ETV Bharat / business

ನಿತಿನ್ ಗಡ್ಕರಿ ಪ್ರಸ್ತಾವನೆ ಜಾರಿಯಾದರೆ 5 ರಿಂದ 6 ಲಕ್ಷದವರೆಗೆ ಇಳಿಕೆಯಾಗಲಿದೆ ಹೈಬ್ರಿಡ್​ ಕಾರಿನ ದರ! - Hybrid Car Tax Reduction

author img

By ETV Bharat Karnataka Team

Published : Mar 29, 2024, 4:44 PM IST

Hybrid Car Rates After Tax Reduction : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 48 ರಿಂದ ಶೇಕಡಾ 12 ಕ್ಕೆ ಇಳಿಸುವ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಸಿಟಿ ಹೈಬ್ರಿಡ್ ಮತ್ತು ಟೊಯೊಟಾ ಹೈರೈಡರ್ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ.

MARUTI SUZUKI GRAND VITARA  TAYOTA URBAN CRUISER HYRYDER  HONDA CITY HYBRID
5 ರಿಂದ 6 ಲಕ್ಷದವರೆಗೆ ಇಳಿಕೆಯಾಗಲಿದೆ ಹೈಬ್ರಿಡ್​ ಕಾರಿನ ದರ!

Hybrid Car Rates After Tax Reduction: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 48 ರಿಂದ ಶೇಕಡಾ 12 ಕ್ಕೆ ಇಳಿಸುವ ಪ್ರಸ್ತಾಪವನ್ನು ಮಾಡಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಅವರು ಈ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಅನುಮೋದಿಸಿದರೆ ಹೈಬ್ರಿಡ್ ವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ. ಅದರಲ್ಲೂ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಹೋಂಡಾ ಸಿಟಿಯಂತಹ ಹೈಬ್ರಿಡ್ ಕಾರುಗಳ ಬೆಲೆಗಳಲ್ಲಿ ಸಾಕಷ್ಟು ಇಳಿಕೆಯಾಗಲಿವೆ.

Maruti Suzuki Grand Vitara : ದೇಶೀಯ ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿ ಜನಪ್ರಿಯ ಹೈಬ್ರಿಡ್ ಕಾರ್ ಗ್ರ್ಯಾಂಡ್ ವಿಟಾರಾವನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು ರೂ. 20.09 ಲಕ್ಷಗಳು (ಎಕ್ಸ್ ಶೋ ರೂಂ). ಪ್ರಸ್ತುತ, ಈ ಕಾರಿನ ಮೇಲೆ ಶೇಕಡಾ 28 ರಷ್ಟು GST ಮತ್ತು ಶೇಕಡಾ 15ರಷ್ಟು ಸೆಸ್ ವಿಧಿಸಲಾಗುತ್ತಿದೆ. ಹಾಗಾಗಿ ಈ ಸಬ್ ಕಾಂಪ್ಯಾಕ್ಟ್ ಎಸ್​ಯುವಿ ಕಾರಿನ ಆನ್ ರೋಡ್ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಕೇಂದ್ರ ಸರ್ಕಾರವು ಹೈಬ್ರಿಡ್ ಕಾರುಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು ಶೇಕಡಾ 12 ಕ್ಕೆ ಇಳಿಸಿದರೆ, ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಲಿದೆ.

ಮೊದಲು ನಾವು ಗ್ರ್ಯಾಂಡ್ ವಿಟಾರಾದ ಎಕ್ಸ್-ಫ್ಯಾಕ್ಟರಿ ಬೆಲೆಯನ್ನು ತಿಳಿದುಕೊಳ್ಳಬೇಕು. ಪ್ರಸ್ತುತ ಮಾರುತಿ ಗ್ರ್ಯಾಂಡ್ ವಿಟಾರಾ ಎಕ್ಸ್ ಶೋ ರೂಂ ಬೆಲೆ ರೂ.20.09 ಲಕ್ಷದಿಂದ ಪ್ರಾರಂಭವಾಗುತ್ತದೆ. ಶೇಕಡಾ 28 ಜಿಎಸ್‌ಟಿ ಮತ್ತು ಶೇಕಡಾ 15 ಸೆಸ್ ಕಡಿತಗೊಳಿಸಿದಾಗ ಈ ಕಾರಿನ ಎಕ್ಸ್-ಫ್ಯಾಕ್ಟರಿ ಬೆಲೆ ರೂ.11.45 ಲಕ್ಷ ಆಗುತ್ತದೆ. ಇದಕ್ಕೆ ಪ್ರಸ್ತಾವಿತ 12 ಪ್ರತಿಶತ ಜಿಎಸ್‌ಟಿಯನ್ನು ಈ ಎಕ್ಸ್ - ಫ್ಯಾಕ್ಟರಿ ಬೆಲೆಗೆ ಸೇರಿಸಬೇಕು. ಈ ಮೂಲಕ ಗ್ರಾಂಡ್ ವಿಟಾರಾ ಎಕ್ಸ್ ಶೋ ರೂಂ ಬೆಲೆ 14.54 ಲಕ್ಷ ರೂ. ಅಂದರೆ ಶೇ.12ರಷ್ಟು ಜಿಎಸ್​ಟಿ ಇಳಿಕೆಯಾದರೆ ಕಾರಿನ ಬೆಲೆ ರೂ. 5.55 ಲಕ್ಷದವರೆಗೆ ಇಳಿಕೆಯಾಗಲಿದೆ. ಇದು ಕಾರು ಖರೀದಿದಾರರಿಗೆ ಆರ್ಥಿಕವಾಗಿ ತುಂಬಾ ಅನುಕೂಲಕರವಾಗಿದೆ. ಇದಲ್ಲದೇ, ಮಾರಾಟವೂ ಹೆಚ್ಚಾಗುವ ಸಾಧ್ಯತೆಯಿದೆ.

Tayota Urban Cruiser Hyryder : ಪ್ರಸ್ತುತ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಕ್ಸ್ ಶೋ ರೂಂ ಬೆಲೆ ರೂ.16.63 ಲಕ್ಷದಿಂದ ರೂ.20.19 ಲಕ್ಷದ ವ್ಯಾಪ್ತಿಯಲ್ಲಿದೆ. ಅಂದರೆ ಇದು ಮಾರುತಿ ಸುಜುಕಿ ಗ್ರಾಂಡ್ ವಿಟಾರಾಗಿಂತ ಸ್ವಲ್ಪ ಹೆಚ್ಚು (ರೂ. 10,000) ದುಬಾರಿಯಾಗಿದೆ. ನಾವು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆಯನ್ನು ಲೆಕ್ಕ ಹಾಕುವ ರೀತಿಯಲ್ಲಿಯೇ ಇದನ್ನು ಲೆಕ್ಕ ಹಾಕಿದರೆ, ಈ ಟೊಯೊಟಾ ಅರ್ಬನ್ ಹೈರೈಡರ್ ಬೆಲೆ ಸುಮಾರು ರೂ. 5 ರಿಂದ ರೂ.6 ಲಕ್ಷದವರೆಗೆ ಕಡಿಮೆ ಆಗಲಿದೆ.

Honda City Hybrid : ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಸೆಡಾನ್ ಕಾರು ಹೋಂಡಾ ಸಿಟಿ ಹೈಬ್ರಿಡ್ ಆಗಿದೆ. ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ ರೂ.20.39 ಲಕ್ಷಗಳು. ಇದರಿಂದ ಶೇ 28 ಜಿಎಸ್‌ಟಿ ಮತ್ತು ಶೇಕಡ 15 ಸೆಸ್ ಕಡಿತಗೊಳಿಸಿದರೆ, ಎಕ್ಸ್-ಫ್ಯಾಕ್ಟರಿ ಬೆಲೆ ಅಂದಾಜು ರೂ.14.37 ಲಕ್ಷಕ್ಕೆ ಬರುತ್ತದೆ. ಇದಕ್ಕೆ 12 ಪ್ರತಿಶತ ಜಿಎಸ್‌ಟಿ ಸೇರಿಸಿದರೆ, ಎಕ್ಸ್ ಶೋ ರೂಂ ಬೆಲೆ 18.25 ಲಕ್ಷ ರೂ. ಅಂದರೆ ಈಗಿನ ಬೆಲೆಗಿಂತ ರೂ.2.14 ಲಕ್ಷ ಕಡಿಮೆಗೆ ದೊರೆಯಲಿದೆ.

ಇಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬೆಲೆ ಸಾಕಷ್ಟು ಕಡಿಮೆಯಾಗಿದೆ. ಆದರೆ ಹೋಂಡಾ ಸಿಟಿ ಕಾರಿನ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಇದು ಮುಖ್ಯ ಕಾರಣ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳು ತಿಂಗಳಿಗೆ ಸರಾಸರಿ 12,000 ಯುನಿಟ್‌ಗಳಷ್ಟು ಮಾರಾಟವಾಗುತ್ತಿವೆ. ಹಾಗಾಗಿ ಮಾರುತಿ ಕಂಪನಿಗೆ ಕಡಿಮೆ ಮಾರ್ಜಿನ್ (ಲಾಭ) ಬಂದರೂ ಸಾಕು. ಆದರೆ ಹೋಂಡಾ ಸಿಟಿ ಹೈಬ್ರಿಡ್ ಮಾರಾಟ ತುಂಬಾ ಕಡಿಮೆ. ಹಾಗಾಗಿ ಹೋಂಡಾ ಕಂಪನಿಯು ತಮ್ಮ ಲಾಭಾಂಶವನ್ನು ಸ್ವಲ್ಪ ಹೆಚ್ಚಿಗೆ ಇರಿಸಿಕೊಳ್ಳುತ್ತದೆ.

ಓದಿ: ಕಡಿಮೆ ಬೆಲೆಯ ಕಾರು ಹುಡುಕುತ್ತಿದ್ದೀರಾ?: ಹಾಗಾದರೆ ಇವೇ ನೋಡಿ ಭಾರತದ ಟಾಪ್​ 10 ಕಾರುಗಳು - Cheapest Cars In India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.