ಮಾರುತಿ ಆಲ್ಟೊ ಕಾರಿನ ಬೆಲೆ ಕಡಿತ, ತಕ್ಷಣದಿಂದಲೇ ಜಾರಿ; ಎಷ್ಟು ಕಡಿಮೆ ಗೊತ್ತಾ?

author img

By ETV Bharat Karnataka Team

Published : Feb 17, 2024, 8:05 AM IST

Maruti Alto K10 Price Cut Offer

ನೀವು ಚಿಕ್ಕ ಬಜೆಟ್​ನಲ್ಲಿ ಹೊಸ ಕಾರು ಖರೀದಿಸಲು ಬಯಸುತ್ತೀದ್ದೀರಾ? ಉತ್ತಮ ಡೀಲ್‌ಗಳಿಗಾಗಿ ಹುಡುಕುತ್ತಿರುವಿರಾ? ಪ್ರಮುಖ ಕಾರು ತಯಾರಕ ಮಾರುತಿ ಸುಜುಕಿ ಆಲ್ಟೊ ಕೆ10 ಬೆಲೆಯನ್ನು ಕಡಿಮೆ ಮಾಡಿದೆ. ಆ ವಿವರಗಳನ್ನು ಒಮ್ಮೆ ನೋಡಿ ಬರೋಣವೇ?

ಉತ್ತಮ ಆಫರ್‌ಗಳು ಬಂದಾಗ ಅನೇಕ ಜನರು ಕಾರುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುತ್ತಾರೆ. ಆ ಅವಕಾಶ ಯಾವಾಗ ಬರುತ್ತದೆ ಎಂದು ಕಾದು ಕುಳಿತಿರುತ್ತಾರೆ. ನೀವೂ ಕೂಡ ಇಂತಹ ಆಫರ್‌ಗಳಿಗಾಗಿ ಕಾಯುತ್ತಿದ್ದರೆ ನಿಮಗೊಂದು ಸುವರ್ಣಾವಕಾಶ ಇದೀಗ ಬಂದಿದೆ. ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ತನ್ನ ಜನಪ್ರೀಯ ಹಾಗೂ ಕೈಗೆಟಕುವ ದರದಲ್ಲಿ ಸಿಗುವ ಆಲ್ಟೊ ಕಾರಿನ ಬೆಲೆಯನ್ನು ಇಳಿಕೆ ಮಾಡಿದೆ. ಈ ಬೆಲೆಗಳು ತಕ್ಷಣವೇ ಜಾರಿಗೆ ಬರಲಿವೆ. ಇದರೊಂದಿಗೆ ಹಲವು ಕಂಪನಿಗಳು ತಮ್ಮ ಗ್ರಾಹಕರಿಗೆ ರಿಯಾಯಿತಿಗಳನ್ನು ನೀಡುತ್ತಿವೆ.

ಯಾವ ಮಾದರಿಯ ಕಾರಿಗೆ ರಿಯಾಯಿತಿ ನೀಡಲಾಗುತ್ತಿದೆ?: ಮಾರುತಿ ಸುಜುಕಿ ಆಲ್ಟೊ ಕೆ10 ಮಾದರಿಯ ಕಾರಿನ ಬೆಲೆಯನ್ನು ಕಂಪನಿ ಪರಿಷ್ಕರಣೆ ಮಾಡಿದೆ. ಈ ರಿಯಾಯಿತಿ ದರಗಳು ಆಯಾ ವೇರಿಯಂಟ್‌ಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುತ್ತವೆ. ಆದರೆ ಕಾರಿನ ರೂಪಾಂತರಕ್ಕೆ ಅನುಗುಣವಾಗಿ ಅವುಗಳ ಬೆಲೆಗಳು ಬದಲಾಗಬಹುದು. K10 ಕಾರಿನ ಸರಣಿಯ VXi AGS ಮತ್ತು VXi +AGS ನವೀನ ಮಾದರಿಗಳ ಮೇಲೆ ಆಲ್ಟೊ ರೂ 5,000 ಕಡಿತ ಮಾಡಿದೆ. ಮಾರುಕಟ್ಟೆಯಲ್ಲಿ Alto K10 VXi AGS ಬೆಲೆ ಸುಮಾರು 5.56 ಲಕ್ಷ ರೂಪಾಯಿಗಳಾಗಿದ್ದರೆ, VXi +AGS ಬೆಲೆ 5.85 ಲಕ್ಷ ರೂಪಾಯಿಗಳಾಗಿವೆ.

ಉಳಿದ ವಿವಿಧ ಮಾದರಿಗಳ ಬೆಲೆಯಲ್ಲಿ ಇಲ್ಲ ಯಾವುದೇ ಬದಲಾವಣೆ: ಮಾರುತಿ ಆಲ್ಟೊ K10 ನ ಇತರ ಎಲ್ಲ ರೂಪಾಂತರಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಂಪನಿ ತಿಳಿಸಿದೆ. ಆಲ್ಟೊ ಕೆ10 ನಾಲ್ಕು ವಿವಿಧ ರೂಪಾಂತರಗಳಲ್ಲಿ ಲಭ್ಯವಿದ್ದು, ಬೆಲೆಗಳು ರೂ.3.99 ಲಕ್ಷದಿಂದ ರೂ.5.96 ಲಕ್ಷದವರೆಗೆ (ಎಕ್ಸ್ ಶೋ ರೂಂ). ಇರಲಿವೆ.

ವಿಡಬ್ಲ್ಯೂ ವರ್ಟಸ್ ಕಾರಿನ ಮೇಲೆ ಡಿಸ್ಕೌಂಟ್ ಆಫರ್: ಈ ವಿಡಬ್ಲ್ಯೂ ವರ್ಟಸ್ ಕಾರಿನ ಖರೀದಿಯ ಮೇಲೆ ರೂ.52 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಕೂಡಾ ಲಭ್ಯವಿದೆ. ಹೀಗಾಗಿ ಆಸಕ್ತರು ಈ ಕ್ಯಾಶ್ ಬ್ಯಾಕ್​ ಸೌಲಭ್ಯವನ್ನು ಪಡೆದುಕೊಳ್ಳಬಹುದು.

VW Virtus ನಲ್ಲಿ ನೀವು ಪಡೆಯಬಹುದಾದ ಆಫರ್‌ಗಳಿವು

  • ಕ್ಯಾಶ್ ಬ್ಯಾಕ್ ಆಫರ್ 10 ಸಾವಿರ ರೂ
  • ಎಕ್ಸ್ ಚೇಂಜ್ ಆಫರ್ - ರೂ.30 ಸಾವಿರ
  • ಕಾರ್ಪೊರೇಟ್ - 12 ಸಾವಿರ ರೂ

ಡಿಸ್ಕೌಂಟ್, ಕ್ಯಾಶ್ ಬ್ಯಾಕ್, ಎಕ್ಸ್ ಚೇಂಜ್ ಆಫರ್ ಗಳು ಸೇರಿ ರೂ. 52 ರವರೆಗಿನ ರಿಯಾಯಿತಿ ದರದಲ್ಲಿ ನೀವು ಕಾರನ್ನು ಖರೀದಿ ಮಾಡಿ, ಅದರ ಸದುಪಯೋಗವನ್ನು ಪಡೆಯಬಹುದಾಗಿದೆ.

VW ಟೈಗುನ್: ಈ ಕಾರಿನ ಖರೀದಿಯ ಮೇಲೆ ನೀವು ರೂ.1.3 ಲಕ್ಷದವರೆಗೂ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅಂದರೆ 60 ಸಾವಿರ ರೂ. ಕ್ಯಾಶ್ ಬ್ಯಾಕ್ ಆಫರ್, ಎಕ್ಸ್ ಚೇಂಜ್ ಮೂಲಕ 40 ಸಾವಿರ ರೂ, ಕಾರ್ಪೊರೇಟ್ ರಿಯಾಯಿತಿಯೊಂದಿಗೆ 30 ಸಾವಿರದವರೆಗೆ ಸುಮಾರು ರೂ.1.3 ಲಕ್ಷದ ವರೆಗೂ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಸ್ಕೋಡಾ ಸ್ಲಾವಿಯಾ, ಕುಶಾಕ್: ಈ ಸ್ಕೋಡಾ ಸ್ಲಾವಿಯಾ ಕಾರಿನ ಖರೀದಿಯ ಮೇಲೆ ನೀವು 1.5 ಲಕ್ಷ ರೂಗಳ ಪ್ರಯೋಜನಗಳನ್ನು ಪಡೆಯಬಹುದು.

ಟಾಟಾ ಮೋಟಾರ್ಸ್ - ರಿಯಾಯಿತಿಗಳು : ಪ್ರಮುಖ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ವಿವಿಧ ಕಾರುಗಳ ಖರೀದಿಯಲ್ಲಿ ಅನೇಕ ರಿಯಾಯಿತಿಗಳನ್ನು ನೀಡುತ್ತಿದೆ. ಅದನ್ನು ಗಮನಿಸುವುದಾರೆ,

ಟಾಟಾ ಟಿಯಾಗೊ ಪೆಟ್ರೋಲ್: ಟಾಟಾ ಟಿಯಾಗೊ ಪೆಟ್ರೋಲ್ ಕಾರು ಖರೀದಿದಾರರು 40 ಸಾವಿರ ರೂ ಕ್ಯಾಶ್​ಬ್ಯಾಕ್​ ಪಡೆಯಬಹುದು. ಇದಲ್ಲದೇ ರೂ.15 ಸಾವಿರದವರೆಗೆ ಎಕ್ಸ್ ಚೇಂಜ್ ಆಫರ್ ಕೂಡಾ ಲಭ್ಯವಿದೆ.

ಟಾಟಾ ಟಿಗೋರ್ ಪೆಟ್ರೋಲ್: ಈ ಕಾರಿನ ಖರೀದಿಯ ಮೇಲೆ ನೀವು 45 ಸಾವಿರದವರೆಗೆ ಕ್ಯಾಶ್​​ ಬ್ಯಾಕ್​ ಪಡೆಯಬಹುದು. ಇದಲ್ಲದೇ ರೂ.15 ಸಾವಿರದವರೆಗೆ ಎಕ್ಸ್ ಚೇಂಜ್ ಆಫರ್ ಕೂಡ ಇದೆ.

ಟಾಟಾ ಟಿಯಾಗೊ CNG, Tigor CNG: ಈ ಟಾಟಾ ಟಿಯಾಗೊ ಕಾರಿನ ಖರೀದಿಯ ಮೇಲೆ ನೀವು 60 ಸಾವಿರದವರೆಗೆ (ಸಿಂಗಲ್ ಸಿಲಿಂಡರ್) ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದು, ಡಬಲ್ ಸಿಲಿಂಡರ್ ಕಾರಿನಲ್ಲಿ ನೀವು ರೂ.35 ಸಾವಿರದವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ಇದನ್ನು ಓದಿ: ಕಳೆದುಹೋದ ಕ್ರೆಡಿಟ್ ಕಾರ್ಡ್ ಬ್ಲಾಕ್​ ಮಾಡುವುದು ಹೇಗೆ? ಇಲ್ಲಿವೆ ಟಿಪ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.