ETV Bharat / business

ಚೀನಾದ ಆರ್ಥಿಕ ಬೆಳವಣಿಗೆ ಅಂದಾಜನ್ನು ಋಣಾತ್ಮಕಕ್ಕೆ ಇಳಿಸಿದ ಫಿಚ್ - China Economy

author img

By ETV Bharat Karnataka Team

Published : Apr 10, 2024, 2:11 PM IST

ಚೀನಾದ ಆರ್ಥಿಕ ಬೆಳವಣಿಗೆ ಕುಸಿಯಲಿದೆ ಎಂದು ಫಿಚ್ ರೇಟಿಂಗ್ ಏಜೆನ್ಸಿ ಅಂದಾಜು ಮಾಡಿದೆ.

Fitch cuts Chinas economic growth forecast to negative
Fitch cuts Chinas economic growth forecast to negative

ನ್ಯೂಯಾರ್ಕ್: ಚೀನಾದ ಸಾರ್ವಭೌಮ ಕ್ರೆಡಿಟ್ ರೇಟಿಂಗ್ ಕುರಿತಾದ ತನ್ನ ಅಂದಾಜನ್ನು ರೇಟಿಂಗ್ ಏಜೆನ್ಸಿ ಫಿಚ್ ಸ್ಥಿರದಿಂದ ಋಣಾತ್ಮಕಕ್ಕೆ ಪರಿಷ್ಕರಿಸಿದೆ. ಚೀನಾದ ಸಾರ್ವಜನಿಕ ಹಣಕಾಸು ದೃಷ್ಟಿಕೋನದ ಅಪಾಯಗಳು ಮತ್ತು ಆ ದೇಶವು ರಿಯಲ್ ಎಸ್ಟೇಟ್ ವಲಯದ ನೇತೃತ್ವದ ಬೆಳವಣಿಗೆಯಿಂದ ದೂರ ಸರಿಯುವ ವಿಷಯಗಳನ್ನು ಉಲ್ಲೇಖಿಸಿ ಫಿಚ್ ತನ್ನ ಅಂದಾಜನ್ನು ಪರಿಷ್ಕರಿಸಿದೆ.

ರೇಟಿಂಗ್ ಏಜೆನ್ಸಿಯ ಪ್ರಕಾರ ಆರ್ಥಿಕತೆಯೆ ಬೆಳವಣಿಗೆಯ ಅಂದಾಜು ಪರಿಷ್ಕರಣೆಯು ಚೀನಾದ ಸಾರ್ವಜನಿಕ ಹಣಕಾಸು ದೃಷ್ಟಿಕೋನಕ್ಕೆ ಹೆಚ್ಚುತ್ತಿರುವ ಅಪಾಯಗಳನ್ನು ಪ್ರತಿಬಿಂಬಿಸುತ್ತದೆ. ದೇಶವು "ಆಸ್ತಿ-ಅವಲಂಬಿತ" ಬೆಳವಣಿಗೆಯಿಂದ ಹೆಚ್ಚು ಸುಸ್ಥಿರ ಬೆಳವಣಿಗೆಯ ಮಾದರಿಯಾಗಿ ಬದಲಾಗುವ ನಡುವೆ ಹೆಚ್ಚು ಅನಿಶ್ಚಿತ ಆರ್ಥಿಕ ಭವಿಷ್ಯಗಳೊಂದಿಗೆ ಹೋರಾಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ವಿತ್ತೀಯ ಕೊರತೆಗಳು ಮತ್ತು ಹೆಚ್ಚುತ್ತಿರುವ ಸರ್ಕಾರಿ ಸಾಲವು ಹಣಕಾಸಿನ ಸಂಗ್ರಹಗಳನ್ನು ಕಡಿಮೆ ಮಾಡಿದೆ ಎಂದು ಫಿಚ್ ಅಭಿಪ್ರಾಯ ಪಟ್ಟಿದೆ. ಮುಂಬರುವ ವರ್ಷಗಳಲ್ಲಿ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಹಣಕಾಸಿನ ನೀತಿಯು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದ್ದು, ಇದು ಸಾಲವನ್ನು ಸ್ಥಿರವಾದ ಮೇಲ್ಮುಖ ಪ್ರವೃತ್ತಿಯಲ್ಲಿರಿಸಬಹುದು ಎಂದು ಫಿಚ್ ಪ್ರತಿಪಾದಿಸಿದೆ.

ಇದಲ್ಲದೆ ಬೆಳವಣಿಗೆ ಅಂದಾಜನ್ನು ಫಿಚ್ ರೇಟಿಂಗ್ ಏಜೆನ್ಸಿ ಕಡಿಮೆ ಮಾಡಿದ್ದು, ಇದು ಮಧ್ಯಮಾವಧಿಯಲ್ಲಿ ಕೆಳದರ್ಜೆಗೆ ಇಳಿಯುವ ಸಾಧ್ಯತೆಯಿದೆ. ರೇಟಿಂಗ್ ಏಜೆನ್ಸಿಯು ಚೀನಾದ ಐಡಿಆರ್ ರೇಟಿಂಗ್ ಅನ್ನು 'ಎ +' ನಲ್ಲಿ ಇಟ್ಟಿದೆ. ಚೀನಾದ 'ಎ +' ರೇಟಿಂಗ್ ಅದರ ದೊಡ್ಡ ಮತ್ತು ವೈವಿಧ್ಯಮಯ ಆರ್ಥಿಕತೆ, ಸಹವರ್ತಿಗಳಿಗೆ ಹೋಲಿಸಿದರೆ ಈಗಲೂ ದೃಢವಾಗಿರುವ ಜಿಡಿಪಿ ಬೆಳವಣಿಗೆಯ ನಿರೀಕ್ಷೆಗಳು, ಜಾಗತಿಕ ಸರಕುಗಳ ವ್ಯಾಪಾರದಲ್ಲಿ ಅವಿಭಾಜ್ಯ ಪಾತ್ರ, ದೃಢವಾದ ಬಾಹ್ಯ ಹಣಕಾಸು ಮತ್ತು ಯುವಾನ್​ನ ಮೀಸಲು ಕರೆನ್ಸಿ ಸ್ಥಿತಿಯಿಂದ ಬೆಂಬಲಿತವಾಗಿದೆ ಎಂದು ಫಿಚ್ ಹೇಳಿದೆ.

ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ಸರ್ಕಾರ ಪ್ರಯತ್ನಿಸುತ್ತಿರುವುದರಿಂದ ಚೀನಾದಲ್ಲಿ ಹಣಕಾಸಿನ ಹರಿವನ್ನು ಹೆಚ್ಚಿಸಲಾಗುತ್ತಿದೆ. 2023ರಲ್ಲಿ ಶೇ 5.8 ರಷ್ಟಿದ್ದ ಸಾಮಾನ್ಯ ಸರಕಾರದ ಕೊರತೆಯು 2024ರಲ್ಲಿ ಜಿಡಿಪಿಯ ಶೇ 7.1 ಕ್ಕೆ ಏರಿಕೆಯಾಗಲಿದೆ ಎಂದು ಫಿಚ್ ಅಂದಾಜಿಸಿದೆ. 2020 ರಿಂದ ವಿತ್ತೀಯ ಕೊರತೆಗಳು ಹೆಚ್ಚಾಗಿದ್ದು, ಇದು 2015-2019 ರ ಜಿಡಿಪಿ ಸರಾಸರಿಯ ಶೇಕಡಾ 3.1 ಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಫಿಚ್ ಹೇಳಿದೆ.

ಇದನ್ನೂ ಓದಿ : ಬಡತನ ರೇಖೆಯ ಕೆಳಗೆ ಜಾರಲಿದ್ದಾರೆ 1 ಕೋಟಿ ಪಾಕಿಸ್ತಾನಿಯರು: ವಿಶ್ವಬ್ಯಾಂಕ್ ಎಚ್ಚರಿಕೆ - WORLD BANK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.