ETV Bharat / business

ಪೈಲಟ್​ ಸೇರಿದಂತೆ ಇತರೆ ಸಿಬ್ಬಂದಿಗೆ ಏರ್​ ಇಂಡಿಯಾದಿಂದ ಗುಡ್​ನ್ಯೂಸ್​! - Air India Salary Hike

author img

By ETV Bharat Karnataka Team

Published : May 24, 2024, 11:47 AM IST

ಟಾಟಾ ಗ್ರೂಪ್​ ಒಡೆತನದ ಏರ್ ಇಂಡಿಯಾ ತನ್ನ​ ಪೈಲಟ್​​ಗಳಿಗೆ ವೇತನದಲ್ಲಿ 15 ಸಾವಿರ ರೂ.ವರೆಗೆ ವೇತನ ಹೆಚ್ಚಳ ಹಾಗೂ 1.8 ಲಕ್ಷ ರೂ.ವರೆಗೆ ವಾರ್ಷಿಕ ಫರ್ಫಾರ್ಮೆನ್ಸ್‌​ ಬೋನಸ್ ​ನೀಡುವುದಾಗಿ ಘೋಷಿಸಿದೆ.

Tata Group owned Air India announced a salary hike for pilots and other staff
ಸಂಗ್ರಹ ಚಿತ್ರ (ETV Bharat)

ನವದೆಹಲಿ: ಸಾಮೂಹಿಕ ರಜೆ ಹಾಕುವ ಮೂಲಕ ಕಂಪನಿ ವಿರುದ್ಧ ಪರೋಕ್ಷ ಪ್ರತಿಭಟನೆ ನಡೆಸುತ್ತಿದ್ದ ಏರ್​ ಇಂಡಿಯಾ ವಿಮಾನಯಾನ ಸಿಬ್ಬಂದಿಯ ಓಲೈಕೆಗಾಗಿ ಇದೀಗ ಟಾಟಾ ಗ್ರೂಪ್​ ವೇತನ ಹೆಚ್ಚಳದ ಅಸ್ತ್ರ ಪ್ರಯೋಗಿಸಿದೆ. ಸಂಸ್ಥೆಯ ಪೈಲಟ್‌ಗಳಿಂದ ಹಿಡಿದು ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಳ ಮತ್ತು ವಾರ್ಷಿಕ ಫರ್ಫಾಮೆನ್ಸ್ ಬೋನಸ್​ ನೀಡಲು ಮುಂದಾಗಿದೆ.

ಏರ್​ ಇಂಡಿಯಾ ಅಧಿಕೃತ ಘೋಷಣೆಯ ಅನುಸಾರ ಪರಿಷ್ಕೃತ ವೇತನ ಏಪ್ರಿಲ್​ 1ರಿಂದ ಜಾರಿಗೆ ಬರಲಿದೆ. ಸಿಬ್ಬಂದಿಯ ನಿಗದಿತ ವೇತನದ ಮೇಲೆ ಅವರ ಸ್ಥಾನದ ಆಧಾರದಂತೆ 5ರಿಂದ 15 ಸಾವಿರ ರೂವರೆಗೆ ವೇತನ ಹೆಚ್ಚಳವಾಗಲಿದೆ.

ಕಿರಿಯ ಅಧಿಕಾರಿಗಳಿಂದ ಹಿರಿಯ ಕಮಾಂಡರ್ ಹುದ್ದೆಗಳ​ವರೆಗೆ ಅವರ ಹುದ್ದೆಯಾನುಸಾರ 42 ಸಾವಿರ ರೂ.ಯಿಂದ 1.8 ಲಕ್ಷ ರೂ.ವರೆಗೆ ವಾರ್ಷಿಕ ಬೋನಸ್​ ನೀಡುವುದಾಗಿ ಸಂಸ್ಥೆ ತಿಳಿಸಿದೆ. ಮೇಲಾಧಿಕಾರಿಗಳು ಮತ್ತು ಕ್ಯಾಪ್ಟನ್​ ವಾರ್ಷಿಕ 60 ಸಾವಿರ ರೂ ಬೋನಸ್​ ಪಡೆದರೆ, ಕಮಾಂಡರ್​ ಮತ್ತು ಸೀನಿಯರ್​ ಕಮಾಂಡರ್​ ಕ್ರಮವಾಗಿ 1.32 ಲಕ್ಷ ಮತ್ತು 1.80 ಲಕ್ಷ ರೂ ಬೋನಸ್​ ಪಡೆಯಲಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅನಾರೋಗ್ಯ ರಜೆ ಹಾಕಿದ ಸಿಬ್ಬಂದಿ; 70 ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.