ವಿಭಿನ್ನ ಬ್ರ್ಯಾಂಡ್‌ಗಳ ಬೈಕ್‌ ಓಡಿಸುವ ಕ್ರೇಜ್‌ ನಿಮಗಿದೆಯೇ?: 5 ಬೆಸ್ಟ್‌ ಬೈಕ್‌ ರೆಂಟಲ್‌ ಆ್ಯಪ್‌ಗಳಿವು - Bike Rental Apps

author img

By ETV Bharat Karnataka Team

Published : Mar 26, 2024, 8:51 AM IST

Bike Rent Apps in india  Bike Rent  iOS  Android

Bike Rent Apps in india: ನೀವು ಬೈಕ್‌ಪ್ರಿಯರೇ? ವಾರಾಂತ್ಯದಲ್ಲಿ ಹೊರಗೆ ಹೋಗುವ ಅಭ್ಯಾಸ ನಿಮಗಿದೆಯೇ? ಪ್ರತೀ ಬಾರಿ ಒಂದೇ ಬೈಕ್‌ನ ಬದಲು ವಿಭಿನ್ನ ಬ್ರ್ಯಾಂಡ್ ಬೈಕ್‌ಗಳನ್ನು ಓಡಿಸುವ ಆಸೆ ಇದೆಯೇ? ಹಾಗಾದರೆ, ಭಾರತದಲ್ಲಿ ಬಾಡಿಗೆಗೆ ಬೈಕ್‌ಗಳನ್ನು ನೀಡುವ ಟಾಪ್ ಐದು ಬೈಕ್ ಬಾಡಿಗೆ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯೋಣ ಬನ್ನಿ.

ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಬೈಕ್ ಬಾಡಿಗೆಗೆ ಪಡೆದು ಸಂಚಾರ ಮಾಡುವವರ ಸಂಖ್ಯೆ ಹೆಚ್ಚಿದೆ. ಸ್ವಂತ ಬೈಕ್ ಖರೀದಿಸಲಾಗದವರು, ತುರ್ತಾಗಿ ಪ್ರಯಾಣಿಸುವವರು ಬಾಡಿಗೆಗೆ ಬೈಕ್ ತೆಗೆದುಕೊಳ್ಳುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಹಲವಾರು ಬೈಕ್ ಬಾಡಿಗೆ ಅಪ್ಲಿಕೇಶನ್‌ಗಳು ಲಭ್ಯವಿದೆ. ಅಂಥವುಗಳಲ್ಲಿ ಟಾಪ್ 5 ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯೋಣ ಬನ್ನಿ.

ಈ ಅಪ್ಲಿಕೇಶನ್‌ಗಳಲ್ಲಿ, ನೀವು 24 ಗಂಟೆಗಳು, 48 ಗಂಟೆಗಳು, 72 ಗಂಟೆಗಳು, ಒಂದು ವಾರ, ಒಂದು ತಿಂಗಳು ಸೇರಿದಂತೆ ವಿವಿಧ ಅಧಿಯವರೆಗೆ ಬೈಕ್ ಬಾಡಿಗೆಗೆ ಪಡೆಯಬಹುದು.

ಆ್ಯಪ್ ಹೇಗೆ ಕೆಲಸ ಮಾಡುತ್ತದೆ?: ಬೈಕ್​ ಬಾಡಿಗೆ ಅಪ್ಲಿಕೇಶನ್‌ಗಳನ್ನು ಬಳಸುವುದು ಸುಲಭ. ಈ ಅಪ್ಲಿಕೇಶನ್‌ಗಳು ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಬೈಕ್​ಗಳನ್ನು ಗ್ರಾಹಕರಿಗೆ ಒದಗಿಸುವ ಗುರಿ ಹೊಂದಿವೆ. ಬಳಕೆದಾರರಿಗೆ ತೊಂದರೆರಹಿತ ಮತ್ತು ಉತ್ತಮ ಅನುಭವ ಒದಗಿಸುತ್ತವೆ. ಹೆಚ್ಚಿನ ಅಪ್ಲಿಕೇಶನ್‌ಗಳು iOS ಮತ್ತು Android ಸ್ಮಾರ್ಟ್‌ಫೋನ್‌ಗಳನ್ನು ಬೆಂಬಲಿಸುತ್ತವೆ. ಮುಖ್ಯವಾಗಿ, ಈ ಅಪ್ಲಿಕೇಶನ್‌ಗಳ ಮೂಲಕ ಪಾವತಿಗಳನ್ನು ಸುರಕ್ಷಿತವಾಗಿ ಮಾಡಬಹುದು. ಆ್ಯಪ್​ ಬಳಕೆ ಮಾಡೋದು ಹೇಗೆ ತಿಳಿಯೋಣ.

  • ಹಂತ 1: ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿ ಮತ್ತು ಲಾಗಿನ್ ಮಾಡಿ.
  • ಹಂತ 2: ಬುಕಿಂಗ್ ದಿನಾಂಕ, ಪಿಕಪ್ ಸ್ಥಳ ನಮೂದಿಸಿ.
  • ಹಂತ 3: ಬೈಕ್‌ಗಳ ಪಟ್ಟಿಯಿಂದ ನಿಮ್ಮ ಆಯ್ಕೆಯ ದ್ವಿಚಕ್ರ ವಾಹನವನ್ನು ಆಯ್ಕೆ ಮಾಡಿ.
  • ಹಂತ 4: ನಿಮ್ಮ ಸ್ಥಳವನ್ನು ನಮೂದಿಸಿ ಮತ್ತು ಬೈಕ್ ಕಾಯ್ದಿರಿಸಿ.
  • ಹಂತ 5: ಪಾವತಿ ಮಾಡುವ ಮೊದಲು, ರಿವ್ಯೂವ್​ ಕಾರ್ಟ್ ಪುಟದಲ್ಲಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ.
  • ಹಂತ 6: ಅಂತಿಮವಾಗಿ, ಕಾಯ್ದಿರಿಸುವಿಕೆಯನ್ನು ದೃಢೀಕರಿಸಿ.
  • ಹಂತ 7: ಯಾವ ರೀತಿಯ ಬೈಕ್​ ಬಾಡಿಗೆಗೆ ತೆಗೆದುಕೊಳ್ಳಬಹುದು.
  • ಹಂತ 8: ಹೆಚ್ಚುವರಿ ಶುಲ್ಕಕ್ಕಾಗಿ ನಿಮ್ಮ ವಿಳಾಸಕ್ಕೆ ವಿತರಣೆ ಮಾಡುವ ವ್ಯವಸ್ಥೆ ಇದೆ.
  • ಹಂತ 9: ನಿಮ್ಮ ಕೆಲಸ ಮುಗಿದ ನಂತರ, ನೀವು ಬಾಡಿಗೆ ಪಡೆದ ಬೈಕ್ ಅ​ನ್ನು ಕಂಪನಿಗೆ ಹಸ್ತಾಂತರಿಸಿ.

ಟಾಪ್ 5 ಬೈಕ್ ಬಾಡಿಗೆ ಅಪ್ಲಿಕೇಶನ್‌ಗಳು:

1. Drivezy: ಸಣ್ಣ ಭದ್ರತಾ ಠೇವಣಿ ಪಾವತಿಸುವ ಮೂಲಕ ನೀವು Drivezyನಿಂದ ಬೈಕ್​ ಬಾಡಿಗೆಗೆ ಪಡೆಯಬಹುದು. ಈ ಬೈಕ್​ ಬಾಡಿಗೆ ಅಪ್ಲಿಕೇಶನ್‌ ಭಾರತದ 5 ಪ್ರಮುಖ ನಗರಗಳಾದ ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ದೆಹಲಿಯಲ್ಲಿ ಸೇವೆ ಒದಗಿಸುತ್ತಿದೆ. ಅಪ್ಲಿಕೇಶನ್ ಎಲ್ಲಾ Android ಫೋನ್ ಬಳಕೆದಾರರಿಗೆ ಲಭ್ಯ.

ಸೇವೆಗಳೇನು?:

  • ಹೋಮ್ ಪಿಕಪ್ ಮತ್ತು ಡ್ರಾಪ್ ಆಯ್ಕೆ.
  • ಮೊದಲ ಬಾರಿಗೆ ಕಾರು, ಬೈಕು, ಸ್ಕೂಟರ್ - ನೀವು ಬುಕ್ ಮಾಡುವ ಯಾವುದಾದರೂ ಮೇಲೆ 10% ರಿಯಾಯಿತಿ.
  • ಕಾರ್​ಗಳಲ್ಲಿ ಏರ್‌ಬ್ಯಾಗ್‌ಗಳು ಮತ್ತು ABSನಂತಹ ಸುರಕ್ಷತಾ ವೈಶಿಷ್ಟ್ಯಗಳು
  • ಈ ಅಪ್ಲಿಕೇಶನ್‌ನ ಪ್ರಸ್ತುತ ರೇಟಿಂಗ್- 2.4

2. Rent a Bike Howdy: ನೀವೇ ಬೈಕ್​ ಓಡಿಸಲು ಬಯಸಿದರೆ, ಈ ರೆಂಟ್ ಎ ಬೈಕ್ ಹೌಡಿ ಅಪ್ಲಿಕೇಶನ್‌ನಲ್ಲಿ ದ್ವಿಚಕ್ರ ವಾಹನವನ್ನು ಬುಕ್ ಮಾಡಬಹುದು. ಈ ಅಪ್ಲಿಕೇಶನ್ನಿನ "ಕಮ್ಯೂಟ್ ಮೋಡ್ ಫಂಕ್ಷನ್" ಮೂಲಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸಬಹುದು. ನೀವು ಬಯಸಿದ ಸ್ಥಳದಲ್ಲಿ ಕಾರ್ಟ್ ಅನ್ನು ಎತ್ತಿಕೊಂಡು ಇನ್ನೊಂದು ಸ್ಥಳದಲ್ಲಿ ಕಂಪನಿಗೆ ಹಿಂತಿರುಗಿಸಬಹುದು. ಪ್ರಯಾಣದ ದೂರ, ಖರ್ಚು ಮಾಡಿದ ಸಮಯ ಮತ್ತು ಮುಖ್ಯವಾಗಿ ಕೊಟ್ಟಿರುವ ವಾಹನಕ್ಕೆ ಹೆಲ್ಮೆಟ್ ನೀಡಲಾಗುತ್ತದೆ.

ಸೇವೆಗಳೇನು?:

  • ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ದೈನಂದಿನ, ವಾರ ಅಥವಾ ಮಾಸಿಕ ಆಧಾರದ ಮೇಲೆ ಬಾಡಿಗೆಗೆ ಪಡೆಯಬಹುದು.
  • ಪ್ರಸ್ತುತ ಈ ಅಪ್ಲಿಕೇಶನ್‌ನ ರೇಟಿಂಗ್: 3.1

3. Motorcycles ONN: ಈ ಅಪ್ಲಿಕೇಶನ್ ಮೂಲಕ ನಿಮ್ಮ ಆಯ್ಕೆಯ ಬೈಕ್​ ಬಾಡಿಗೆಗೆ ಪಡೆಯಬಹುದು. ಇದು ಸಾಮಾನ್ಯ ಬೈಕ್‌ಗಳು, ಸ್ಕೂಟರ್‌ಗಳು, ಇ-ಸ್ಕೂಟರ್‌ಗಳು ಮತ್ತು ಎಲೆಕ್ಟ್ರಿಕ್ ಬೈಕ್‌ಗಳನ್ನೂ ಸಹ ಒಳಗೊಂಡಿದೆ. ಆದಾಗ್ಯೂ, ಎಲೆಕ್ಟ್ರಿಕ್ ವಾಹನ ಸೇವೆಗಳು ಪ್ರಸ್ತುತ ಪುಣೆ ಮತ್ತು ಉದಯಪುರದಲ್ಲಿ ಮಾತ್ರ ಲಭ್ಯ.

ಸೇವೆಗಳೇನು?:

  • ಇದು ಭಾರತದ 6 ನಗರಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ.
  • ಪರಿಸರಸ್ನೇಹಿ ಅತ್ಯುತ್ತಮ ಎಲೆಕ್ಟ್ರಿಕ್ ಬೈಕ್​ಗಳು
  • ಬಾಡಿಗೆ ತುಂಬಾ ಕಡಿಮೆ.
  • ಪ್ರಸ್ತುತ ಅಪ್ಲಿಕೇಶನ್‌ನ ರೇಟಿಂಗ್: 3.2

4. Ride your bike: ಇದರ ಮೂಲಕ ನೀವು ಬೈಕ್​ಗಳು, ಸ್ವಯಂಚಾಲಿತ ಕಾರ್​ಗಳು, ಟ್ಯಾಕ್ಸಿಗಳನ್ನು ಕಾಯ್ದಿರಿಸಬಹುದು. ಇದು 4 ಸಮಯದ ಸ್ಲಾಟ್‌ಗಳನ್ನು ಹೊಂದಿದೆ. ಅಂದರೆ ನೀವು ಎಂಟು, ಹನ್ನೆರಡು, ಇಪ್ಪತ್ನಾಲ್ಕು, ನಲವತ್ತೆಂಟು ಗಂಟೆಗಳ ಕಾಲ ಬೈಕ್​ಗಳನ್ನು ಬಾಡಿಗೆಗೆ ಪಡೆಯಬಹುದು.

ಸೇವೆಗಳೇನು?:

  • ಇದರ ಸೇವೆಗಳು ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಲಭ್ಯವಿದೆ.
  • ಅನೇಕ ಬೈಕ್​ ಆಯ್ಕೆಗಳನ್ನು ಮಾಡಬಹುದು.
  • ಉಚಿತ ಹೆಲ್ಮೆಟ್ ನೀಡಲಾಗುತ್ತದೆ.
  • ಪ್ರಸ್ತುತ ಅಪ್ಲಿಕೇಶನ್‌ನ ರೇಟಿಂಗ್: 3.0

5. The Haunted Ride App: ನೀವು ಹಾರ್ಲೆ ಡೇವಿಡ್ಸನ್, ಅವೆಂಜರ್, ರಾಯಲ್ ಎನ್‌ಫೀಲ್ಡ್, ಕೆಟಿಎಂ ಡ್ಯೂಕ್, ಡುಕಾಟಿ ಮಾನ್‌ಸ್ಟರ್‌ನಂತಹ ಕ್ರೀಡಾ ಬೈಕ್‌ಗಳನ್ನು ಓಡಿಸಲು ಬಯಸಿದರೆ, ನೀವು ಈ ಹಾಂಟೆಡ್ ರೈಡ್ (The Haunted Ride) ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ಬ್ರ್ಯಾಂಡೆಡ್ ಹೈ-ಎಂಡ್ ಬೈಕ್​ಗಳನ್ನು ಬಾಡಿಗೆಗೆ ನೀಡುತ್ತದೆ.

ಸೇವೆಗಳೇನು?:

  • ದೀರ್ಘ ಪ್ರಯಾಣ ಬೆಂಬಲ
  • ವಿಮಾ ಸೌಲಭ್ಯ
  • ಯಾವುದೇ ಡೌನ್ ಪೇಮೆಂಟ್ ಇಲ್ಲದೇ ಪ್ರಯಾಣದ ಸಾಹಸ
  • Google Play Storeನಲ್ಲಿ ಈ ಅಪ್ಲಿಕೇಶನ್‌ನ ರೇಟಿಂಗ್: 2.7

ಇದನ್ನೂ ಓದಿ: ಕಡಿಮೆ ಬೆಲೆಯ ಕಾರು ಹುಡುಕುತ್ತಿದ್ದೀರಾ?: ಹಾಗಾದರೆ ಇವೇ ನೋಡಿ ಭಾರತದ ಟಾಪ್​ 10 ಅಗ್ಗದ ಕಾರುಗಳು - Cheapest Cars In India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.