19 ಸಾವಿರಕೋಟಿ ನಿವ್ವಳ ಲಾಭ ಗಳಿಸಿದ ರಿಲಯನ್ಸ್​

author img

By ETV Bharat Karnataka Desk

Published : Jan 20, 2024, 8:05 AM IST

Reliance Industries posts 10.9% rise in net profits in Q3-FY24, revenue 3.2

ರಿಲಯನ್ಸ್​ ಇಂಡಸ್ಟ್ರೀಸ್​ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಕಂಪನಿ ಈ ಭಾರಿ ಭರ್ಜರಿ ಲಾಭ ಗಳಿಸಿದೆ.

ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿ ತೆರಿಗೆ ಪಾವತಿ ನಂತರ ಶೇ 10.9ರಷ್ಟು ಏರಿಕೆ ದಾಖಲಿಸಿದೆ. ಅಂದರೆ ಬರೋಬ್ಬರಿ 19,641 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಇದೇ 2022 ರಲ್ಲಿ ಈ ಪ್ರಮಾಣ 17,706 ಕೋಟಿ ರೂ. ಆಗಿತ್ತು.

2023 - 24ರಲ್ಲಿ (ಏಪ್ರಿಲ್ - ಡಿಸೆಂಬರ್) ಇದುವರೆಗಿನ ಮೂರು ತ್ರೈಮಾಸಿಕಗಳಲ್ಲಿ ಕಂಪನಿಯ ಒಟ್ಟು ನಿವ್ವಳ ಲಾಭವು 52,443 ಕೋಟಿ ರೂ.ಗಳಿಂದ 57,777 ಕೋಟಿ ರೂ. ಏರಿಕೆಯಾಗಿದೆ. ಶುಕ್ರವಾರ ಬಿಡುಗಡೆಯಾದ ಕಂಪನಿಯ ವರದಿಯಲ್ಲಿ ಈ ಅಂಕಿ- ಅಂಶಗಳನ್ನು ನೀಡಲಾಗಿದೆ. ಏಕೀಕೃತ ಆದಾಯಕ್ಕೆ ಬರುವುದಾದರೆ, ರಿಲಯನ್ಸ್ ಇಂಡಸ್ಟ್ರೀಸ್ ಒಟ್ಟಾರೆ 3.2 ಶೇಕಡಾ ಏರಿಕೆಯನ್ನು ದಾಖಲಿಸಿದೆ . ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಆದಾಯ 2,40,532 ಕೋಟಿ ರೂ. ಆಗಿತ್ತು.

ಡಿಸೆಂಬರ್ 2023 ರಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚವು 30,102 ಕೋಟಿ ರೂಪಾಯಿಗಳಾಗಿದೆ. ಪ್ಯಾನ್-ಇಂಡಿಯಾ 5G ರೋಲ್-ಔಟ್, ಚಿಲ್ಲರೆ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಹೊಸ ಇಂಧನ ವ್ಯವಹಾರದಲ್ಲಿ ಕಂಪನಿ ಭಾರಿ ಪ್ರಮಾಣದ ಹೂಡಿಕೆ ಮಾಡಿದೆ. ತ್ರೈಮಾಸಿಕ ವರದಿ ಬಿಡುಗಡೆ ಮಾಡಿ ಮಾತನಾಡಿರುವ ರಿಲಯನ್ಸ್​ ಇಂಡಸ್ಟ್ರೀಸ್​​ನ ಮುಖ್ಯಸ್ಥ ಮುಖೇಶ್​ ಅಂಬಾನಿ, ರಿಲಯನ್ಸ್​ ವ್ಯವಹಾರಗಳ ಬೆಳವಣಿಗೆಗೆ ಅಸಾಧಾರಣ ಪ್ರಯತ್ನ ಮಾಡಿದ್ದಕ್ಕಾಗಿ ಧನ್ಯವಾದಗಳು, ದೃಢವಾದ ಕಾರ್ಯಾಚರಣೆ ಮತ್ತು ಹಣಕಾಸಿನ ಕಾರ್ಯಕ್ಷಮತೆಯ ಮತ್ತೊಂದು ತ್ರೈಮಾಸಿಕವನ್ನು ನಾವು ತಲುಪಿದ್ದೇವೆ ಎಂದು ಅವರು ಹೇಳಿದ್ದಾರೆ.

’ಟ್ರೂ 5G ಸೇವೆಗಳ ಮೂಲಕ ವೇಗದ ಇಂಟರ್​ನೆಟ್​ ಒದಗಿಸುವಲ್ಲಿ ಜಿಯೋ ಯಶಸ್ವಿಯಾಗಿದೆ. ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ. ದೇಶದ ಪ್ರತಿಯೊಂದು ನಗರ, ಪಟ್ಟಣ ಮತ್ತು ಹಳ್ಳಿಗಳು ಈಗ ಹೆಚ್ಚಿನ ವೇಗದ ಡಿಜಿಟಲ್ ಸಂಪರ್ಕವನ್ನು ಪಡೆದುಕೊಂಡಿದ್ದು, ಇದು ಸಾಟಿಯಿಲ್ಲದ ಡಿಜಿಟಲ್ ಪ್ರವೇಶ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. JioBharat ಫೋನ್ ಮತ್ತು JioAirFiber ಸೇವೆಗಳ ಬಲವಾದ ಬೆಳವಣಿಗೆ, ಜಿಯೋದ ಚಂದಾದಾರರ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಡಿಜಿಟಲ್ ಸೇವೆಗಳ ವ್ಯವಹಾರದ ಭಾರಿ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ" ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.