ಮುಂದಿನ ಭಾಗಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅಲ್ಲು ಅರ್ಜುನ್ 'ಪುಷ್ಪ 3'ಯನ್ನು ದೃಢಪಡಿಸಿದರು. "ನೀವು ಖಂಡಿತವಾಗಿಯೂ ಸಿನಿಮಾದ ಮೂರನೇ ಭಾಗವನ್ನು ನಿರೀಕ್ಷಿಸಬಹುದು. ನಾವು ಅದನ್ನು ಫ್ರ್ಯಾಂಚೈಸಿ ಮಾಡಲು ಬಯಸುತ್ತೇವೆ ಮತ್ತು ಎಕ್ಸೈಟಿಂಗ್​ ಐಡಿಯಾಗಳನ್ನು ಹೊಂದಿದ್ದೇವೆ" ಎಂದು ತಿಳಿಸಿದರು.

Allu Arjun Confirms Pushpa 3
ಅಲ್ಲು ಅರ್ಜುನ್

ಇದನ್ನೂ ಓದಿ: ಚೆಕ್​ ರಿಟರ್ನ್ ಕೇಸ್: ಖ್ಯಾತ ನಿರ್ದೇಶಕ ರಾಜ್​​ಕುಮಾರ್ ಸಂತೋಷಿಗೆ 2 ವರ್ಷ ಜೈಲು ಶಿಕ್ಷೆ!

ಕಳೆದ ವರ್ಷ ಅಲ್ಲು ಅರ್ಜುನ್ ಅವರ ಪುಷ್ಪ 2ರ ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ಮುಖಕ್ಕೆ ನೀಲಿ ಮತ್ತು ಕೆಂಪು ಬಣ್ಣ ಬಳಿಯಲಾಗಿತ್ತು. ಸೀರೆಯುಟ್ಟು ಶೃಂಗರಿಸಿಕೊಂಡು ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಚಿತ್ರದಿಂದ ಫಹಾದ್ ಫಾಸಿಲ್ ಅವರ ಪೋಸ್ಟರ್ ಕೂಡ ಬಿಡುಗಡೆಯಾಯಿತು. ಇದೀಗ ರಶ್ಮಿಕಾ ಮಂದಣ್ಣ ಅವರ ನೋಟ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತರರಾಗಿದ್ದಾರೆ. 'ಪುಷ್ಪ 2: ದಿ ರೂಲ್' ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಈ ವರ್ಷದ ಆಗಸ್ಟ್ 15ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾವನ್ನು ವಿಸ್ತರಿಸಲು ಅಲ್ಲು ಅರ್ಜುನ್ ಉತ್ಸಾಹ ತೋರಿದ್ದಾರೆ.

Last Updated : Feb 18, 2024, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.