ಮಿಲಿಯನೇರ್ ಮಗು!​: ಇನ್ಫಿ ಮೂರ್ತಿಯ 5 ತಿಂಗಳ ಮೊಮ್ಮಗನ ಶ್ರೀಮಂತಿಕೆ ₹4.2 ಕೋಟಿ ಹೆಚ್ಚಳ - Narayana Murthy Grandson

author img

By ETV Bharat Karnataka Team

Published : Apr 19, 2024, 4:53 PM IST

Infosys Founder Narayana Murthy's Grandson
Infosys Founder Narayana Murthy's Grandson ()

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಐದು ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಯ ಶ್ರೀಮಂತಿಕೆ 4.2 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.

ಹೈದರಾಬಾದ್: ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಐದು ತಿಂಗಳ ಮೊಮ್ಮಗ ಏಕಗ್ರಹ ರೋಹನ್ ಮೂರ್ತಿಗೆ 240 ಕೋಟಿ ರೂಪಾಯಿ ಮೌಲ್ಯದ 15 ಲಕ್ಷ ಇನ್ಫೊಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಈಗ ಈ ಷೇರುಗಳ ಮೇಲೆ ಇನ್ಫೊಸಿಸ್ ಲಾಭಾಂಶ ಘೋಷಣೆ ಮಾಡಿರುವುದರಿಂದ ಮೊಮ್ಮಗು ಏಕಗ್ರಹ ರೋಹನ್ ಮೂರ್ತಿ ಶ್ರೀಮಂತಿಕೆ 4.2 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶ ಮತ್ತು ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಲಾಭಾಂಶವನ್ನು ಇನ್ಫೋಸಿಸ್ ಮಂಡಳಿಯು ಶಿಫಾರಸು ಮಾಡಿದೆ. ಲಾಭಾಂಶವನ್ನು ಜುಲೈ 1ರಂದು ಪಾವತಿಸಲಾಗುವುದು.

ಕಳೆದ ತಿಂಗಳು ಕಂಪನಿಯು ಸಲ್ಲಿಸಿದ ನಿಯಂತ್ರಕ ಫೈಲಿಂಗ್ ಪ್ರಕಾರ, ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗನಿಗೆ 240 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಐದು ತಿಂಗಳ ಮಗು ಏಕಗ್ರಹ ಮೂರ್ತಿ ಐಟಿ ಕಂಪನಿ ಇನ್ಫೊಸಿಸ್​ನಲ್ಲಿ 15 ಲಕ್ಷ ಷೇರುಗಳನ್ನು ಅಥವಾ ಶೇಕಡಾ 0.04 ರಷ್ಟು ಪಾಲನ್ನು ಪಡೆದುಕೊಂಡಿದೆ. ಒಟ್ಟು 28 ರೂ.ಗಳ ಲಾಭಾಂಶದೊಂದಿಗೆ, ಏಕಗ್ರಹ ಮೂರ್ತಿ ಈಗ 4.2 ಕೋಟಿ ರೂ.ಗಳಷ್ಟು ಲಾಭ ಪಡೆಯಲು ಸಜ್ಜಾಗಿದ್ದಾರೆ.

77 ವರ್ಷದ ಇನ್ಫೋಸಿಸ್ ಸಂಸ್ಥಾಪಕ ತಮ್ಮ ಮೊಮ್ಮಗನಿಗೆ ಆಫ್-ಮಾರ್ಕೆಟ್ ವಹಿವಾಟಿನಲ್ಲಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದರೊಂದಿಗೆ, ಕಂಪನಿಯಲ್ಲಿ ನಾರಾಯಣ ಮೂರ್ತಿ ಅವರ ಷೇರಿನ ಪಾಲು ಶೇಕಡಾ 0.36 ಅಥವಾ 1.51 ಕೋಟಿ ಷೇರುಗಳಿಗೆ ಇಳಿಕೆಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ರೋಹನ್ ಮೂರ್ತಿ ಮತ್ತು ಪತ್ನಿ ಅಪರ್ಣಾ ಕೃಷ್ಣನ್ ಗಂಡು ಮಗುವಿಗೆ ಜನ್ಮ ನೀಡಿದ ನಂತರ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಮತ್ತು ಈಗ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅಜ್ಜ-ಅಜ್ಜಿಯಾದರು.

ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ದಂಪತಿಗೆ ನವೆಂಬರ್ 10ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದ ಏಕಗ್ರಹ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗುವಾಗಿದೆ. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗೆ ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಅವರ ಪುತ್ರಿಯರಾದ ಕೃಷ್ಣ ಮತ್ತು ಅನೌಷ್ಕಾ ಸುನಕ್ ಎಂಬ ಇಬ್ಬರು ಮೊಮ್ಮಕ್ಕಳಿದ್ದಾರೆ. ಇನ್ಫೋಸಿಸ್ ಮಾಲೀಕತ್ವದ ಬಗ್ಗೆ ನೋಡುವುದಾದರೆ- ಅಕ್ಷತಾ 1.05%, ಸುಧಾ 0.93% ಮತ್ತು ರೋಹನ್ 1.64% ಪಾಲನ್ನು ಹೊಂದಿದ್ದಾರೆ.

ಇದನ್ನೂ ಓದಿ: ರಿಯಲ್ ಮಿ Narzo 70X 5ಜಿ ಏ.24ರಂದು ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆಗಳೇನು? - Narzo 70X 5G

ETV Bharat Logo

Copyright © 2024 Ushodaya Enterprises Pvt. Ltd., All Rights Reserved.