ಬಿಎಸ್​ಇ ಸೆನ್ಸೆಕ್ಸ್​ 434 ಅಂಕ ಕುಸಿತ : 22,055ಕ್ಕೆ ಇಳಿದ ನಿಫ್ಟಿ

author img

By ETV Bharat Karnataka Team

Published : Feb 21, 2024, 7:40 PM IST

Sensex

ಬುಧವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಇಳಿಕೆಯಾಗಿವೆ.

ಮುಂಬೈ : ದುರ್ಬಲ ಜಾಗತಿಕ ಪ್ರವೃತ್ತಿಗಳ ಹಿನ್ನೆಲೆಯಲ್ಲಿ ಮತ್ತು ಏಷ್ಯಾದ ಮಾರುಕಟ್ಟೆಗಳು ಮಿಶ್ರ ಪ್ರವೃತ್ತಿಗಳಿಗೆ ಸಾಕ್ಷಿಯಾದ ಕಾರಣ ದೇಶೀಯ ಇಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ-50 ಬುಧವಾರದ ವಹಿವಾಟಿನಲ್ಲಿ ಇಳಿಕೆಯೊಂದಿಗೆ ಕೊನೆಗೊಂಡವು.

ಲೋಹದ ಷೇರುಗಳ ವ್ಯಾಪಕ ಏರಿಕೆಯ ಮಧ್ಯೆ ಬುಧವಾರದ ಬೆಳಗಿನ ವಹಿವಾಟಿನಲ್ಲಿ ನಿಫ್ಟಿ-50 ಸತತ ಮೂರನೇ ಅವಧಿಗೆ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತು. ಯುಎಸ್ ಅಂಗಸಂಸ್ಥೆ ನೊವೆಲಿಸ್ ಯುಎಸ್ ಐಪಿಒಗೆ ಅರ್ಜಿ ಸಲ್ಲಿಸಿದ ನಂತರ ಅಲ್ಯೂಮಿನಿಯಂ ಉತ್ಪಾದಕ ಹಿಂಡಾಲ್ಕೊದಲ್ಲಿ ಶೇ 3ರಷ್ಟು ಏರಿಕೆಗೆ ಕಾರಣವಾದ ನಂತರ ಲೋಹದ ಷೇರುಗಳು ಶೇ 1.9ರಷ್ಟು ಏರಿಕೆಯಾಗಿವೆ.

ಬುಧವಾರದಂದು 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 434.31 ಪಾಯಿಂಟ್ಸ್ ಅಥವಾ ಶೇ 0.59 ರಷ್ಟು ಕುಸಿದು 72,623.09 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 141.90 ಪಾಯಿಂಟ್ಸ್ ಅಥವಾ ಶೇ 0.64 ರಷ್ಟು ಕುಸಿದು 22,055.05 ಮಟ್ಟದಲ್ಲಿ ಕೊನೆಗೊಂಡಿತು. ವಿಶಾಲ ಮಾರುಕಟ್ಟೆಯಲ್ಲಿ ನಿಫ್ಟಿ ಸ್ಮಾಲ್ ಕ್ಯಾಪ್-100 ಶೇಕಡಾ 1.04 ರಷ್ಟು ಮತ್ತು ನಿಫ್ಟಿ ಮಿಡ್ ಕ್ಯಾಪ್-100 ಸೂಚ್ಯಂಕಗಳು ಶೇಕಡಾ 1.25 ರಷ್ಟು ಕುಸಿದವು.

ಜಪಾನ್​ನ ನಿಕೈ-225 ಸೂಚ್ಯಂಕ ಶೇ 0.2ರಷ್ಟು ಕುಸಿತ ಕಂಡು 38,300.00 ಅಂಕಗಳಿಗೆ ತಲುಪಿದೆ. ಹಾಂಗ್ ಕಾಂಗ್ ನ ಹಾಂಗ್ ಸೆಂಗ್ ಸೂಚ್ಯಂಕ ಶೇ 2.4ರಷ್ಟು ಏರಿಕೆ ಕಂಡು 16,642.00 ಅಂಕಗಳಿಗೆ ತಲುಪಿದೆ. ಶಾಂಘೈ ಕಾಂಪೊಸಿಟ್ ಸುಮಾರು ಶೇ 2.0 ರಷ್ಟು ಏರಿಕೆ ಕಂಡು 2,979.30 ಕ್ಕೆ ತಲುಪಿದೆ.

ಭಾರತೀಯ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ 1 ಪೈಸೆ ಏರಿಕೆಯಾಗಿ 82.96 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕನ್ ಕರೆನ್ಸಿಯ ಬಲ ಮತ್ತು ನಿರಂತರ ವಿದೇಶಿ ನಿಧಿಯ ಹೊರಹರಿವು ರೂಪಾಯಿ ಮೇಲೆ ಒತ್ತಡ ಹೇರಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಡಾಲರ್ ವಿರುದ್ಧ ರೂಪಾಯಿ 82.90 ರಲ್ಲಿ ಪ್ರಾರಂಭವಾಯಿತು. ಇದು ಇಂಟ್ರಾ-ಡೇ ಗರಿಷ್ಠ 82.86 ಮತ್ತು ಕನಿಷ್ಠ 82.97 ರಲ್ಲಿ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ 82.96 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯದ 82.97 ರಿಂದ 1 ಪೈಸೆ ಹೆಚ್ಚಾಗಿದೆ.

ಇದನ್ನೂ ಓದಿ : 'ಸೂರ್ಯಘರ್' ಸೌರ ಮೇಲ್ಛಾವಣಿ ಯೋಜನೆ: ಅವಕಾಶ ಮತ್ತು ಸವಾಲುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.