ETV Bharat / business

ಮಧ್ಯಮ ವರ್ಗದ ಹಾಟ್​​ ಫೇವರಿಟ್​; 25KMPL ಮೈಲೇಜ್, ಅತ್ಯಾಕರ್ಷಕ ನೋಟ, ಚಿಂದಿ ಉಡಾಯಿಸೋ ಒಳಾಂಗಣ; ಯಾವುದು ಈ ಕಾರು? - Maruti Suzuki Swift 2024

author img

By ETV Bharat Karnataka Team

Published : May 3, 2024, 9:37 AM IST

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಹೊಸ ಸ್ವಿಫ್ಟ್ Z ಸರಣಿಯ ಕಾರುಗಳ ಬುಕಿಂಗ್ ಪ್ರಾರಂಭ ಮಾಡಿದೆ. ಈ ಹೊಸ ಮಾದರಿ ಸ್ವಿಫ್ಟ್​ ಕಾರು ಹೆಚ್ಚು ಹೆಚ್ಚು ನವೀಕರಣಗಳನ್ನು ಹೊಂದಿರುವಂತೆ ಬಾಸವಾಗುತ್ತಿದೆ. ಮಾರುತಿ ಸ್ವಿಫ್ಟ್ Z ಸರಣಿಯ ಈ ಕಾರು ಎಷ್ಟು ಮೈಲೇಜ್​ ನೀಡುತ್ತದೆ. ಎಂಜಿನ್​ ಸಾಮರ್ಥ್ಯಗಳೇನು? ಏನೆಲ್ಲ ವಥಶಿಷ್ಟ್ಯಗಳನ್ನು ಹೊಂದಿದೆ ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ

Maruti Suzuki Swift 2024 Model
ಮಧ್ಯಮ ವರ್ಗದ ಹಾಟ್​​ ಫೇವರಿಟ್ ಈ ಮಾರುತಿ ಸ್ವಿಫ್ಟ್​​​​​ Z (GettyImages)

ಹೈದರಾಬಾದ್​: ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಕಂಪನಿ ಇತ್ತೀಚಿನ ಸ್ವಿಫ್ಟ್ Z ಸರಣಿಯ ಮಾಡೆಲ್ ಕಾರಿನ ಬುಕ್ಕಿಂಗ್​ ಅನ್ನು ಬುಧವಾರದಿಂದ ಶುರು ಮಾಡಿದೆ. ನಾಲ್ಕನೇ ತಲೆಮಾರಿನ ಹ್ಯಾಚ್ ಬ್ಯಾಕ್ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಸ್ವಿಫ್ಟ್ ಈಗಾಗಲೇ ಹಲವು ವಿವರಗಳೊಂದಿಗೆ ಸದ್ದು ಮಾಡುತ್ತಿದೆ. ವಿವರಗಳ ಪ್ರಕಾರ, ಈ ಹೊಸ Z ಸರಣಿಯ ಮಾದರಿಯಲ್ಲಿ ಎಂಜಿನ್ ಸಾಮರ್ಥ್ಯ, ಟಾರ್ಕ್ ಮತ್ತು ಇಂಧನ-ದಕ್ಷತೆಯಲ್ಲಿನ ನವೀಕರಣದಿಂದ ಸುದ್ದಿಯಲ್ಲಿದೆ. ಟಾಪ್-ಸ್ಪೆಕ್ ರೂಪಾಂತರದಲ್ಲಿ ಸುರಕ್ಷತಾ ಕಿಟ್ ಅನ್ನು ಸಹ ನೀಡಲಾಗುತ್ತಿದೆ. ಹೀಗಾಗಿ ಮಾರುತಿ ಗ್ರಾಹಕರು ಈ ಕಾರಿನತ್ತ ಆಕರ್ಷಿತರಾಗಿದ್ದಾರೆ ಎನ್ನಲಾಗಿದೆ.

ಹೊಸ ಮಾರುತಿ ಸ್ವಿಫ್ಟ್ ಪ್ರತಿ ಲೀಟರ್ ಪೆಟ್ರೋಲ್​​​ ಹೊಸ ಸ್ವಿಫ್ಟ್​ ಝೆಡ್​​​ 25.72 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಪ್ರಕಟಿಸಿದೆ. ಈ ಹೊಸ ಮಾದರಿಯು 1.2-ಲೀಟರ್ Z12E ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. 82hp ಶಕ್ತಿಯು 112Nm ಟಾರ್ಕ್ ಉತ್ಪಾದಿಸುತ್ತದೆ. ಈ ಹೊಸ ಸ್ವಿಫ್ಟ್‌ನ ಎಲ್ಲ ಮಾದರಿಗಳಲ್ಲೀ ಆರು ಏರ್‌ಬ್ಯಾಗ್‌ಗಳು ಲಭ್ಯವಿವೆ. ಇದು ಗ್ರಾಹಕರ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಹೊಸ ಮಾರುತಿ ಸ್ವಿಫ್ಟ್‌ನ ಇತರ ವಿಶೇಷತೆಗಳು : ಹೊಸ ಸ್ವಿಫ್ಟ್ Z ಸರಣಿಯ ಎಂಜಿನ್ ಹಿಂದಿನ K ಸರಣಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮಾದರಿಯು ಹಿಂದಿನ ಕೆ ಸಿರೀಸ್‌ಗಿಂತ 3 ಕಿ.ಮೀನಷ್ಟು ಹೆಚ್ಚು ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಸ್ವಿಫ್ಟ್ ಸಿಎನ್‌ಜಿ ಆವೃತ್ತಿಯು ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಕಂಪನಿಯು ಈ Z ಸರಣಿಯ ಕಾರುಗಳ ಒಳಭಾಗದಲ್ಲಿ ಬದಲಾವಣೆ ಮಾಡಿದೆ. ಕಾರಿನ ಒಳಾಂಗಣವನ್ನು ಬಲೆನೊ ಮತ್ತು ಫ್ರಾಂಕ್ಸ್ ಕಾರುಗಳ ಮಾದರಿಗಳಂತೆ ವಿನ್ಯಾಸಗೊಳಿಸಲಾಗಿದೆ. ಇನ್ನೂ ಖುಷಿ ವಿಚಾರ ಎಂದರೆ ಈ ಮಾದರಿಯು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಹೊಂದಿದೆ ಎಂಬ ಸುದ್ದಿಗಳಿವೆ. ಆದರೆ ಈ ಬಗ್ಗೆ ಕಂಪನಿ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ 360 ಡಿಗ್ರಿ ಕ್ಯಾಮೆರಾ ಆಯ್ಕೆ ನೀಡಲಾಗಿದೆಯಂತೆ.

ಹೊಸ ಮಾರುತಿ ಸ್ವಿಫ್ಟ್ ಸುರಕ್ಷತಾ ಕಿಟ್: ಈ z ಸರಣಿಯ ಕಾರು ಹೊರಹೋಗುವ ಮಾದರಿ ಸ್ವಿಫ್ಟ್‌ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ಕಾರಿನಲ್ಲಿ 9 ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್, ಆರ್ಕಾಮಿಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಹಿಂಬದಿ ಸೀಟ್ ಎಸಿ, ಸಿ-ಟೈಪ್ ಯುಎಸ್‌ಬಿ ಪೋರ್ಟ್‌ಗಳನ್ನು ಅಳವಡಿಸಲಾಗಿದೆ. ಕಂಪನಿಯು ಸುರಕ್ಷತಾ ಕಿಟ್ ಸಹ ನವೀಕರಿಸಿದೆ. ಅತ್ಯಾಧುನಿಕ ಮಾದರಿಯ ಈ ಕಾರುಗಳು ಎಲ್‌ಇಡಿ ಫಾಗ್ ಲೈಟ್‌ಗಳನ್ನು ಕೂಡಾ ಹೊಂದಿವೆ.

ಇದನ್ನು ಓದಿ: ಇದು BMW ಕಂಪೆನಿಯ ಹೊಚ್ಚ ಹೊಸ ಕಾರು: ಶರವೇಗದ ಐಷಾರಾಮಿ ವಾಹನದ ಬೆಲೆ ಕೇಳಿದ್ರೆ! - BMW Launches New Car

ETV Bharat Logo

Copyright © 2024 Ushodaya Enterprises Pvt. Ltd., All Rights Reserved.